ಮೊದಲನೇ ದಿನ ಅಬ್ಬರಿಸಿದ್ದ ಕಲ್ಕಿ ಎರಡನೇ ದಿನ ಸೈಲೆಂಟ್‌ ಆಗಿದ್ದೇಕೆ..?

Kalki 2898 AD: ಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪೌರಾಣಿಕ ವೈಜ್ಞಾನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೊಸ ದಾಖಲೆ ಬರೆದಿದೆ.  

Written by - Zee Kannada News Desk | Last Updated : Jun 29, 2024, 12:47 PM IST
  • ಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
  • ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಚಿತ್ರ ದೇಶಾದ್ಯಂತ ತೆರೆಕಂಡಿದ್ದು, ವಿದೇಶದಲ್ಲೂ ಜನಪ್ರಿಯತೆ ಗಳಿಸಿದೆ.
  • ಪ್ರಭಾಸ್ ಅಭಿನಯದ 'ಕಲ್ಕಿ' ಸಿನಿಮಾ ಮೊದಲ ದಿನವೇ 191 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಝಳಕೆ ಬೀರಿತು.
ಮೊದಲನೇ ದಿನ ಅಬ್ಬರಿಸಿದ್ದ ಕಲ್ಕಿ ಎರಡನೇ ದಿನ ಸೈಲೆಂಟ್‌ ಆಗಿದ್ದೇಕೆ..?  title=

Kalki 2898 AD: ಪ್ರಭಾಸ್ ನಟನೆಯ 'ಕಲ್ಕಿ 2898 AD' ಜೂನ್ 27 ರಂದು ಬಿಡುಗಡೆಗೊಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಪೌರಾಣಿಕ ವೈಜ್ಞಾನಿಕ ಶೈಲಿಯ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ಸು ಸಾಧಿಸಿದೆ. ಈ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ಹೊಸ ದಾಖಲೆ ಬರೆದಿದೆ.

ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಚಿತ್ರ ದೇಶಾದ್ಯಂತ ತೆರೆಕಂಡಿದ್ದು,  ವಿದೇಶದಲ್ಲೂ ಜನಪ್ರಿಯತೆ ಗಳಿಸಿದೆ. ವಿಶೇಷ ಸೆಟ್‌ಗಳು ಮತ್ತು ವಿ ಎಫ್‌ ಎಕ್ಸ್‌ಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ಪ್ರಭಾಸ್ ಅಭಿನಯದ 'ಕಲ್ಕಿ' ಸಿನಿಮಾ ಮೊದಲ ದಿನವೇ 191 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಝಳಕೆ ಬೀರಿತು. ಮೊದಲ ದಿನದ ವರಮಾನವನ್ನು ಲೆಕ್ಕಹಾಕಿದರೆ, ತೆಲುಗಿನಲ್ಲಿ 65.8 ಕೋಟಿ, ಹಿಂದಿಯಲ್ಲಿ 22.5 ಕೋಟಿ, ತಮಿಳಿನಲ್ಲಿ 4.5 ಕೋಟಿ, ಕನ್ನಡದಲ್ಲಿ 30 ಲಕ್ಷ, ಮತ್ತು ಮಲಯಾಳಂನಲ್ಲಿ 2.2 ಕೋಟಿ ರೂ. ಗಳಿಕೆಯಾಗಿದೆ.

ಎರಡನೇ ದಿನ, ಶುಕ್ರವಾರ, ಚಿತ್ರವು 54 ಕೋಟಿ ರೂಪಾಯಿ ಕಲೆಹಾಕಿದೆ. ಮೊದಲ ದಿನದ 191 ಕೋಟಿ ರೂ. ಗಳಿಕೆಗೆ ಹೋಲಿಸಿದರೆ ಇದು ಶೇ 50ರಷ್ಟು ಕಡಿಮೆಯಾಗಿದೆ. ಎರಡನೇ ದಿನದ ಲೆಕ್ಕಹಾಸಿಗೆ , ತೆಲುಗಿನಲ್ಲಿ 25.65 ಕೋಟಿ, ಹಿಂದಿಯಲ್ಲಿ 22.5 ಕೋಟಿ, ತಮಿಳಿನಲ್ಲಿ 3.5 ಕೋಟಿ, ಕನ್ನಡದಲ್ಲಿ 35 ಲಕ್ಷ ಮತ್ತು ಮಲಯಾಳಂನಲ್ಲಿ 2 ಕೋಟಿ ರೂ. ಗಳಿಸಿದೆ.

ಇದನ್ನೂ ಓದಿ: ಕಲ್ಕಿ 2898 ಎಡಿ ಡಿಜಿಟಲ್‌ ರೈಟ್ಸ್‌ ದಾಖಲೆ ಮೊತ್ತಕ್ಕೆ ಮಾರಾಟ! ಓಟಿಟಿ ರಿಲೀಸ್ ಯಾವಾಗ ಗೊತ್ತಾ?

ಈ ಕುಸಿತದ ನಡುವೆಯೂ, 'ಕಲ್ಕಿ 2898 AD' ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಈ ಚಿತ್ರವು ಹಲವು ದೊಡ್ಡ ಚಿತ್ರಗಳ ದಾಖಲೆಗಳನ್ನು ಮುರಿದಿದೆ. ಉದಾಹರಣೆಗೆ, 'ಕೆಜಿಎಫ್ 2', 'ಜವಾನ್', 'ಗದರ್ 2', 'ಬಾಹುಬಲಿ 2' ಮತ್ತು 'ಫೈಟರ್' ಚಿತ್ರಗಳನ್ನು ಹಿಂದಿಕ್ಕಿ, ಎರಡನೇ ದಿನವೂ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.

'ಕಲ್ಕಿ' ಒಟ್ಟು 8500 ಸ್ಕ್ರೀನ್‌ಗಳಲ್ಲಿ ಬಿಡುಗಡೆಗೊಂಡಿದ್ದು, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿದೆ. ಈ ಚಿತ್ರಕ್ಕೆ 600 ಕೋಟಿ ರೂ. ವೆಚ್ಚವಾಗಿದೆ. ಶುಕ್ರವಾರದ ಕಲೆಕ್ಷನ್‌ನಲ್ಲಿ ಕುಸಿತ ಕಂಡರೂ, ಶನಿವಾರ ಮತ್ತು ಭಾನುವಾರದ ವಾರಾಂತ್ಯದ ಲಾಭದಿಂದ 'ಕಲ್ಕಿ' ಚಿತ್ರವು ಮತ್ತಷ್ಟು ದಾಖಲೆಗಳನ್ನು ಮುರಿಯಬಹುದು ಎಂದು ಬಾಕ್ಸ್‌ ಆಫೀಸ್‌ ತಜ್ಞರು ಊಹಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News