Credit Card Benefits: ಕ್ರೆಡಿಟ್ ಕಾರ್ಡ್ ನಮ್ಮ ದೈನಂದಿನ ಆರ್ಥಿಕ ಜೀವನಕ್ಕೆ ಸಹಾಯಕ ಸಾಧನವಾಗಿದೆ.  ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ನಲ್ಲಿ ಬಳಸಿದ ಹಣವನ್ನು ಪಾವತಿ ಮಾಡುವುದರಿಂದ  ಕ್ರೆಡಿಟ್ ರೇಟಿಂಗ್ ಹೆಚ್ಚಳ ಆಗಲಿದೆ. ಕ್ರೆಡಿಟ್ ರೇಟಿಂಗ್ ಉತ್ತಮವಾಗಿ ಇದ್ದ ಸಂದರ್ಭದಲ್ಲಿ ಗೃಹ ಸಾಲ ಸೇರಿದಂತೆ ಪರ್ಸನಲ್ ಲೋನ್ ಹಾಗೂ ಇನ್ನಿತರೆಬ್ಯಾಂಕ್ ಲೋನ್ ಗಳು ಬಹಳ ಸುಲಭವಾಗಿ ಲಭ್ಯವಾಗಲಿವೆ. 


COMMERCIAL BREAK
SCROLL TO CONTINUE READING

ಕ್ರೆಡಿಟ್ ಕಾರ್ಡ್ ಪ್ರಯೋಜನಗಳನ್ನು ಪಡೆಯಲು ಅದನ್ನು ಯಾವ ರೀತಿ ಬಳಸಬೇಕು? 
ಕ್ರೆಡಿಟ್ ಕಾರ್ಡ್‌ಗಳ ಪ್ರಯೋಜನವನ್ನು ಪಡೆಯಲು ನಾವು ಅದನ್ನು ಬಳಸುವಾಗ ಕೆಲವು ಅಂಶಗಳ ಬಗ್ಗೆ ನಿಗಾವಹಿಸುವುದು ಕೂಡ ತುಂಬಾ ಅಗತ್ಯವಾಗಿದೆ. ಅವುಗಳೆಂದರೆ... 
1. ಪ್ರತಿ ತಿಂಗಳ  ಬಾಕಿಯನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು: 
ಪ್ರತಿ ಬಿಲ್ಲಿಂಗ್ ಸೈಕಲ್‌ಗೆ ಪೂರ್ಣವಾಗಿ ಬಳಕೆ ಮಾಡಿದ ಹಣವನ್ನು ಪಾವತಿಸುವ ಮೂಲಕ ನಿಮ್ಮ ಕ್ರೆಡಿಟ್ ಕಾರ್ಡ್  ಬಡ್ಡಿಯನ್ನ ತಪ್ಪಿಸಿಬಹುದು.  ಇದರೊಂದಿಗೆ, ಕೈ ಯಲ್ಲಿ ಕ್ರೆಡಿಟ್ ಕಾರ್ಡ್ ಇದೆ ಎಂದು ಬೇಕಾ ಬಿಟ್ಟಿಯಾಗಿ ಖರ್ಚು ಮಾಡದೆ, ಅಗತ್ಯವಿರುವಷ್ಟು ಅಥವಾ ನೀವು ಎಷ್ಟು ಹಣವನ್ನು ಪಾವತಿ ಮಾಡಲು ಶಕ್ತರಿರುವಿರೋ ಅಷ್ಟನ್ನು ಮಾತ್ರ ಖರ್ಚು ಮಾಡಿ. ಈ ರೀತಿಯಾಗಿ ಕ್ರೆಡಿಟ್ ಕಾರ್ಡ್ ಬಳಸಿದರೆ ಅದು ನಿಮ್ಮ ಕ್ರೆಡಿಟ್ ಸ್ಕೋರ್ ಜೊತೆ ಅನೇಕ ಕ್ರೆಡಿಟ್ ಕಾರ್ಡ್ ಗಳು ಪ್ರಯಾಣಕ್ಕೆ ಬೇಕಾದ ಏರ್ ಮೈಲ್ಸ್, ಕ್ಯಾಶ್ ಬ್ಯಾಕ್ ರೀತಿ ವಿವಿಧ ರಿವಾರ್ಡ್ಸ್ (ಪ್ರತಿಫಲ ) ನೀಡಲಿದೆ.


ಇದನ್ನೂ ಓದಿ- Debit Card Safety Tips: ಡೆಬಿಟ್ ಕಾರ್ಡ್ ಬಳಸುವಾಗ ಎಂದಿಗೂ ಈ ತಪ್ಪು ಮಾಡಬೇಡಿ..!


2. ಪಾವತಿಯನ್ನು ಎಂದಿಗೂ ಬಿಟ್ಟುಬಿಡಬೇಡಿ: 
ಪ್ರತಿ ತಿಂಗಳು ನಿಮ್ಮ ಬಿಲ್ ಅನ್ನು ಪೂರ್ಣ ಪಾವತಿಸಿ, ಇಲ್ಲವಾದರೆ ಕನಿಷ್ಠ ಪಾವತಿಯನ್ನು (minimum balance)ಪಾವತಿಸಿ. ಕ್ರೆಡಿಟ್ ಕಾರ್ಡ್ ಬಿಲ್  ಪಾವತಿಯನ್ನು ತಪ್ಪಿಸಿಕೊಂಡರೆ ತಡವಾದ ಶುಲ್ಕ, ಪೆನಾಲ್ಟಿ ಬಡ್ಡಿ ದರಗಳು ಸೇರಿದಂತೆ ಅನೇಕ ಬಡ್ಡಿಗಳು ಶುಲ್ಕಗಳು ನಿಮ್ಮ ಮುಂದಿನ ಪಾವತಿ ಹಣಕ್ಕೆ ಸೇರಿ ಹೆಚ್ಚಳ ಆಗಲಿದೆ. ಜೊತೆಗೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ.


3. ಕ್ರೆಡಿಟ್  ಕಾರ್ಡ್ ಅಗತ್ಯಗಳಿಗಾಗಿ ಬಳಸಿ, ಬಯಕೆಗೆ ಅಲ್ಲ: 
ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಗಾದೆ ಮಾತು ಕ್ರೆಡಿಟ್ ಕಾರ್ಡ್ ಬಳಕೆಗೆ ಸರಿಯಾಗಿ ಹೊಂದಲಿದೆ. ಕ್ರೆಡಿಟ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ಬಳಸಬೇಕು. ಕ್ಷುಲ್ಲಕ ಖರೀದಿಗಳು ಸಾಲಕ್ಕೆ ಕಾರಣವಾಗಬಹುದು. ನಿಮ್ಮ ಮುಂದಿನ ಪಾವತಿಯ ದಿನದ ಮೊದಲು ಪಾವತಿಸಬೇಕಾದ ಮೊಬೈಲ್ ಫೋನ್ ಬಿಲ್‌, ವಿದ್ಯುತ್ ಬಿಲ್ ಸೇರಿದಂತೆ ಪ್ರತಿ ತಿಂಗಳ ಅಗತ್ಯ ಖರ್ಚಿಗೆ ಮಾತ್ರ  ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ಕ್ರೆಡಿಟ್ ಕಾರ್ಡ್ ಅನ್ನು ನಿಮ್ಮ ಬಯಕೆಗಳಿಗೆ ಅಥವಾ ಅನಗತ್ಯ ಖರ್ಚಿಗೆ ಬಳಕೆ ಮಾಡಿದರೆ ಸಾಲ ಮರು ಪಾವತಿಗೆ ಕಷ್ಟವಾಗುವ ಜೊತೆಗೆ ಕ್ರೆಡಿಟ್ ಸ್ಕೋರ್ ಇಳಿಮುಖ ಆಗಲಿದೆ.


4. ಕ್ರೆಡಿಟ್ ಕಾರ್ಡ್ ಅನ್ನು ಬಜೆಟ್ ಸಾಧನವಾಗಿ ಬಳಸಿ: 
ಕ್ರೆಡಿಟ್ ಕಾರ್ಡ್ ಬಳಕೆಯ ಪ್ರತಿ ತಿಂಗಳು ಬಾಕಿಯನ್ನು ಪಾವತಿಸಬಹುದು ಎಂದು ನಿಮಗೆ ವಿಶ್ವಾಸವಿದ್ದರೆ, ಮಾತ್ರ ಬಳಕೆ ಮಾಡಬೇಕು. ಇದನ್ನ ತಿಂಗಳ ಅಥವಾ ವಾರ್ಷಿಕ ಬಜೆಟ್ ಸಾಧನೆಯಾಗಿ ಒಳಸಬಹುದು. ನಿಮ್ಮ ಕ್ರೆಡಿಟ್ ಕಾರ್ಡ್‌ನೊಂದಿಗೆ ನಿಮ್ಮ ಎಲ್ಲಾ ಖರೀದಿಗಳನ್ನು ಮಾಡುವ ಮೂಲಕ, ತಿಂಗಳ ಕೊನೆಯಲ್ಲಿ ನೀವು ಎಷ್ಟು ಖರ್ಚು ಮಾಡಿದ್ದೀರಿ ಎಂಬುದನ್ನು ಲೆಕ್ಕ ಇರಲಿದೆ. ನಿಮ್ಮ ಕ್ರೆಡಿಟ್ ಕಾರ್ಡ್ ಖರ್ಚು ಕೈ ಮೀರುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣಕ್ಕಿಂತ ಹೆಚ್ಚಿನ ಬಳಕೆ ಮಾಡಬೇಡಿ.


ಇದನ್ನೂ ಓದಿ- ICICI ಹಾಗೂ ಪಿಎನ್ಬಿ ಗ್ರಾಹಕರಿಗೊಂದು ಶಾಕಿಂಗ್ ಸುದ್ದಿ, ಹೆಚ್ಚಾಗಲಿದೆ ಇಎಂಐ ಹೊರೆ


5. ಕ್ರೆಡಿಟ್ ಕಾರ್ಡ್ ನ ಶೇ 30 ಮಿತಿಯಲ್ಲಿ ಮಾತ್ರ ಬಳಕೆ ಮಾಡಿ: 
ಕ್ರೆಡಿಟ್ ಸ್ಕೋರ್ ನಿರ್ಧಾರ ಆಗುವುದಕ್ಕೆ ಅನೇಕ ಮಾನದಂಡಗಳು ಇವೆ. ಈ ಪೈಕಿ ಶೇ 30ಕ್ಕಿಂತ ಹೆಚ್ಚಿನ ಬಳಕೆ ಮಾಡಿದ ಸಂದರ್ಭದಲ್ಲಿ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಉದಾಹರಣೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಗರಿಷ್ಟ ಬಳಕೆ ಮಿತಿ ₹1 ಲಕ್ಷ ಇದ್ದರೆ ಬಳಕೆದಾರರು ಕೇವಲ 30% ಅಂದರೆ ₹30 ಸಾವಿರ ಮಾತ್ರ ಬಳಸಬೇಕು. ಇದರಿಂದ ಆರೋಗ್ಯಕರ ಕ್ರೆಡಿಟ್ ಸ್ಕೋರ್ ಅನ್ನು ಕಾಯ್ದುಕೊಳ್ಳಬಹುದು. 


6. ರಿವಾರ್ಡ್ ಗಳನ್ನ ಬಳಸಿ: 
ಬಹುಪಾಲು ಕ್ರೆಡಿಟ್ ಕಾರ್ಡ್ ಗಳು ನಿಮ್ಮ ಬಳಕೆ ಅನುಸಾರವಾಗಿ ರಿವಾರ್ಡ್ಸ್ (ಪ್ರತಿಫಲ) ನೀಡಲಿದೆ. ನಿಮ್ಮ ವಾಯುಪ್ರಯಾಣಕ್ಕೆ ರಿಯಾಯಿತಿ , ರಿಟೇಲ್ ಮಳಿಗೆಗಳಲ್ಲಿ ರಿಯಾಯಿತಿ , ಪೆಟ್ರೋಲ್ ರಿಯಾಯಿತಿ ಸೇರಿದಂತೆ ಅನೇಕ ರಿವಾರ್ಡ್ಸ್ ಗಳು ಇದರಲ್ಲಿ ಸಿಗಲಿದೆ. ನಿಮ್ಮ ಅಗತ್ಯತೆ ಅನುಸಾರ ಇದನ್ನ ಬಳಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.