ಬೆಂಗಳೂರು : ಕೇಂದ್ರ ಸರ್ಕಾರಿ ನೌಕರರು ಸರ್ಕಾರದ ಡಿಎ ಹೆಚ್ಚಳದ ನಿರ್ಧಾರದ ನಿರೀಕ್ಷೆಯಲ್ಲಿದ್ದಾರೆ. ಮಾರ್ಚ್ 1ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಇದರೊಂದಿಗೆ ತುಟ್ಟಿಭತ್ಯೆ ಶೇ.42ಕ್ಕೆ ಏರಿಕೆಯಾಗಲಿದೆ. ಹೀಗಾದಾಗ ಮಾರ್ಚ್ ತಿಂಗಳ ವೇತನದಲ್ಲಿ ಹೆಚ್ಚಿದ ಡಿಎ ಮತ್ತು ಬಾಕಿ ಎರಡರ ಲಾಭವನ್ನು ನೌಕರರು ಪಡೆಯಲಿದ್ದಾರೆ. 


COMMERCIAL BREAK
SCROLL TO CONTINUE READING

ಶೇಕಡಾ 4 ರಷ್ಟು ಹೆಚ್ಚಾಗಲಿರುವ ತುಟ್ಟಿಭತ್ಯೆ :
ಈ ಬಾರಿ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಾಗಲಿದೆ ಎಂಬುದು ಎಐಸಿಪಿಐ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತದೆ. ಮೂಲಗಳನ್ನು ನಂಬುವುದಾದರೆ, ಜನವರಿ 2023 ರಿಂದ, DA 42 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಇದರಿಂದ 52 ಲಕ್ಷ ಕೇಂದ್ರ ನೌಕರರು ಮತ್ತು 60 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ (ಜೆಸಿಎಂ) ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಅವರು 7ನೇ ವೇತನ ಆಯೋಗದ ಅಡಿಯಲ್ಲಿ ಪಡೆಯುವ ತುಟ್ಟಿಭತ್ಯೆ (ಡಿಎ) ಪ್ರಸ್ತುತ ಶೇಕಡಾ 38 ರಷ್ಟಿದ್ದು, ಈ ಬಾರಿ ಅದು ಶೇಕಡಾ 42 ಕ್ಕೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : ಶ್ರೀಘದಲ್ಲೇ ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಬಿಡುಗಡೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ?


ವೇತನ ಎಷ್ಟು ಹೆಚ್ಚಾಗುತ್ತದೆ? :
7ನೇ ವೇತನ ಆಯೋಗದ ಅಡಿಯಲ್ಲಿ, ನೌಕರರ ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಲೆಕ್ಕಾಚಾರವನ್ನು ಮೂಲ ವೇತನದ ಆಧಾರದ ಮೇಲೆ ಮಾಡಲಾಗುತ್ತದೆ. ಉದಾಹರಣೆಗೆ, ಮೂಲ ವೇತನವು  25,000 ರೂಪಾಯಿ ಆಗಿದ್ದರೆ, 42% ಡಿಎ ಯಂತೆ 10,500 ರೂಪಾಯಿ ಪಡೆಯುತ್ತಾರೆ. ಇದರ ಆಧಾರದ ಮೇಲೆ ಇತರ ಕೇಂದ್ರ ನೌಕರರ ಡಿಎ ಕೂಡಾ ಹೆಚ್ಚಾಗಲಿದೆ. ನಿಮ್ಮ ಮೂಲ ವೇತನ ಎಷ್ಟು ಎನ್ನುವುದರ ಆಧಾರದ ಮೇಲೆ ಈ ಲೆಕ್ಕಾಚಾರ ಮಾಡಬಹುದು. 


ಮೂಲ ವೇತನ: 18000 ರೂ. ಆಗಿದ್ದರೆ  
42% ಡಿಎ ಅಂದರೆ ತಿಂಗಳಿಗೆ 7560 ರೂ.


ಹಂತ 1 ಮೂಲ ವೇತನ :  25000 ರೂ. ಆಗಿದ್ದರೆ  
42% ಡಿಎ ಅಂದರೆ ತಿಂಗಳಿಗೆ  10500 ರೂ.


ಇದನ್ನೂ ಓದಿ : ನಿವೃತ್ತಿಯ ಬಳಿಕ ತಿಂಗಳಿಗೆ 70 ಸಾವಿರ ಪೆನ್ಷನ್ ಪಡೆಯಬೇಕೆ? ಇಲ್ಲಿದೆ ಅದ್ಭುತ ಯೋಜನೆ!


ವೇತನದಲ್ಲಿ ಆಗುವುದು ವ್ಯತ್ಯಾಸ : 
7 ನೇ ವೇತನ ಆಯೋಗದ ಅಡಿಯಲ್ಲಿ, ನಿಮ್ಮ ಮೂಲ ವೇತನ ರೂ.18,000 ಆಗಿದ್ದರೆ, ನೀವು 6,840 ರೂಪಾಯಿಯಷ್ಟು ತುಟ್ಟಿಭತ್ಯೆಯನ್ನು ಶೇಕಡಾ 38 ರ ದರದಲ್ಲಿ ಪಡೆಯುತ್ತೀರಿ. ಆದರೆ, ತುಟ್ಟಿಭತ್ಯೆ ಶೇ.42ಕ್ಕೆ ಏರಿದರೆ ಪಡೆಯುವ ಮೊತ್ತ ಕೂಡಾ 7,560 ರೂ.ಗೆ ಏರಿಕೆಯಾಗಲಿದೆ. ಅದೇ ರೀತಿ,  25,000 ರೂಪಾಯಿ ಮೂಲ ವೇತನವಾಗಿದ್ದರೆ, ಪ್ರಸ್ತುತ  9,500 ರೂಪಾಯಿ ತುಟ್ಟಿಭತ್ಯೆಯನ್ನು ಪಡೆಯುತ್ತಿರುತ್ತೀರಿ. ಆದರೆ ಡಿಎ ಶೇ.42  ಆದರೆ ಈ ಮೊತ್ತ 10500 ರೂ.ಗೆ ಏರಿಕೆಯಾಗಲಿದೆ.


( ಗಮನಿಸಿ: ಇಲ್ಲಿ ಉದಾಹರಣೆಯ ರೂಪದಲ್ಲಿ DA ಯ ಲೆಕ್ಕಾಚಾರವನ್ನು ಮಾಡಲಾಗಿದೆ. ಡಿಎ ಹೆಚ್ಚಳವು ಇತರ ಭತ್ಯೆಗಳ ಮೇಲೂ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಂತಿಮ ಲೆಕ್ಕಾಚಾರದಲ್ಲಿ ವ್ಯತ್ಯಾಸವಾಗಬಹುದು. )


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.