ನವದೆಹಲಿ: ಗೃಹ ಸಾಲ(Home Loan) ಪಡೆಯುವವರಿಗೆ ಲಾಭದ ಸುದ್ದಿಯೊಂದು ಇಲ್ಲಿದೆ.  ಗೃಹ ಸಾಲದಿಂದ ಹೆಚ್ಚಿನ ಪ್ರಯೋಜನ ಪಡೆಯಲು ನಿಮಗೆ ಕೇವಲ 1 ದಿನ ಮಾತ್ರ ಬಾಕಿಯಿದೆ. ವಾಸ್ತವವಾಗಿ ಮಾರ್ಚ್ 31ರ ನಂತರ ಗೃಹ ಸಾಲದ ಮೇಲೆ ಲಭ್ಯವಿರುವ ಹೆಚ್ಚುವರಿ ತೆರಿಗೆ ವಿನಾಯಿತಿ(Tax Deduction)ಆಫರ್ ಕೊನೆಗೊಳ್ಳುತ್ತದೆ.


COMMERCIAL BREAK
SCROLL TO CONTINUE READING

ಗಮನಾರ್ಹವಾಗಿ 2019ರ ಬಜೆಟ್‌ನಲ್ಲಿ ಸರ್ಕಾರವು ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ವಿಭಾಗವನ್ನು ಸೇರಿಸಿದೆ. ಹೊಸ ವಿಭಾಗದಡಿ ಮನೆ ಖರೀದಿಯ ಮೇಲೆ ಗೃಹ ಸಾಲ ಪಡೆಯುವ ಗ್ರಾಹಕರಿಗೆ ಹೆಚ್ಚುವರಿ ತೆರಿಗೆ ವಿನಾಯಿತಿ(Tax Deduction Calculation) ನೀಡಲಾಯಿತು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80EEA ಅಡಿ ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿಯ ಮೇಲೆ 1.5 ಲಕ್ಷ ರೂ. ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಲಾಗುತ್ತದೆ.


ಇದನ್ನೂ ಓದಿ: ಏಪ್ರಿಲ್ ನಿಂದ ಬದಲಾಗಲಿದೆ ಈ ಬ್ಯಾಂಕ್ ಗಳ ನಿಯಮ, ಗ್ರಾಹಕರ ಮೇಲಾಗುವ ಪರಿಣಾಮ ಏನು ?


ಆದಾಯ ತೆರಿಗೆಯ ಸೆಕ್ಷನ್ 24B ಅಡಿ ವಿನಾಯಿತಿ ಲಭ್ಯವಿದೆ


ಆದಾಯ ತೆರಿಗೆ ಕಾಯ್ದೆಯಡಿ ಗೃಹ ಸಾಲ(Home Loan Calculation)ವನ್ನು ತೆಗೆದುಕೊಳ್ಳುವ ಗ್ರಾಹಕರಿಗೆ ಬಡ್ಡಿ ಪಾವತಿಯ ಮೇಲೆ ವಾರ್ಷಿಕವಾಗಿ 2 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಆದರೆ, ಸೆಕ್ಷನ್ 80EEA ಅಡಿಯಲ್ಲಿ 1.5 ಲಕ್ಷದವರೆಗೆ ಹೆಚ್ಚುವರಿ ವಿನಾಯಿತಿ ಇರುತ್ತದೆ. ಮಾರ್ಚ್ 31, 2022ರವರೆಗೆ ಗೃಹ ಸಾಲದ ಗ್ರಾಹಕರು ಬಡ್ಡಿಯ ಮೇಲೆ ಒಟ್ಟು 3.5 ಲಕ್ಷ ರೂ.ಗಳ ತೆರಿಗೆ ವಿನಾಯಿತಿಯನ್ನು ಪಡೆಯುತ್ತಾರೆ.


5 ಲಕ್ಷ ರೂ.ಗಳ ಲಾಭ ಸಿಗಲಿದೆ


ಈ ಎರಡೂ ತೆರಿಗೆಗಳಲ್ಲಿನ ವಿನಾಯಿತಿ ಹೊರತುಪಡಿಸಿ ಗೃಹ ಸಾಲದ ಅಸಲು ಮೊತ್ತವು ತೆರಿಗೆ ವಿನಾಯಿತಿ(Tax Deduction Calculation) ಪಡೆಯುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ವಾಸ್ತವವಾಗಿ ಆದಾಯ ತೆರಿಗೆಯ ಸೆಕ್ಷನ್ 80C ಅಡಿ ಪ್ರತಿವರ್ಷ ಗೃಹ ಸಾಲದ ಅಸಲು ಮೊತ್ತದ ಮೇಲೆ 1.5 ಲಕ್ಷ ರೂ.ಗಳ ತೆರಿಗೆ ವಿನಾಯಿತಿ ಲಭ್ಯವಿದೆ. ಈಗ ನೀವು ಒಟ್ಟು ಖಾತೆಯನ್ನು ಸೇರಿಸಿದರೆ ಮಾರ್ಚ್ 31ರವರೆಗೆ ಗೃಹ ಸಾಲ ಪಡೆಯುವವರಿಗೆ 5 ಲಕ್ಷ ರೂ. ತೆರಿಗೆ ವಿನಾಯಿತಿ ಸಿಗುತ್ತದೆ. ಇದರ ನಂತರ ನೀವು ಈ ಪ್ರಯೋಜನದ ಲಾಭ ಪಡೆಯಲು ಸಾಧ್ಯವಿಲ್ಲ. ಏಕೆಂದರೆ 2022ನೇ ಸಾಲಿನ ಬಜೆಟ್‍ನಲ್ಲಿ1.5 ಲಕ್ಷ ರೂ.ಗಳ ಹೆಚ್ಚುವರಿ ತೆರಿಗೆ ವಿನಾಯಿತಿ ಅವಧಿಯನ್ನು ವಿಸ್ತರಿಸಲು ಸರ್ಕಾರವು ಸ್ಪಷ್ಟವಾಗಿ ನಿರಾಕರಿಸಿದೆ.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ಡಿಎಯಲ್ಲಿ ಶೇ.3ರಷ್ಟು ಹೆಚ್ಚಳ, ಸಚಿವ ಸಂಪುಟದಲ್ಲಿ ಘೋಷಣೆ


ಷರತ್ತುಗಳ ಅನ್ವಯ


  • ಸೆಕ್ಷನ್ 80EEA ಅಡಿ ಹೋಮ್ ಲೋನ್(Home Loan) ಬಡ್ಡಿಯ ಮೇಲೆ ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯ ಬಯಸುವ ಮನೆ ಖರೀದಿದಾರರಿಗೆ ಕೆಲ ಷರತ್ತುಗಳಿವೆ.  

  • ಇದಕ್ಕಾಗಿ ಮನೆಯ ವೆಚ್ಚ 45 ಲಕ್ಷ ರೂ. ಮೀರಬಾರದು.

  • ಇದರ ಪ್ರಯೋಜನವನ್ನು ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಮಾತ್ರ ನೀಡಲಾಗುವುದು.

  • ಎನ್‌ಆರ್‌ಐ(NRI)ಗಳು ಸಹ ಮೊದಲ ಬಾರಿಗೆ ದೇಶದಲ್ಲಿ ಮನೆ ಖರೀದಿಸುತ್ತಿದ್ದರೆ ಮತ್ತು ಎಲ್ಲಾ ಷರತ್ತುಗಳನ್ನು ಪಾಲಿಸಿದರೆ 1.5 ಲಕ್ಷ ರೂ.ಗಳ ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯಲು ಅರ್ಹರಾಗಿರುತ್ತಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.