ICICI Bank FD Rate Hike: ಇತ್ತೀಚೆಗೆ ಐಸಿಐಸಿಐ ಬ್ಯಾಂಕ್ ಆಯ್ದ ಅವಧಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಬ್ಯಾಂಕ್‌ನ ಬಡ್ಡಿದರ ಹೆಚ್ಚಳದ ನಂತರ, ICICI ಬ್ಯಾಂಕ್ ಸಾಮಾನ್ಯ ಗ್ರಾಹಕರಿಗೆ ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಪಕ್ವವಾಗುವ ಸ್ಥಿರ ಠೇವಣಿಗಳ ಮೇಲೆ 3% ರಿಂದ 7.2% ವರೆಗೆ ಮತ್ತು ಹಿರಿಯ ನಾಗರಿಕರಿಗೆ 3.5% ರಿಂದ 7.75% ವರೆಗೆ ಬಡ್ಡಿದರವನ್ನು ನೀಡುತ್ತಿದೆ. 15 ತಿಂಗಳಿಂದ ಎರಡು ವರ್ಷಗಳ ಅವಧಿಗೆ, ICICI ಬ್ಯಾಂಕ್ ಸಾಮಾನ್ಯ ಜನರಿಗೆ 7.20% ಮತ್ತು ಹಿರಿಯ ನಾಗರಿಕರಿಗೆ 7.75% ಗರಿಷ್ಠ ಆದಾಯವನ್ನು ನೀಡುತ್ತದೆ . ದರಗಳು ಫೆಬ್ರವರಿ 17 ರಿಂದ ಜಾರಿಗೆ ಬರುತ್ತಿದೆ. ಇದಕ್ಕೂ ಮುಂಚೆ ಈ ಬ್ಯಾಂಕ್  ಅಕ್ಟೋಬರ್ 16 2023 ರಂದು ಅವಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಪರಿಷ್ಕರಿಸಿತ್ತು.


COMMERCIAL BREAK
SCROLL TO CONTINUE READING

7 ದಿನಗಳಿಂದ 14 ದಿನಗಳು 3.00%


15 ದಿನಗಳಿಂದ 29 ದಿನಗಳು 3.00%


30 ದಿನಗಳಿಂದ 45 ದಿನಗಳು 3.50%


46 ದಿನಗಳಿಂದ 60 ದಿನಗಳು 4.25%


61 ದಿನಗಳಿಂದ 90 ದಿನಗಳು 4.50%


91 ದಿನಗಳಿಂದ 120 ದಿನಗಳು 4.75%


121 ದಿನಗಳಿಂದ 150 ದಿನಗಳು 4.75%


151 ದಿನಗಳಿಂದ 184 ದಿನಗಳು 4.75%


185 ದಿನಗಳಿಂದ 210 ದಿನಗಳು 5.75%


211 ದಿನಗಳಿಂದ 270 ದಿನಗಳು 5.75%


271 ದಿನಗಳಿಂದ 289 ದಿನಗಳು 6.00%


290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ 6.00%


1 ವರ್ಷದಿಂದ 389 ದಿನಗಳು 6.70%


390 ದಿನಗಳಿಂದ <15 ತಿಂಗಳುಗಳು 6.70%


15 ತಿಂಗಳಿಂದ < 18 ತಿಂಗಳು 7.20%


18 ತಿಂಗಳಿಂದ 2 ವರ್ಷಗಳವರೆಗೆ 7.20%


2 ವರ್ಷಗಳು 1 ದಿನದಿಂದ 3 ವರ್ಷಗಳು 7.00%


3 ವರ್ಷಗಳು 1 ದಿನದಿಂದ 5 ವರ್ಷಗಳು 7.00%


5 ವರ್ಷಗಳು 1 ದಿನದಿಂದ 10 ವರ್ಷಗಳು 6.90%


5 ವರ್ಷಗಳು (80C FD) - ಗರಿಷ್ಠ 1.50 ಲಕ್ಷ 7.00%


ಇದನ್ನೂ ಓದಿ: ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಭರ್ಜರಿ ಗಿಫ್ಟ್ ನೀಡಲು ಕೊನೆಯ ಸಂಪುಟ ಸಭೆಯಲ್ಲಿ ನಿರ್ಧಾರ


ಇತ್ತೀಚಿನ HDFC ಬ್ಯಾಂಕ್ FD ದರಗಳು


ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಸ್ಥಿರ ಠೇವಣಿಗಳ (ಎಫ್‌ಡಿ) ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ . ಹೊಸ ದರಗಳು ಫೆಬ್ರವರಿ 9 ರಿಂದ ಜಾರಿಗೆ ಬಂದಿದ್ದು, ಪ್ರಸ್ತುತ, HDFC ಬ್ಯಾಂಕ್ ವರ್ಷಕ್ಕೆ 3% ​​ನಿಂದ 7.25% ವರೆಗಿನ ಬಡ್ಡಿದರಗಳನ್ನು ನೀಡುತ್ತದೆ. ಹಾಗೆ ಹಿರಿಯ ನಾಗರಿಕರು ಎಲ್ಲಾ ಅವಧಿಗಳಲ್ಲಿ 0.50% ಹೆಚ್ಚುವರಿ ಬಡ್ಡಿ ದರಕ್ಕೆ ಅರ್ಹರಾಗಿರುತ್ತಾರೆ.


ಇತ್ತೀಚಿನ SBI  ಬ್ಯಾಂಕ್‌ನ FD ದರಗಳು


ಎಸ್‌ಬಿಐ ಸಾಮಾನ್ಯ ಜನರಿಗೆ ವರ್ಷಕ್ಕೆ 3.50%-7.10% ವರೆಗೆ ಮತ್ತು ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳವರೆಗೆ 4.00%-7.60% ಎಫ್‌ಡಿ ಬಡ್ಡಿ ದರಗಳನ್ನು ನೀಡುತ್ತದೆ. ಈ ದರಗಳು 27 ಡಿಸೆಂಬರ್ 2023 ರಿಂದ ಜಾರಿಗೆ ಬಂದಿದೆ.


ಇದನ್ನೂ ಓದಿ:  PPF, SSY, NPSಗಳಲ್ಲಿ ನಿಮ್ಮ ಖಾತೆ ಇದೆಯೇ? ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದಲ್ಲಿ ಆಗುವುದು ಭಾರೀ ನಷ್ಟ                                                         


ಕೊಟಕ್ ಮಹೀಂದ್ರಾ ಬ್ಯಾಂಕ್ ಇತ್ತೀಚಿನ FD ದರಗಳು


ಕೋಟಕ್ ಮಹೀಂದ್ರಾ ಬ್ಯಾಂಕ್ ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಪಕ್ವವಾಗುವ ಸ್ಥಿರ ಠೇವಣಿಗಳ ಮೇಲೆ 2.75% ರಿಂದ 7.25% ವರೆಗೆ ಬಡ್ಡಿದರವನ್ನು ನೀಡುತ್ತದೆ. 23 ತಿಂಗಳ 1 ದಿನ- 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳ ಮೇಲೆ ಬ್ಯಾಂಕ್ ಅತ್ಯಧಿಕ ಸ್ಥಿರ ಠೇವಣಿಯ ಬಡ್ಡಿ ದರವನ್ನು ನೀಡುತ್ತಿದೆ. ಈ ದರಗಳು 4 ಜನವರಿ 2024 ರಿಂದ ಜಾರಿಗೆ ಬಂದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.