ನವದೆಹಲಿ : ಮನೆ ಕೊಳ್ಳಲು ಇದಕ್ಕಿಂತ ಒಳ್ಳೆಯ ಟೈಮ್ ಮತ್ತೆ ಸಿಗಲಿಕ್ಕಿಲ್ಲ. ಯಾಕೆಂದರೆ, ಬಹಳಷ್ಟು ಬ್ಯಾಂಕುಗಳ ಬಡ್ಡಿ ದರ ಶೇ. 7ಕ್ಕಿಂತ ಕೆಳಗೆ ಕುಸಿದಿದೆ. ಮೊದಲ ಬಾರಿಗೆ ಬ್ಯಾಂಕುಗಳು ಬಡ್ಡಿ ದರ ಏರಿಸುವ ಬದಲು ಇಳಿಸುತ್ತಿವೆ. ದೇಶದ ಅತ್ಯಂತ ದೊಡ್ಡ ಬ್ಯಾಂಕುಗಳಾದ  (HDFC) ಹೆಚ್ ಡಿಎಫ್ ಸಿ ಮತ್ತು ಕೆನರಾ ಬ್ಯಾಂಕ್ (Canara Bank) ಎಂಸಿಎಲ್ಆರ್ ನಲ್ಲಿ (MCLR) ಕಡಿತ ಮಾಡಿವೆ. ಹಾಗಾಗಿ ಈ ಎರಡೂ ಬ್ಯಾಂಕುಗಳ ಹೋಮ್ ಲೋನ್ (Home Loan) ಬಡ್ಡಿ ಅತ್ಯಂತ ಕಡಿಮೆಯಾಗಿದೆ. 


COMMERCIAL BREAK
SCROLL TO CONTINUE READING

ಹೆಚ್ ಡಿಎಫ್ ಸಿ ಯಿಂದ ಸಸ್ತಾ ಹೋಂ ಲೋನ್..
ಹೆಚ್ ಡಿಎಫ್ ಸಿ (HDFC) ಬ್ಯಾಂಕ್ ತನ್ನ ಎಂಸಿಎಲ್ಆ ರ್ ನಲ್ಲಿ ಬದಲಾವಣೆ ಮಾಡಿದೆ. ಅದರ ಮಾಹಿತಿ ಬ್ಯಾಂಕ್ ವೆಬ್ಸೈ ಟಿನಲ್ಲಿ (website) ಲಭ್ಯವಿದೆ. ಈ ಹೊಸ ದರ ಫೆ. 8ರಿಂದ ಅನುಷ್ಠಾನಕ್ಕೆ ಬರಲಿದೆ.  ಹೆಚ್ ಡಿಎಫ್ ಸಿ ಒಂದು ದಿನದ ಎಂಸಿಎಲ್ಆರ್ ಶೇ. 6.85. ಒಂದು ತಿಂಗಳಿಗೆ ಶೇ. 6.9. ಮೂರು ತಿಂಗಳ ಎಂಸಿಎಲ್ಆರ್ ಶೇ. 6.95. ಆರು ತಿಂಗಳ ಎಂಸಿಎಲ್ಆಲರ್ ಶೇ. 7.05. ಒಂದು ವರ್ಷಕ್ಕೆ ಎಂಸಿಎಲ್ಆರ್ ಶೇ. 7.2. ಹಾಗೂ ಎರಡು ವರ್ಷಕ್ಕೆ ಶೇ. 7.3. ಮೂರು ವರ್ಷದ ಅವಧಿಗೆ ಶೇ. 7.4 ಎಂಸಿಎಲ್ಆ ರ್ ಅಪ್ಲೈ ಆಗಲಿದೆ. 


ಇದನ್ನೂ ಓದಿ : ಆರ್‌ಬಿಐನ ದೊಡ್ಡ ನಿರ್ಧಾರ, ಇನ್ಮುಂದೆ ವಿಳಂಬವಾಗುವುದಿಲ್ಲ Cheque ಕ್ಲಿಯರೆನ್ಸ್


ಕೆನರಾ ಬ್ಯಾಂಕ್ ಹೋಂ ಲೋನ್ ಕೂಡಾ ಅಗ್ಗ:
ಕೆನರಾ ಬ್ಯಾಂಕ್ (Canara Bank) ಕೂಡಾ ತನ್ನ ಎಂಸಿಎಲ್ಆರ್ ದರದಲ್ಲಿ ಬದಲಾವಣೆ ಮಾಡಿದೆ. ಅದರಲ್ಲಿ ಶೇ. 0.1ರಷ್ಟು ಕಡಿತ ಮಾಡಿದೆ. ಒಂದು ತಿಂಗಳ ತನಕ ಕೆನರಾ ಬ್ಯಾಂಕ್ ಎಂಸಿಎಲ್ಆರ್ ಶೇ. 6.7 ರಷ್ಟು ಇರಲಿದೆ. ಮೂರು ತಿಂಗಳಿಗೆ ಶೇ. 6.95. ಆರು ತಿಂಗಳಿಗೆ ಶೆ. 7.30. ಒಂದು ವರ್ಷಕ್ಕೆ ಶೇ. 7.35. ಕೆನರಾ ಬ್ಯಾಂಕ್ ಹೋಮ್ ಲೋನ್ (Home loan) ಕೂಡ ಅಗ್ಗವಾಗಿದೆ. 


ಎಂಸಿಎಲ್ಆರ್ ಅಂದ್ರೆ ಏನು..?:
ಬ್ಯಾಂಕುಗಳು (Bank) ಎಂಸಿಎಲ್ಆರ್ ದರ ಏರಿಸಿದರೆ ಅಥವಾ ಕಡಿತಗೊಳಿಸಿದರೆ ಅದರ ನೇರ ಪರಿಣಾಮ 2016ರ ಬಳಿಕ ಸಾಲ ಪಡೆದ ಗ್ರಾಹಕರ ಮೇಲಾಗುತ್ತದೆ. ಏಪ್ರಿಲ್ 1 ರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಂಸಿಎಲ್ಆರ್ ಅನ್ವಯಿಸಲಾಗುತ್ತಿದೆ. ಎಂಸಿಎಲ್ಆರ್ ಅಂದರೆ ಅದು ಬ್ಯಾಂಕ್ ವಿಧಿಸಬಹುದಾದ ಅತ್ಯಂತ ಕಡಿಮೆ ಬಡ್ಡಿದರ. ಅದಕ್ಕಿಂತ ಕಡಿಮೆ ಬಡ್ಡಿಯಲ್ಲಿ (Rate of Interest) ಬ್ಯಾಂಕ್ ಸಾಲ ನೀಡುವಂತಿಲ್ಲ.


ಇದನ್ನೂ ಓದಿ : SBI ಗ್ರಾಹಕರೇ ಗಮನಿಸಿ, ನೀವು ATM ಬಳಸುವ ಮುನ್ನ ತಪ್ಪದೇ ಈ ಕೆಲಸ ಮಾಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.