ಶಾಕಿಂಗ್ ನ್ಯೂಸ್! ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ಟಿಕೆಟ್ ಬುಕ್ಕಿಂಗ್ ಆಗಲಿದೆ ದುಬಾರಿ!

ನೋಟ್ ಬ್ಯಾನ್ ಬಳಿಕ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ರೈಲ್ವೆ ಸೇವಾ ಶುಲ್ಕವನ್ನು ರದ್ದುಪಡಿಸಿತ್ತು.

Last Updated : Aug 9, 2019, 09:58 AM IST
ಶಾಕಿಂಗ್ ನ್ಯೂಸ್! ಐಆರ್‌ಸಿಟಿಸಿ ವೆಬ್‌ಸೈಟ್‌ನಿಂದ ಟಿಕೆಟ್ ಬುಕ್ಕಿಂಗ್ ಆಗಲಿದೆ ದುಬಾರಿ! title=

ನವದೆಹಲಿ: ನೀವು ಸಹ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ ಮತ್ತು ಆನ್‌ಲೈನ್ ಟಿಕೆಟ್ (ಐಆರ್‌ಸಿಟಿಸಿ ಟಿಕೆಟ್ ಬುಕಿಂಗ್) ಮಾಡುತ್ತಿದ್ದರೆ ಈ ಸುದ್ದಿ ನಿಮ್ಮನ್ನು ನಿರಾಶೆಗೊಳಿಸಬಹುದು. ಹೌದು, ನೀವು ಶೀಘ್ರದಲ್ಲೇ ಐಆರ್‌ಸಿಟಿಸಿಯಿಂದ ಆನ್‌ಲೈನ್ ಕಾಯ್ದಿರಿಸುವಿಕೆಗಾಗಿ ಹೆಚ್ಚು ಖರ್ಚು ಮಾಡಬೇಕಾಗಬಹುದು. ಮೂಲಗಳ ಪ್ರಕಾರ, ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಕಾಯ್ದಿರಿಸುವುದರಿಂದ ಮತ್ತೊಮ್ಮೆ ಟಿಕೆಟ್‌ನಲ್ಲಿ ಸೇವಾ ಶುಲ್ಕ ವಿಧಿಸಬಹುದು. ವಾಸ್ತವವಾಗಿ, ನೋಟ್ ಬ್ಯಾನ್ ಬಳಿಕ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ರೈಲ್ವೆ ಸೇವಾ ಶುಲ್ಕವನ್ನು ರದ್ದುಪಡಿಸಿತ್ತು.

ಎಸಿ ಕೋಚ್‌ನ ಬುಕಿಂಗ್‌ನಲ್ಲಿ 40 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ!
ಈಗ ಆನ್‌ಲೈನ್ ಟಿಕೆಟ್‌ನಲ್ಲಿ, ಇ-ಟಿಕೆಟ್ ಕಾಯ್ದಿರಿಸುವಾಗ ಮತ್ತೆ ಸೇವಾ ಶುಲ್ಕ ವಿಧಿಸಿದರೆ, ನೀವು ಎಸಿ ರಹಿತ ಕೋಚ್‌ಗೆ ರೂ .20 ಮತ್ತು ಎಸಿ ಕೋಚ್‌ಗೆ 40 ರೂ. ಗಳನ್ನೂ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ವಾಸ್ತವವಾಗಿ, ನೋಟು ರದ್ಧತಿ ನಂತರ ಸೇವಾ ಶುಲ್ಕವನ್ನು ಸಂಗ್ರಹಿಸಬೇಡಿ ಎಂದು ಹಣಕಾಸು ಸಚಿವಾಲಯವು ರೈಲ್ವೆ ಸಚಿವಾಲಯಕ್ಕೆ ಸೂಚಿಸಿತ್ತು ಮತ್ತು ಸೇವಾ ಶುಲ್ಕವನ್ನು ಮರುಪಾವತಿ ಮಾಡುವುದಾಗಿ ಭರವಸೆ ನೀಡಿತ್ತು.

88 ಕೋಟಿ ರೂಪಾಯಿ ನೀಡಲು ನಿರಾಕರಿಸಲಾಗಿದೆ:
ಆದರೆ ಈಗ ಹಣಕಾಸು ಸಚಿವಾಲಯವು ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಸೇವಾ ಶುಲ್ಕಕ್ಕೆ ಬಾಕಿ ಇರುವ 88 ಕೋಟಿ ರೂ.ಗಳನ್ನು ನೀಡಲು ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ. ಇದೊಂದು ತಾತ್ಕಾಲಿಕ ವ್ಯವಸ್ಥೆ ಎಂದು ಪತ್ರದಲ್ಲಿ ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಐಆರ್‌ಸಿಟಿಸಿ ಈಗ ನಷ್ಟವನ್ನು ಅನುಭವಿಸುತ್ತಿದೆ. ಐಆರ್‌ಸಿಟಿಸಿ ಮೂಲಕ ಮತ್ತೆ ಸೇವಾ ಶುಲ್ಕ ವಿಧಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಜವಾಬ್ದಾರಿಯನ್ನು ಹಣಕಾಸು ಸಚಿವಾಲಯವು ರೈಲ್ವೆ ಸಚಿವಾಲಯಕ್ಕೆ ಬಿಟ್ಟಿದೆ.

ಶೀಘ್ರದಲ್ಲೇ ನಿರ್ದೇಶಕರ ಮಂಡಳಿಯ ಸಭೆ:
ನೋಟು ಅಮಾನೀಕರಣಡ ನಂತರ, ಡಿಜಿಟಲ್ ಇಂಡಿಯಾವನ್ನು ಉತ್ತೇಜಿಸುವ ಉದ್ದೇಶದಿಂದ ಐಆರ್‌ಸಿಟಿಸಿಯಲ್ಲಿ ಇ-ಟಿಕೆಟ್ ಬುಕಿಂಗ್ ಮೇಲಿನ ಸೇವಾ ಶುಲ್ಕವನ್ನು ಸರ್ಕಾರ ತೆಗೆದುಹಾಕಿದೆ. ಇದೀಗ ಐಆರ್‌ಸಿಟಿಸಿ ಭಾರೀ ನಷ್ಟ 80 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸುತ್ತಿರುವುದರಿಂದ ಈ ಬಗ್ಗೆ ಶೀಘ್ರದಲ್ಲೇ ಐಆರ್‌ಸಿಟಿಸಿಯ ನಿರ್ದೇಶಕರ ಮಂಡಳಿ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಸೇವಾ ಶುಲ್ಕದ ದರಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸೇವಾ ಶುಲ್ಕದ ಹಳೆಯ ದರವನ್ನು ಮತ್ತೊಮ್ಮೆ ಅನ್ವಯಿಸುವ ಸಾಧ್ಯತೆ ಇದೇ ಎಂದು ಹೇಳಲಾಗುತ್ತಿದೆ.

Trending News