IDBI Utsav Fixed Deposit Scheme: ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಐಡಿಬಿಐ ಬ್ಯಾಂಕ್ ತನ್ನ ಸೀಮಿತ ಅವಧಿಯ ಉತ್ಸವ ಎಫ್‌ಡಿ ಸ್ಕೀಮ್ ಅಡಿಯಲ್ಲಿ  300 ದಿನಗಳ ಎಫ್‌ಡಿ ಮೇಲೆ ಗರಿಷ್ಠ ಶೇ. 7.55 ರಷ್ಟು ಬಡ್ಡಿ ದರವನ್ನು ನೀಡುತ್ತಿದೆ. ಇಂತಹ  ಪರಿಸ್ಥಿತಿಯಲ್ಲಿ, ನೀವು ಕಡಿಮೆ ಸಮಯದಲ್ಲಿ ಎಫ್‌ಡಿಯಿಂದ ಉತ್ತಮ ಆದಾಯ ಗಳಿಕೆ ಮಾಡಲು ಯೋಜಿಸುತ್ತಿದ್ದರೆ, ನೀವು ನಿಮ್ಮ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಐಡಿಬಿಐ ಬ್ಯಾಂಕ್ 375 ಮತ್ತು 444 ದಿನಗಳ ಅವಧಿಯೊಂದಿಗೆ ಉತ್ಸವ ಎಫ್ಡಿಗಳ ಮೇಲೂ ಕೂಡ ಉತ್ತಮ ಬಡ್ಡಿಯನ್ನು ನೀಡುತ್ತಿದೆ. ಇದು ನಿಮಗೆ 375 ದಿನಗಳ ಅವಧಿಗೆ ಶೇ. 7.60 ಬಡ್ಡಿಯನ್ನು ಮತ್ತು 444 ದಿನಗಳ ಅವಧಿಗೆ ಶೇ. 7.75ರಷ್ಟು ಬಡ್ಡಿಯನ್ನು ನೀಡುತ್ತಿದೆ. ಉತ್ಸವ್ ಎಫ್ಡಿ ಯೋಜನೆಯು ಮಾರ್ಚ್ 31, 2024 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಅದಕ್ಕೂ ಮೊದಲು, ಈ ಅವಧಿಗಳಿಗೆ ಹೂಡಿಕೆ ಮಾಡುವ ಮೂಲಕ ನೀವು ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆಯಬಹುದು.  (Business News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-PMKMY Scheme: ಈ ಸರ್ಕಾರಿ ಯೋಜನೆಯಲ್ಲಿ, ರೈತರು ತಿಂಗಳಿಗೆ 55 ರೂ. ಹೂಡಿಕೆ ಮಾಡಿ, ಮಾಸಿಕ 3000 ಪಿಂಚಣಿ ಪಡೆಯಬಹುದು!


ಬ್ಯಾಂಕ್ ಯಾರಿಗೆ ಎಷ್ಟು ಬಡ್ಡಿಯನ್ನು ನೀಡುತ್ತಿದೆ?
ಈ ಯೋಜನೆಯಡಿಯಲ್ಲಿ, ಬ್ಯಾಂಕ್ ಸಾಮಾನ್ಯ ಹೂಡಿಕೆದಾರರಿಗೆ ಶೇ. 7.05ರಷ್ಟು ಮತ್ತು ಹಿರಿಯ ನಾಗರಿಕರಿಗೆ ಶೇ. 7.55 ರಷ್ಟು ಬಡ್ಡಿಯನ್ನು 300 ದಿನಗಳ ಅವಧಿಗೆ ನೀಡುತ್ತಿದೆ. 375 ದಿನಗಳ ಅವಧಿಯಲ್ಲಿ, ಸಾಮಾನ್ಯ ಹೂಡಿಕೆದಾರರು ಶೇ.7.10 ರಷ್ಟು ಮತ್ತು ಹಿರಿಯ ನಾಗರಿಕರು ಶೇ. 7.60ರಷ್ಟು ಬಡ್ಡಿಯನ್ನು ನೀಡುತ್ತಿದೆ. 444 ದಿನಗಳ ಅವಧಿಯ ಹೂಡಿಕೆಗಳಲ್ಲಿ, ಸಾಮಾನ್ಯ ಹೂಡಿಕೆದಾರರಿಗೆ ಶೇ. 7.25 ರಷ್ಟು ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ ಶೇ. 7.75 ರ ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. ಉತ್ಸವ್ ಎಫ್ಡಿ ಗಳು ಎಂದು ಕರೆಯಲ್ಪಡುವ ಎಫ್ಡಿ  ಅಡಿಯಲ್ಲಿ, ಬ್ಯಾಂಕ್ ಅಕಾಲಿಕವಾಗಿ ಹಿಂಪಡೆಯುವಿಕೆ ಮತ್ತು ಮುಚ್ಚುವಿಕೆಯ ಸೌಲಭ್ಯವನ್ನು ಒದಗಿಸುತ್ತಿದೆ. ಆದರೆ ಅದಕ್ಕೆ ಎನ್ ಆರ್ ಇ ಠೇವಣಿ ಸೌಲಭ್ಯ ಇಲ್ಲ.


ಇದನ್ನೂ ಓದಿ-DA Hike: ಸರ್ಕಾರ ನೌಕರರು, ಪಿಂಚಣಿದಾರರಿಗೆ ಜಾಕ್‌ಪಾಟ್ ಸುದ್ದಿ, ತಿಂಗಳ ಕೊನೆಗೆ ಕೈ ಸೇರುವುದು ಇಷ್ಟು ಹಣ!


ನಿಮ್ಮ ಹೂಡಿಕೆಗೆ ಎಷ್ಟು ಬಡ್ಡಿ ಸಿಗುತ್ತದೆ?
ಈ ಹೊಸ ಬಡ್ಡಿ ದರವನ್ನು ಪರಿಗಣಿಸಿ, ನೀವು 300 ದಿನಗಳ ಎಫ್‌ಡಿಯಲ್ಲಿ 5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, 300 ದಿನಗಳ ಅವಧಿಯಲ್ಲಿ ನೀವು 35,400 ರೂ.ಗಿಂತ ಹೆಚ್ಚಿನ ಬಡ್ಡಿ ಲಾಭವನ್ನು ಪಡೆಯುತ್ತೀರಿ. ಅಂದರೆ ನಿಮ್ಮ ಒಟ್ಟು ರಿಟರ್ನ್ ಮೌಲ್ಯ 5,35,400 ರೂ.ಗಿಂತ ಹೆಚ್ಚಾಗಿರುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.