Home Insurance Scheme: ಪ್ರವಾಹ, ಭೂಕಂಪದಿಂದ ಮನೆ ಹಾನಿಗೊಳಗಾದರೆ ಸಿಗಲಿದೆ 3 ಲಕ್ಷ ರೂಪಾಯಿ!
Home Insurance Scheme: ಮೋದಿ ಸರ್ಕಾರವು ಗೇಮ್ ಚೇಂಜರ್ ಗೃಹ ವಿಮಾ ಯೋಜನೆಯನ್ನು ಜಾರಿಗೊಳಿಸಲಿದ್ದು, ಇದರ ಪ್ರೀಮಿಯಂ ಕೇವಲ 500 ರೂ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಈ ಯೋಜನೆಯು ಜನರಿಗೆ ಮತ್ತು ವಿಮಾ ಕಂಪನಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ.
ನವದೆಹಲಿ: Home Insurance Scheme- ಪ್ರತಿ ವರ್ಷ ಪ್ರವಾಹ, ಭೂಕಂಪಗಳು ಅಥವಾ ಯಾವುದೇ ರೀತಿಯ ನೈಸರ್ಗಿಕ ವಿಪತ್ತಿನಿಂದ ಲಕ್ಷಾಂತರ ಮನೆಗಳು ನಾಶವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಹಲವರಿಗೆ ಮತ್ತೆ ತಮ್ಮ ಮನೆ ಪಡೆಯುವುದು ಕಷ್ಟಕರವಾಗಿದೆ. ಇಂತಹವರಿಗೆ ಸಹಾಯಕವಾಗಲೆಂದು ಕೇಂದ್ರ ಸರ್ಕಾರವು ಈಗ ಗೃಹ ವಿಮೆಗೆ ಸಂಬಂಧಿಸಿದ ಅತ್ಯಂತ ದೊಡ್ಡ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (Pradhan Mantri Jeevan Jyoti Bima Yojana) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗಳ (Pradhan Mantri Suraksha Bima Yojana) ಮೂಲಕ ಕೋಟ್ಯಂತರ ಜನರ ಜೀವಕ್ಕೆ ರಕ್ಷಣೆ ನೀಡಿದ ನಂತರ, ಈಗ ಕೇಂದ್ರ ಸರ್ಕಾರವು ನಿಮ್ಮ ಮನೆಗೆ ವಿಮಾ ಯೋಜನೆಯನ್ನು ಒದಗಿಸಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ- PM Kisan: ಈ ರೈತರು ಪಿಎಂ ಕಿಸಾನ್ ಯೋಜನೆ ಹಣ ವಾಪಸ್ ನೀಡಬೇಕಾಗುತ್ತೆ! ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ?
ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಕೇಂದ್ರ ಸರ್ಕಾರವು ಮನೆ ವಿಮಾ ಯೋಜನೆಯ (Home Insurance Scheme) ಮೂಲಕ ಪ್ರವಾಹ, ಭೂಕಂಪದಂತಹ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಜನರ ಮನೆಗಳಿಗೆ ಉಂಟಾದ ಹಾನಿಯನ್ನು ಸರಿದೂಗಿಸಲು ರೂ .3,00,000 ವಿಮಾ ರಕ್ಷಣೆಯನ್ನು ಒದಗಿಸುತ್ತದೆ.
ಇದರೊಂದಿಗೆ 3,00,000 ರೂ.ಗಳ ಈ ವ್ಯಾಪ್ತಿಯೊಂದಿಗೆ ಗೃಹೋಪಯೋಗಿ ವಸ್ತುಗಳು ಅಥವಾ ಸಾಮಗ್ರಿಗಳಿರೂ ವಿಮೆ ಲಭ್ಯವಾಗಲಿದೆ ಮತ್ತು ಪಾಲಿಸಿಯನ್ನು ತೆಗೆದುಕೊಳ್ಳುವ ಕುಟುಂಬದ ಇಬ್ಬರು ಸದಸ್ಯರಿಗೆ 3 ಲಕ್ಷ ರೂ.ಗಳವರೆಗೆ ವೈಯಕ್ತಿಕ ಅಪಘಾತ ವಿಮೆ ಸೌಲಭ್ಯವನ್ನು ನೀಡಲಾಗುವುದು ಎಂದು ತಿಳಿದುಬಂದಿದೆ.
ಇದನ್ನೂ ಓದಿ- PM Awas Yojana 2021 : ಪಿಎಂ ಆವಾಸ್ ಯೋಜನೆಯಲ್ಲಿ ಮತ್ತೊಂದು ಸೌಲಭ್ಯ : ಈ ಲಾಭ ಪಡೆಯುವುದು ಹೇಗೆ ಇಲ್ಲಿದೆ!
ಪ್ರೀಮಿಯಂ ಎಷ್ಟು ಇರುತ್ತದೆ?
ಸ್ವೀಕರಿಸಿದ ಮಾಹಿತಿಯ ಪ್ರಕಾರ, ಪಾಲಿಸಿಗೆ ಸಂಬಂಧಿಸಿದಂತೆ ಈಗಾಗಲೇ ಒಂದು ಸಮಗ್ರ ಚೌಕಟ್ಟನ್ನು ಸಿದ್ಧಪಡಿಸಲಾಗಿದೆ. ಪ್ರೀಮಿಯಂ ಗೆ ಸಂಬಂಧಿಸಿದ ನಿರ್ಧಾರದಿಂದಾಗಿ ಯೋಜನೆ ವಿಳಂಬವಾಗುತ್ತಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ಸಾಮಾನ್ಯ ವಿಮಾ ಕಂಪನಿಗಳಿಂದ ಪ್ರತಿ ಪಾಲಿಸಿಗೆ ಕೊಟೇಶನ್ ಅನ್ನು 1,000 ರೂ.ಗಿಂತ ಹೆಚ್ಚಿಗೆ ನೀಡಲಾಗಿದೆ. ಆದರೆ ಇದನ್ನು 500 ರೂಪಾಯಿಗೆ ಸೀಮಿತಗೊಳಿಸಲು ಕೇಂದ್ರ ಸರ್ಕಾರ (Central Govt) ಬಯಸಿದೆ. ಇದು ಖಾಸಗಿ ಮತ್ತು ಸರ್ಕಾರಿ ಕಂಪನಿಗಳನ್ನು ಒಳಗೊಂಡಿದೆ. ಖಾಸಗಿ ಕಂಪನಿಗಳು ಪ್ರೀಮಿಯಂ ಅನ್ನು ಕಡಿಮೆ ಮಾಡದಿದ್ದರೆ, ಈ ಯೋಜನೆಯನ್ನು ಸರ್ಕಾರಿ ಕಂಪನಿಗಳ ಮೂಲಕ ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು. ಆದಾಗ್ಯೂ, ವಿಮಾ ಕಂಪನಿಗಳೊಂದಿಗೆ ಪ್ರೀಮಿಯಂಗೆ ಸಂಬಂಧಿಸಿದಂತೆ ಸರ್ಕಾರದ ಮಾತುಕತೆಗಳು ಇನ್ನೂ ನಡೆಯುತ್ತಿವೆ ಎನ್ನಲಾಗಿದೆ.
ಹೋಮ್ ಇನ್ಶೂರೆನ್ಸ್ ಪ್ಲಾನ್ ಒಂದು ಗೇಮ್ ಚೇಂಜರ್ ಎಂದು ಸಾಬೀತಾಗುತ್ತದೆಯೇ?
ನಮ್ಮ ದೇಶದಲ್ಲಿ ಹೋಮ್ ಇನ್ಶೂರೆನ್ಸ್ ಬಗ್ಗೆ ಆರೋಗ್ಯ ವಿಮೆ, ಜೀವ ವಿಮೆಯ ಬಗ್ಗೆ ಇರುವಷ್ಟು ಜಾಗೃತಿ ಇಲ್ಲ. ಸರ್ಕಾರದ ಈ ಯೋಜನೆಯು ಗ್ರಾಹಕ ಮತ್ತು ವಿಮಾ ಕಂಪನಿಗಳೆರಡಕ್ಕೂ ಒಂದು ಗೇಮ್ ಚೇಂಜರ್ ಎಂದು ಸಾಬೀತುಪಡಿಸಬಹುದು. ಈ ಯೋಜನೆಯಲ್ಲಿ ಸರ್ಕಾರ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರದ ಯೋಜನೆ ಸಾಮಾನ್ಯ ವಿಮಾ ಕಂಪನಿಗಳ ಮೂಲಕ ಇರುತ್ತದೆ ಮತ್ತು ಅದರ ಪ್ರೀಮಿಯಂ ಅನ್ನು PMJJY ಮತ್ತು PMSBY ಯೋಜನೆಗಳಲ್ಲಿ ಮಾಡಿದಂತೆ ಜನರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.