ನವದೆಹಲಿ: Motor Insurance Claim - ತನ್ನ ಗ್ರಾಹಕರಿಗೆ ಉತ್ತಮ ಕ್ಲೈಮ್ ಸೆಟಲ್ಮೆಂಟ್ ಅನುಭವವನ್ನು ಒದಗಿಸಲು, ಎಸ್‌ಬಿಐ ಜನರಲ್ ಇನ್ಶುರೆನ್ಸ್ (SBI General Insurance) ಮೋಟಾರ್ ವಿಮಾ ಗ್ರಾಹಕರಿಗೆ ಫಾಸ್ಟ್‌ಲೇನ್ ಕ್ಲೈಮ್ ಸೆಟಲ್ಮೆಂಟ್ (Fast Lane Claim Settlement) ಅನ್ನು ಪ್ರಾರಂಭಿಸಿದೆ. ಇದನ್ನು ಮೌಲ್ಯವರ್ಧಿತ ಸೇವೆಯಾಗಿ ಪರಿಚಯಿಸಲಾಗಿದೆ. ಇದರ ಅಡಿಯಲ್ಲಿ, ಗ್ರಾಹಕರ ಹಕ್ಕುಗಳ ಇತ್ಯರ್ಥವನ್ನು ಶೀಘ್ರದಲ್ಲೇ ಮತ್ತು ಕಡಿಮೆ ಸಮಯದಲ್ಲಿ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ಮೌಲ್ಯವರ್ಧಿತ ಸೇವೆಯಾಗಿ, ಗ್ರಾಹಕರು ತಮ್ಮ ಕಡಿಮೆ ಮೌಲ್ಯದ ಕ್ಲೇಮ್ ಗಳನ್ನೂ ತಕ್ಷಣದಲ್ಲಿಯೇ ಪಡೆಯಲಿದ್ದಾರೆ ಎಂದು ವಿಮಾ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ. ಇದರಿಂದ ಗ್ರಾಹಕರ ಸೆಟಲ್ಮೆಂಟ್ ಅವಧಿ ಕೆಲವೇ ನಿಮಿಷಗಳಿಗೆ ಇಳಿಕೆಯಾಗಲಿದೆ ಎಂದು ಕಂಪನಿ ಹೇಳಿದೆ.
ಫಾಸ್ಟ್‌ಲೇನ್ ಕ್ಲೈಮ್ ಸೆಟಲ್ಮೆಂಟ್ ಬಿಡುಗಡೆಯ ಸಂದರ್ಭದಲ್ಲಿ ಮಾಹಿತಿ ನೀಡಿರುವ ಎಸ್‌ಬಿಐ ಜನರಲ್ ಇನ್ಶುರೆನ್ಸ್, ಹೆಡ್ ಕ್ಲೈಮ್ಸ್ & ಡಿಜಿಟಲ್, ಅತುಲ್ ದೇಶಪಾಂಡೆ, ಎಸ್‌ಬಿಐ ಜನರಲ್‌ನಲ್ಲಿ, ತಾವು ಯಾವಾಗಲೂ ಗ್ರಾಹಕ ಕೇಂದ್ರಿತ ಪರಿಹಾರಗಳನ್ನು ಒದಗಿಸುವತ್ತ ಹೆಚ್ಚಿನ ಗಮನ ಹರಿಸಿರುವುದಾಗಿ ಹೇಳಿದ್ದಾರೆ. ಇದರಿಂದ ಗ್ರಾಹಕರ ತೃಪ್ತಿ ಖುಷಿಯಲ್ಲಿ ಪರಿವರ್ತನೆಯಾಗುತದೆ ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ. ಗ್ರಾಹಕರ ಅನುಭವವನ್ನು ಹೆಚ್ಚಿಸುವಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಪರಿಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ತಾವು ಬಲವಾಗಿ ನಂಬುವುದಾಗಿ ಅವರು ಹೇಳಿದ್ದಾರೆ. ಫಾಸ್ಟ್‌ಲೇನ್ ಕ್ಲೇಮ್ ಸೆಟಲ್ಮೆಂಟ್ ನೊಂದಿಗೆ, ತಾವು ಮೋಟಾರು ವಾಹನ ಹಕ್ಕುಗಳ ಇತ್ಯರ್ಥಕ್ಕೆ ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುವ ಮತ್ತು ಇದರಿಂದಾಗಿ ಭೌತಿಕ ತಪಾಸಣೆ, ದಾಖಲಾತಿಗೆ ಅಗತ್ಯವಾದ ಸಮಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ-RBI New Rule For FD Deposit - FD ಯಲ್ಲಿ ಹೂಡಿಕೆ ಮಾಡುವ ಮೊದಲು RBIನ ಈ ಹೊಸ ನಿಯಮ ನಿಮಗೆ ತಿಳಿದಿರಲಿ
ಎಸ್‌ಬಿಐ ಜನರಲ್ ವೇಗವಾಗಿ ಬೆಳೆಯುತ್ತಿರುವ ಖಾಸಗಿ ಸಾಮಾನ್ಯ ವಿಮಾ ಕಂಪನಿಗಳಲ್ಲಿ ಒಂದಾಗಿದೆ, ಇದರಲ್ಲಿ ಎಸ್‌ಬಿಐ (State Bank Of India) ಬಲವಾದ ಪಾಲನ್ನು ಹೊಂದಿದೆ. ಕಂಪನಿಯು ಪ್ರಸ್ತುತ ಮೂರು ಗ್ರಾಹಕ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಚಿಲ್ಲರೆ ವಿಭಾಗ (ವ್ಯಕ್ತಿಗಳು ಮತ್ತು ಕುಟುಂಬಗಳಿಗೆ), ಕಾರ್ಪೊರೇಟ್ ವಿಭಾಗ (ಮಾಧ್ಯಮದಿಂದ ದೊಡ್ಡ ಗಾತ್ರದ ಕಂಪನಿಗಳಿಗೆ) ಮತ್ತು ಎಸ್‌ಎಂಇ ವಿಭಾಗ ಶಾಮೀಲಾಗಿವೆ.
ಇದನ್ನೂ ಓದಿ- Income Tax Day 2021: ತೆರಿಗೆ ಪಾವತಿದಾರರಿಗೆ ಅಧ್ಬುತ ಕೊಡುಗೆ ಪ್ರಕಟಿಸಿದ SBI
ಭಾರತದಲ್ಲಿ ವಾಹನವನ್ನು ಖರೀದಿಸುವ ಪ್ರತಿಯೊಬ್ಬ ವ್ಯಕ್ತಿಯು ವಾಹನ ವಿಮೆಯನ್ನು ಖರೀದಿಸುವುದು ಕಡ್ಡಾಯವಾಗಿದೆ, ಅಂದರೆ ಮೋಟಾರ್ ವಿಮಾ ಪಾಲಿಸಿ. ಇದು ಕಾರು, ದ್ವಿಚಕ್ರ ಅಥವಾ ವಾಣಿಜ್ಯ ವಾಹನ ಮೂರಕ್ಕೂ ಅನ್ವಯಿಸುತ್ತದೆ. ಮೋಟಾರು ವಾಹನ ಕಾಯ್ದೆ 1988 ರ (Motor Vehicle Act 1988) ಪ್ರಕಾರ ವಿಮಾ ಇಲ್ಲದ ಮೋಟಾರು ವಾಹನವನ್ನು ಸಾರ್ವಜನಿಕ ಸ್ಥಳದಲ್ಲಿ ಓಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-RBI New Rules : ವೈಯಕ್ತಿಕ ಸಾಲದ ನಿಯಮಗಳನ್ನು ಬದಲಾವಣೆ ಮಾಡಿದ RBI : ಈಗ ನೀವು ಎಷ್ಟು ಸಾಲ ಪಡೆಯಬಹುದು?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ