FD Interest Rate : ಭವಿಷ್ಯಕ್ಕಾಗಿ ಎಫ್‌ಡಿಯಲ್ಲಿ ಹೂಡಿಕೆ ಮಾಡುತ್ತಿದ್ದರೆ ಅಥವಾ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಈ ಸುದ್ದಿ ನಿಮಗೆ ಸಂತೋಷವನ್ನು ನೀಡುತ್ತದೆ. ಹೌದು, ಇತ್ತೀಚೆಗಷ್ಟೇ ನಡೆದ ಎಂಪಿಸಿ ಸಭೆಯಲ್ಲಿ ರೆಪೋ ದರವನ್ನು ಶೇ.6.5ರ ಹಳೆ ಮಟ್ಟದಲ್ಲಿಯೇ ಮುಂದುವರಿಸಲು ನಿರ್ಧರಿಸಲಾಗಿದೆ. ಆರ್ ಬಿಐ ಈ ನಿರ್ಧಾರದ ನಂತರ, ಕೆಲವು ಬ್ಯಾಂಕುಗಳು FD ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ. ಬ್ಯಾಂಕ್‌ಗಳು ಇತ್ತೀಚಿನ ದಿನಗಳಲ್ಲಿ ಅನುಸರಿಸುತ್ತಿರುವ ನೀತಿಯನ್ನು ನೋಡಿದರೆ ಎಫ್‌ಡಿ ಬಡ್ಡಿದರಗಳ ಹೆಚ್ಚಳದ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಎಂದು ತೋರುತ್ತದೆ. ಮುಂಬರುವ ಸಮಯದಲ್ಲಿ, ಇತರ ಬ್ಯಾಂಕ್‌ಗಳು ಎಫ್‌ಡಿ ದರಗಳಲ್ಲಿ ಹೆಚ್ಚಳವನ್ನು ಘೋಷಿಸಬಹುದು.


COMMERCIAL BREAK
SCROLL TO CONTINUE READING

FD ಮೇಲಿನ ಬಡ್ಡಿಯನ್ನು ಹೆಚ್ಚಿಸಿದ ಬ್ಯಾಂಕ್‌ಗಳು : 
ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 1, 2023 ರಿಂದ ಗ್ರಾಹಕರು ಮತ್ತು ಸಾಮಾನ್ಯ ಜನರಿಗೆ FD ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದೆ. 2 ಕೋಟಿಗಿಂತ ಹೆಚ್ಚು ಮತ್ತು 10 ಕೋಟಿಗಿಂತ ಕಡಿಮೆ ಇರುವ ಠೇವಣಿಗಳ ಮೇಲೆ ಈ ಹೆಚ್ಚಳ ಅನ್ವಯಿಸುತ್ತದೆ. ಬ್ಯಾಂಕ್ ಆಫ್ ಇಂಡಿಯಾ ತನ್ನ ನಿಶ್ಚಿತ ಠೇವಣಿ ದರಗಳನ್ನು ಅಲ್ಪಾವಧಿಗೆ ಹೆಚ್ಚಿಸಿದೆ. FD ಮೇಲಿನ ಬಡ್ಡಿ ದರವು 46 ದಿನಗಳಿಂದ 90 ದಿನಗಳವರೆಗೆ 5.25%, 91 ದಿನಗಳಿಂದ 179 ದಿನಗಳವರೆಗೆ 6.00%, 180 ದಿನಗಳಿಂದ 210 ದಿನಗಳವರೆಗೆ 6.25%, 211 ದಿನಗಳಿಗಿಂತ ಹೆಚ್ಚು ಮತ್ತು ಒಂದು ವರ್ಷಕ್ಕಿಂತ ಕಡಿಮೆ ಅವಧಿಗೆ 6.50%. ಬಡ್ಡಿಯನ್ನು ನೀಡಲಾಗುವುದು. ಅದೇ ರೀತಿ, ಒಂದು ವರ್ಷದ ಅವಧಿಯ ಬಡ್ಡಿ ದರವು ವಾರ್ಷಿಕ 7.25% ಆಗಿದೆ.


ಇದನ್ನೂ ಓದಿ : ITR ಸಲ್ಲಿಸುವ ಪ್ರಕ್ರಿಯೆಯಲ್ಲಿ ಬದಲಾವಣೆ ! ಇನ್ನು ಈ ಮಾಹಿತಿ ಕೂಡಾ ತಪ್ಪದೇ ನೀಡಬೇಕು !


ಕೋಟಕ್ ಮಹೀಂದ್ರಾ ಬ್ಯಾಂಕ್ : 
ಕೋಟಕ್ ಮಹೀಂದ್ರಾ ಬ್ಯಾಂಕ್ ಮೂರರಿಂದ ಐದು ವರ್ಷಗಳ ಅವಧಿಯ FDಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಿದೆ. ಹೊಸ ಬದಲಾವಣೆಯ ನಂತರ, ಕೋಟಕ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ಪಕ್ವವಾಗುವ ಎಫ್‌ಡಿಗಳಲ್ಲಿ ಸಾಮಾನ್ಯ ಗ್ರಾಹಕರಿಗೆ 2.75% ರಿಂದ 7.25% ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಈ ಠೇವಣಿಗಳ ಮೇಲೆ 3.35% ರಿಂದ 7.80% ವರೆಗೆ ಬಡ್ಡಿದರವನ್ನು ನೀಡಲಾಗುತ್ತಿದೆ. ಈ ಬದಲಾವಣೆಯನ್ನು ಬ್ಯಾಂಕ್ ಡಿಸೆಂಬರ್ 11, 2023 ರಿಂದ ಜಾರಿಗೆ ತಂದಿದೆ.


ಡಿಸಿಬಿ ಬ್ಯಾಂಕ್ :
ಡಿಸಿಬಿ ಬ್ಯಾಂಕ್ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಆಯ್ದ ಅವಧಿಗಳ ಎಫ್‌ಡಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಡಿಸಿಬಿ ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಹೊಸ ದರಗಳು ಡಿಸೆಂಬರ್ 13 ರಿಂದ ಜಾರಿಗೆ ಬಂದಿವೆ. ಬದಲಾವಣೆಯ ನಂತರ, ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ 8% ಮತ್ತು ಹಿರಿಯ ನಾಗರಿಕರಿಗೆ 8.60% FD ಬಡ್ಡಿ ದರವನ್ನು ನೀಡುತ್ತಿದೆ. ಬಡ್ಡಿದರದ ಬದಲಾವಣೆಯ ನಂತರ, DCB ಬ್ಯಾಂಕ್  7 ದಿನಗಳಿಂದ 10 ವರ್ಷಗಳವರೆಗಿನ ಎಫ್ ಡಿ ಮೇಲೆ ಸಾಮಾನ್ಯ ಗ್ರಾಹಕರಿಗೆ 3.75% ರಿಂದ 8% ವರೆಗೆ ಬಡ್ಡಿದರ ಮತ್ತು ಹಿರಿಯ ನಾಗರಿಕರಿಗೆ  4.25% ರಿಂದ 8.60% ವರೆಗೆ  ಬಡ್ಡಿಯನ್ನು ನೀಡುತ್ತದೆ.


ಇದನ್ನೂ ಓದಿ :  Pension Scheme: ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 7 ರೂ. ಹೂಡಿಕೆ ಮಾಡಿದರೆ 5 ಸಾವಿರ ಪಿಂಚಣಿ ಸಿಗಲಿದೆ!


ಫೆಡರಲ್ ಬ್ಯಾಂಕ್ : 
ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಡಿಸೆಂಬರ್ 5, 2023 ರಿಂದ ಬದಲಾಯಿಸಿದೆ. ಬ್ಯಾಂಕ್ 500 ದಿನಗಳವರೆಗೆ ಠೇವಣಿ ಮಾಡುವ ಮೊತ್ತದ ಮೇಲಿನ ಬಡ್ಡಿ ದರವನ್ನು 7.50% ಕ್ಕೆ ಹೆಚ್ಚಿಸಿದೆ. ಹಿರಿಯ ನಾಗರಿಕರಿಗೆ, ಫೆಡರಲ್ ಬ್ಯಾಂಕ್ 500 ದಿನಗಳ ಅವಧಿಗೆ ಗರಿಷ್ಠ 8.15% ಮತ್ತು 21 ತಿಂಗಳಿಗಿಂತ ಮೂರು ವರ್ಷಗಳಿಗಿಂತ ಕಡಿಮೆ ಅವಧಿಗೆ 7.80% ಬಡ್ಡಿಯನ್ನು ನೀಡುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.