ಬೆಂಗಳೂರು : ಸರ್ಕಾರಿ ಬ್ಯಾಂಕ್ ಉದ್ಯೋಗಿಗಳಿಗೊಂದು ಸಂತಸದ ಸುದ್ದಿ. ನೌಕರರ ವೇತನದಲ್ಲಿ 15 ಸಾವಿರ ರೂಪಾಯಿ ಹೆಚ್ಚಳವಾಗಲಿದೆ. ಇದರಿಂದ ಲಕ್ಷಾಂತರ ನೌಕರರು ಪ್ರಯೋಜನ ಪಡೆಯಲಿದ್ದಾರೆ. ಹೌದು, ಈಗ ಬ್ಯಾಂಕ್ ಉದ್ಯೋಗಿಗಳ ವೇತನ ಶೇಕಡಾ 17 ರಷ್ಟು ಹೆಚ್ಚಾಗಲಿದೆ. ಬ್ಯಾಂಕ್ ಅಸೋಸಿಯೇಷನ್ (ಐಬಿಎ) ಮತ್ತು ಬ್ಯಾಂಕ್ ನೌಕರರ ಒಕ್ಕೂಟಗಳ ನಡುವೆ ಒಪ್ಪಂದ ಅಂತಿಮಗೊಂಡಿದೆ. 


COMMERCIAL BREAK
SCROLL TO CONTINUE READING

ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಈ ಒಪ್ಪಂದವನ್ನು ಅನುಸರಿಸುವ ಮೂಲಕ ಬ್ಯಾಂಕ್ ಉದ್ಯೋಗಿಗಳ ಮೂಲ ವೇತನ, ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ವಾಹನ ಭತ್ಯೆ ಇತ್ಯಾದಿಗಳಲ್ಲಿ ಒಟ್ಟು ಶೇ.17 ರಷ್ಟು ಹೆಚ್ಚಳವಾಗಲಿದೆ. ಈ ವೇತನ ಪರಿಷ್ಕರಣೆಯು ಸಾರ್ವಜನಿಕ ಬ್ಯಾಂಕ್‌ಗಳು, ಖಾಸಗಿ ವಲಯದ ಬ್ಯಾಂಕ್‌ಗಳು ಮತ್ತು ಗ್ರಾಮೀಣ ಬ್ಯಾಂಕ್‌ಗಳಲ್ಲಿ ಅನ್ವಯಿಸುತ್ತದೆ.


ಇದನ್ನೂ ಓದಿ : ಹೀಗೆ ಬುಕ್ ಮಾಡಿದರೆ ಗ್ಯಾಸ್ ಸಿಲಿಂಡರ್ ಬೆಲೆಯ ಮೇಲೆಯೂ ಸಿಗುವುದು ರಿಯಾಯಿತಿ !


 ಬ್ಯಾಂಕ್ ಅಧಿಕಾರಿಗಳು ಮತ್ತು ನೌಕರರ ವೇತನ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಒಕ್ಕೂಟಗಳ ವಕ್ತಾರ ಹಾಗೂ ಗ್ರಾಮೀಣ ಬ್ಯಾಂಕ್ ಒಕ್ಕೂಟಗಳ ಜಂಟಿ ವೇದಿಕೆಯ ರಾಷ್ಟ್ರೀಯ ಸಂಚಾಲಕ ಡಿ.ಎನ್.ತ್ರಿವೇದಿ, ಎಸ್‌ಬಿಐ ಸಿಬ್ಬಂದಿ ಸಂಘದ ಪ್ರಧಾನ ಕಾರ್ಯದರ್ಶಿ ರಾಜುಕುಮಾರ್ ಸಿಂಗ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಸೋಸಿಯೇಷನ್‌ನ ಡಾ.ಕುಮಾರ್ ಅರವಿಂದ್ ಮೊದಲಾದವರು ಮಾಹಿತಿ ನೀಡಿದ್ದಾರೆ.  
 
 5,000 ರೂ.ನಿಂದ 15,000 ರೂ.ಗೆ ವೇತನ ಹೆಚ್ಚಳ : 
ಜುಲೈನಿಂದ ಸೆಪ್ಟೆಂಬರ್ 2021 ರ ತ್ರೈಮಾಸಿಕದಲ್ಲಿ ಸರಾಸರಿ ಬೆಲೆ ಸೂಚ್ಯಂಕದಲ್ಲಿ ಪಾವತಿಸಬೇಕಾದ ತುಟ್ಟಿಭತ್ಯೆಯನ್ನು ಮೌಲ್ಯ ವೇತನದಲ್ಲಿ ವಿಲೀನಗೊಳಿಸಲಾಗುವುದು. ಈ ವಿಲೀನದ ನಂತರ, ವೇತನ ಪರಿಷ್ಕರಣೆಯಲ್ಲಿ ಮೂರು ಪ್ರತಿಶತದಷ್ಟು ಹೆಚ್ಚುವರಿ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದರಿಂದಾಗಿ ಬ್ಯಾಂಕ್ ಉದ್ಯೋಗಿಗಳ ಮಾಸಿಕ ವೇತನ 5,000 ರೂ.ನಿಂದ 15,000 ರೂ. ಗೆ ಏರಿಕೆಯಾಗುವುದು. ಪಿಂಚಣಿಗೆ ಸಂಬಂಧಿಸಿದಂತೆ  31 ಅಕ್ಟೋಬರ್ 2022 ರವರೆಗೆ ಪಿಂಚಣಿದಾರರಿಗೆ ನಿಗದಿತ ಮಾಸಿಕ ಮೊತ್ತವನ್ನು (ಡಿಎ ಇಲ್ಲದೆ)  ನೀಡಲಾಗುವುದು. 


ಇದನ್ನೂ ಓದಿ : ಹೊಸ ವರ್ಷಕ್ಕೆ ಸರ್ಕಾರಿ ನೌಕರರಿಗೆ ಮೂರು ಗಿಫ್ಟ್ ನೀಡಲು ಸಜ್ಜಾದ ಕೇಂದ್ರ ಸರ್ಕಾರ ! ವೇತನ 63,000ಕ್ಕೆ ಏರಿಕೆ !


ವಾರದಲ್ಲಿ ಐದು ದಿನ ಕೆಲಸ : 
ಬ್ಯಾಂಕ್‌ ಸಿಬ್ಬಂದಿಗೆ ಸದ್ಯ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ರಜೆ ಇದೆ.  ಆದರೆ ಪ್ರತಿ ಶನಿವಾರವನ್ನು ರಜಾ ದಿನವನ್ನಾಗಿ ಘೋಷಿಸಬೇಕು ಎನ್ನವುದು ಬ್ಯಾಂಕ್ ನೌಕರರ ಆಗ್ರಹ. ಒಂದು ವೇಳೆ ಸರಕಾರ ಈ ಬೇಡಿಕೆಗೆ ಅಸ್ತು ಎಂದಲ್ಲಿ  ಕಾರ್ಪೊರೇಟ್‌ ಸಂಸ್ಥೆಗಳಂತೆ ಬ್ಯಾಂಕ್‌ ನೌಕರರಿಗೂ ವಾರಕ್ಕೆ ಐದು ದಿನಗಳ ಕೆಲಸ ಜಾರಿಯಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.