ಬೆಂಗಳೂರು : ತೆರಿಗೆ ವಂಚನೆ ಕಪ್ಪು ಹಣದ  ಹರಿವನ್ನು ತಡೆಯುವ ನಿಟ್ಟಿನಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಹಣವನ್ನು ಹೊಂದಬಹುದು ಎಂಬುದರ ಮೇಲೆ ಭಾರತ ಸರ್ಕಾರವು ಮಿತಿಗಳನ್ನು ವಿಧಿಸಿದೆ. ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು ಎನ್ನುವುದು ಎರಡು ವಿಷಯಗಳ ಮೇಲೆ ಅವಲಂಬಿತವಾಗಿದೆ. ನಿಮ್ಮ ಹಣಕಾಸಿನ ಸಾಮರ್ಥ್ಯ ಮತ್ತು ನಿಮ್ಮ ವಹಿವಾಟಿನ ರೀತಿ ನೀತಿಗಳು.  


COMMERCIAL BREAK
SCROLL TO CONTINUE READING

ಮನೆಯಲ್ಲಿ ಎಷ್ಟು ನಗದು ಇಟ್ಟುಕೊಳ್ಳಬಹುದು ? : 
ಜನರು ತಮ್ಮ ಮನೆಗಳಲ್ಲಿ ಎಷ್ಟು ಹಣವನ್ನು ಇಟ್ಟುಕೊಳ್ಳಬಹುದು ಎಂಬುದಕ್ಕೆ ಯಾವುದೇ ಮಿತಿಗಳಿಲ್ಲ. ಜನರು ತಮಗೆ ಬೇಕಾದಷ್ಟು ಹಣವನ್ನು ಇಟ್ಟುಕೊಳ್ಳಬಹುದು. ಆದರೆ ಇಟ್ಟುಕೊಂಡಿರುವ ಪ್ರತಿ ರೂಪಾಯಿಗೂ ನಿಮ್ಮ ಬಾಲಿ ದಾಖಲೆ ಇರಬೇಕು. ನಿಮ್ಮ ಆದಾಯದ ಮೂಲ ಮತ್ತು ಆದಾಯಕ್ಕೆ ತೆರಿಗೆ ಪಾವತಿಸಿದ್ದೀರಾ ಎನ್ನುವ ದಾಖಲೆಯನ್ನು ನೀವು ಹೊಂದಿರಬೇಕು. 


ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಕುಸಿತ!


ತೆರಬೇಕಾಗುತ್ತದೆ ಭಾರೀ ದಂಡ : 
ಆದಾಯ ತೆರಿಗೆ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಎಷ್ಟು ನಗದು ಬೇಕಾದರೂ ಇಟ್ಟುಕೊಳ್ಳಬಹುದು. ಆದರೆ ಒಂದೊಮ್ಮೆ ಆದಾಯ ತೆರಿಗೆ ಇಲಾಖೆಯ ದಾಳಿನಡೆದರೆ ನಿಮ್ಮ ಬಳಿ ಇರುವ ಹಣ ಹೇಗೆ ಬಂತು ಎಂಬುದಕ್ಕೆ ನಿಖರ ಪುರಾವೆ ಇರಬೇಕು ಎಂಬುದನ್ನು ನೆನಪಿಡಿ. ಇದರೊಂದಿಗೆ ನೀವು ಐಟಿಆರ್ ಘೋಷಣೆಯನ್ನು ತೋರಿಸಬೇಕಾಗುತ್ತದೆ. ಇಲ್ಲದಿದ್ದರೆ ಅಧಿಕಾರಿಗಳು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಾರೆ. ನೋಟು ಅಮಾನ್ಯೀಕರಣದ ನಂತರ,  ಯಾರದ್ದೇ ಮನೆಯಲ್ಲಿ ಸರಿಯಾದ  ದಾಖಲೆಗಳಿಲ್ಲದೆ ಹಣ ಕಂಡುಬಂದರೆ, ಆದಾಯ ತೆರಿಗೆ ಇಲಾಖೆಯು  ಒಟ್ಟು ಮೊತ್ತದ 137 ಪ್ರತಿಶತದವರೆಗೆ ತೆರಿಗೆ ವಿಧಿಸುತ್ತದೆ. 


ಒಮ್ಮೆಲೇ 50,000 ರೂಪಾಯಿಗಿಂತ ಹೆಚ್ಚಿನ ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಅಥವಾ ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ಠೇವಣಿಗಳಿಗೆ ಪ್ಯಾನ್ ಮತ್ತು ಆಧಾರ್ ಕಾರ್ಡ್‌ನ  ಸಲ್ಲಿಕೆಯನ್ನು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಕಡ್ಡಾಯಗೊಳಿಸಿದೆ. ತಪ್ಪಿದಲ್ಲಿ 20 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.


ಇದನ್ನೂ ಓದಿ ಈ ಸೇವೆಯನ್ನು ಉಚಿತವಾಗಿ ನೀಡುತ್ತಿದೆ ರೈಲ್ವೆ! ಪ್ರತಿ ಪ್ರಯಾಣಿಕರೂ ಪಡೆಯಬಹುದು ಇದರ ಲಾಭ


1) ಒಂದು ವರ್ಷದಲ್ಲಿ ಬ್ಯಾಂಕ್‌ನಿಂದ ರೂ.1 ಕೋಟಿಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು 2% TDS ಪಾವತಿಸಬೇಕಾಗುತ್ತದೆ.
2) 2 ಲಕ್ಷಕ್ಕಿಂತ ಹೆಚ್ಚು ನಗದು ಏನನ್ನೂ ಖರೀದಿಸಲು ಸಾಧ್ಯವಿಲ್ಲ, ನೀವು ನಗದು ರೂಪದಲ್ಲಿ ಪಾವತಿಸಿದರೆ ನೀವು ಪ್ಯಾನ್ ಮತ್ತು ಆಧಾರ್ ತೋರಿಸಬೇಕು.
3) ಕ್ರೆಡಿಟ್-ಡೆಬಿಟ್ ಕಾರ್ಡ್ ಮೂಲಕ ಒಂದು ಬಾರಿ 1 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆಸುವಂತಿಲ್ಲ. 
4) ಬೇರೆಯವರಿಂದ 20,000 ರೂ.ಕ್ಕಿಂತ ಹೆಚ್ಚು ನಗದು ಸಾಲ ಪಡೆಯಬಾರದು.
5) ನಗದು ರೂಪದಲ್ಲಿ 2,000 ರೂ.ಗಿಂತ ಹೆಚ್ಚು ದೇಣಿಗೆ ನೀಡುವಂತಿಲ್ಲ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.