ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಭರ್ಜರಿ ಗಿಫ್ಟ್ ನೀಡಲು ಕೊನೆಯ ಸಂಪುಟ ಸಭೆಯಲ್ಲಿ ನಿರ್ಧಾರ

Remunerative price of sugarcane: ಕಬ್ಬಿನ ನ್ಯಾಯಯುತ ಮತ್ತು ಸಮಂಜಸವಾದ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಕಬ್ಬಿನ ಹಂಗಾಮಿಗೆ ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025 ರ ಅವಧಿಯಲ್ಲಿ ಬೆಲೆಯನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ.

Written by - Bhavishya Shetty | Last Updated : Feb 22, 2024, 08:34 AM IST
    • ಕಬ್ಬಿನ ನ್ಯಾಯಯುತ ಲಾಭದಾಯಕ ಬೆಲೆಯನ್ನು ಹೆಚ್ಚಿಸಲು ಕೇಂದ್ರ ಸಂಪುಟ ಅನುಮೋದನೆ
    • ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್
    • ರೈತರ ಆದಾಯವನ್ನು ದ್ವಿಗುಣಗೊಳಿಸಲು ನರೇಂದ್ರ ಮೋದಿ ಸರ್ಕಾರ ಬದ್ಧ ಎಂದ ಸಚಿವ
ಕಬ್ಬು ಬೆಳೆಗಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಭರ್ಜರಿ ಗಿಫ್ಟ್ ನೀಡಲು ಕೊನೆಯ ಸಂಪುಟ ಸಭೆಯಲ್ಲಿ ನಿರ್ಧಾರ title=
Minimum Support Price for Sugarcane Growers

Remunerative price of sugarcane: ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಒ) ಕಾನೂನಾತ್ಮಕ ಖಾತರಿ ನೀಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳ ಮಧ್ಯೆ, ಕಬ್ಬಿನ ನ್ಯಾಯಯುತ ಲಾಭದಾಯಕ ಬೆಲೆಯನ್ನು ಕ್ವಿಂಟಲ್‌’ಗೆ 340 ರೂ.ಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಇದನ್ನೂ ಓದಿ: Gold Rate: ಮತ್ತೆ ಗಗನ ಕುಸುಮವಾಯ್ತು ಬಂಗಾರ… ಇಂದು ಎಷ್ಟಾಗಿದೆ ಗೊತ್ತಾ 10 ಗ್ರಾಂ ಚಿನ್ನದ ಬೆಲೆ?

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಕಬ್ಬಿನ ನ್ಯಾಯಯುತ ಮತ್ತು ಸಮಂಜಸವಾದ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಕಬ್ಬಿನ ಹಂಗಾಮಿಗೆ ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025 ರ ಅವಧಿಯಲ್ಲಿ ಬೆಲೆಯನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ರೈತರ ಆದಾಯವನ್ನು ದ್ವಿಗುಣಗೊಳಿಸಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ” ಎಂದು ಠಾಕೂರ್ ಹೇಳಿದರು.

ಇದನ್ನೂ ಓದಿ:  IPL 2024: ಹೊರಬಿತ್ತು ಐಪಿಎಲ್ ಸಂಬಂಧ ಬಿಗ್ ಅಪ್ಡೇಟ್: ಮೊದಲ ಹಂತದ ವೇಳಾಪಟ್ಟಿ ಇಂದು ಪ್ರಕಟ!

"ಕಳೆದ 10 ವರ್ಷಗಳಲ್ಲಿ, ರೈತರು ತಮ್ಮ ಬೆಳೆಗೆ ಸರಿಯಾದ ಬೆಲೆಯನ್ನು ಸರಿಯಾದ ಸಮಯದಲ್ಲಿ ಪಡೆಯುತ್ತಿದ್ದಾರೆ. ಹಿಂದಿನ ಋತು 2022-23ರ 99.5% ಕಬ್ಬಿನ ಬಾಕಿ ಮತ್ತು ಇತರ ಎಲ್ಲಾ ಋತುಗಳಲ್ಲಿ 99.9% ನಷ್ಟು ಹಣವನ್ನು ಈಗಾಗಲೇ ರೈತರಿಗೆ ಪಾವತಿಸಲಾಗಿದೆ. ಸರ್ಕಾರದ ಸಮಯೋಚಿತ ನೀತಿ ಮಧ್ಯಸ್ಥಿಕೆಗಳಿಂದ, ಸಕ್ಕರೆ ಕಾರ್ಖಾನೆಗಳು ಸ್ವಾವಲಂಬಿಯಾಗಿವೆ” ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News