ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ಡಿಎಯಲ್ಲಿ ಶೇ.3ರಷ್ಟು ಹೆಚ್ಚಳ, ಸಚಿವ ಸಂಪುಟದಲ್ಲಿ ಘೋಷಣೆ

ಡಿಎ  3% ಹೆಚ್ಚಳಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹೊಸ ಹಣಕಾಸು ವರ್ಷ ಆರಂಭಕ್ಕೂ ಮುನ್ನ ಉದ್ಯೋಗಿಗಳ ಡಿಎ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿದೆ. 

Written by - Ranjitha R K | Last Updated : Mar 30, 2022, 03:11 PM IST
  • ಕೇಂದ್ರ ನೌಕರರಿಗೆ ಸಂತಸದ ಸುದ್ದಿ
  • ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸಿ ನಿರ್ಧಾರ
  • ಜನವರಿ 2022 ರಿಂದ 3% ಹೆಚ್ಚಿನ ತುಟ್ಟಿಭತ್ಯೆ ಲಭ್ಯ
ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ! ಡಿಎಯಲ್ಲಿ  ಶೇ.3ರಷ್ಟು ಹೆಚ್ಚಳ, ಸಚಿವ ಸಂಪುಟದಲ್ಲಿ ಘೋಷಣೆ title=
ಕೇಂದ್ರ ನೌಕರರಿಗೆ ಸಂತಸದ ಸುದ್ದಿ (file photo)

7th Pay Commission News: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ (Pensioners) ಭರ್ಜರಿ ಸುದ್ದಿ. ಇಂದು ಅಂದರೆ ಬುಧವಾರ, ಮಾರ್ಚ್ 30 ರಂದು, ಡಿಎ (Dearness allowance Hike) 3% ಹೆಚ್ಚಳಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹೊಸ ಹಣಕಾಸು ವರ್ಷ ಆರಂಭಕ್ಕೂ ಮುನ್ನ ಉದ್ಯೋಗಿಗಳ ಡಿಎ ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಿದೆ. 

ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ :
AICPI-IWನ ಡಿಸೆಂಬರ್ ಡೇಟಾ ಬಂದ ನಂತರ ನೌಕರರು 3% ಡಿಎ ಹೆಚ್ಚಳದ (DA Hike) ಘೋಷಣೆಯ ನಿರೀಕ್ಷೆಯಲ್ಲಿದ್ದರು. ಇಂದಿನ ಸಚಿವ ಸಂಪುಟ ಸಭೆಯಲ್ಲಿ (Cabinet meeting) ಶೇ.3ರಷ್ಟು ಡಿಎ ಹೆಚ್ಚಿಸಿ ಘೋಷಣೆ ಮಾಡಲಾಗಿದೆ. ನೌಕರರ ಮಾರ್ಚ್ ತಿಂಗಳ ವೇತನದೊಂದಿಗೆ ಹೊಸ ಡಿಎ ಖಾತೆಗೆ ಜಮೆಯಾಗಲಿದೆ.  

ಇದನ್ನೂ ಓದಿ : ನಿಮ್ಮ PF ಬ್ಯಾಲೆನ್ಸ್ ಪರಿಶೀಲಿಸಬೇಕಾ? ಹಾಗಿದ್ರೆ, ಈ ಕೆಲಸ ಮಾಡಿ

3 ಶೇ.ದಷ್ಟು ಹೆಚ್ಚಳ ನಿಗದಿ : 
ಈಗ ನೌಕರರು ಮತ್ತು ಪಿಂಚಣಿದಾರರು 34% ದರದಲ್ಲಿ ತುಟ್ಟಿ ಭತ್ಯೆ (DA Hike) ಪಡೆಯುತ್ತಾರೆ. ಡಿಸೆಂಬರ್ 2021 ರಲ್ಲಿ  ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (AICPI ಸೂಚ್ಯಂಕ) ಒಂದು ಅಂಶದ ಇಳಿಕೆ ಕಂಡುಬಂದಿದೆ. ತುಟ್ಟಿ ಭತ್ಯೆಗಾಗಿ ಸರಾಸರಿ 12 ತಿಂಗಳ ಸೂಚ್ಯಂಕವು 351.33 ಆಗಿದ್ದು, ಸರಾಸರಿ 34.04% (Dearness allowance). ಆಗಿರುತ್ತದೆ. ಆದರೆ, ತುಟ್ಟಿಭತ್ಯೆಯನ್ನು ಯಾವಾಗಲೂ ಪೂರ್ಣ ಸಂಖ್ಯೆಯಲ್ಲಿ ನೀಡಲಾಗುತ್ತದೆ. ಅಂದರೆ, ಜನವರಿ 2022 ರಿಂದ, ಒಟ್ಟು ತುಟ್ಟಿ ಭತ್ಯೆ 34% ಆಗಿರುತ್ತದೆ. 

34% ಡಿಎ ಮೇಲೆ ಲೆಕ್ಕಾಚಾರ :
ತುಟ್ಟಿಭತ್ಯೆ  (DA Hike) ಶೇ.3ರಷ್ಟು ಹೆಚ್ಚಿದರೆ, ಉದ್ಯೋಗಿಗಳ ಡಿಎ ಶೇ.34ಕ್ಕೆ ಏರಿಕೆಯಾಗಿದೆ. ಈಗ ಇಲ್ಲಿ ಕನಿಷ್ಠ ಮತ್ತು ಗರಿಷ್ಠ ಮೂಲ ವೇತನದ ಲೆಕ್ಕಾಚಾರವನ್ನು ನೋಡೋಣ. 

ಇದನ್ನೂ ಓದಿ : ಏಪ್ರಿಲ್ ನಿಂದ ಬದಲಾಗಲಿದೆ ಈ ಬ್ಯಾಂಕ್ ಗಳ ನಿಯಮ, ಗ್ರಾಹಕರ ಮೇಲಾಗುವ ಪರಿಣಾಮ ಏನು ?

ಕನಿಷ್ಠ ಮೂಲ ವೇತನದ ಲೆಕ್ಕಾಚಾರ :
1. ನೌಕರನ ಮೂಲ ವೇತನ ರೂ 18,000 
2. ಹೊಸ ತುಟ್ಟಿಭತ್ಯೆ (34%) ರೂ. 6120/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (31%) ರೂ. 5580/ತಿಂಗಳು
4. ಎಷ್ಟು ತುಟ್ಟಿ ಭತ್ಯೆ ಹೆಚ್ಚಳ 6120- 5580 = ರೂ. 540/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 540X12 = ರೂ. 6,480

ಗರಿಷ್ಠ ಮೂಲ ವೇತನದ ಲೆಕ್ಕಾಚಾರ :
1. ನೌಕರನ ಮೂಲ ವೇತನ ರೂ . 56900
 2. ಹೊಸ ತುಟ್ಟಿಭತ್ಯೆ (34%) ರೂ .19346 / ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (31%) ರೂ. 17639 / ತಿಂಗಳು
4. ಎಷ್ಟು ತುಟ್ಟಿ ಭತ್ಯೆ ಹೆಚ್ಚಳ 19346- 17639 = 1,707 ರೂ/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 1,707 X12 = ರೂ. 20,484

ಇದನ್ನೂ ಓದಿ :  Aadhaar-PAN Link: ಯಾರಿಗೆ ಆಧಾರ್-ಪ್ಯಾನ್ ಲಿಂಕ್ ಮಾಡುವ ಅಗತ್ಯವಿಲ್ಲ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News