ಈ ಸೇವೆಯನ್ನು ಉಚಿತವಾಗಿ ನೀಡುತ್ತಿದೆ ರೈಲ್ವೆ! ಪ್ರತಿ ಪ್ರಯಾಣಿಕರೂ ಪಡೆಯಬಹುದು ಇದರ ಲಾಭ

Indian Railways WiFi:ರೈಲ್ವೇಯಿಂದಲೂ ಯಾತ್ರಾರ್ಥಿಗಳಿಗೆ ಹಲವು ಉಚಿತ ಸೇವೆಗಳನ್ನು ನೀಡಲಾಗುತ್ತಿದೆ. ಪ್ರಯಾಣಿಕರು ರೈಲ್ವೆ ಒದಗಿಸುವ ಈ ಉಚಿತ ಸೇವೆಗಳ ಲಾಭವನ್ನು ಪಡೆಯಬಹುದು. 

Written by - Ranjitha R K | Last Updated : Mar 20, 2023, 12:29 PM IST
  • ಭಾರತದಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ.
  • ರೈಲು ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.
  • ರೈಲ್ವೇಯಿಂದ ಪ್ರಯಾಣಿಕರಿಗೆ ಉಚಿತ ಸೇವೆ ವೈಫೈ ಸೇವೆ
ಈ ಸೇವೆಯನ್ನು ಉಚಿತವಾಗಿ ನೀಡುತ್ತಿದೆ ರೈಲ್ವೆ! ಪ್ರತಿ ಪ್ರಯಾಣಿಕರೂ ಪಡೆಯಬಹುದು ಇದರ ಲಾಭ  title=

Indian Railway : ಭಾರತದಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ದೂರದ ಊರುಗಳಿಗೆ ಪ್ರಯಾಣ ಬೆಳೆಸುವವರು ತಮ್ಮ ಯಾನ ಸುಲಭವಾಗಿರಲಿ ಎನ್ನುವ ಕಾರಣಕ್ಕೆ  ರೈಲು ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ರೈಲ್ವೇಯಿಂದಲೂ ಯಾತ್ರಾರ್ಥಿಗಳಿಗೆ ಹಲವು ಉಚಿತ ಸೇವೆಗಳನ್ನು ನೀಡಲಾಗುತ್ತಿದೆ. ಪ್ರಯಾಣಿಕರು ರೈಲ್ವೆ ಒದಗಿಸುವ ಈ ಉಚಿತ ಸೇವೆಗಳ ಲಾಭವನ್ನು ಪಡೆಯಬಹುದು. 

ರೈಲ್ವೇಯಿಂದ ಪ್ರಯಾಣಿಕರಿಗೆ ಉಚಿತ  ಸೇವೆ ವೈಫೈ ಸೇವೆ : 
ರೈಲ್ವೆಯಿಂದ ಪ್ರಯಾಣಿಕರಿಗೆ ಉಚಿತ ವೈಫೈ ಸೇವೆಯನ್ನು ನೀಡಲಾಗುತ್ತಿದೆ. ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಉಚಿತ ವೈಫೈ ಬಳಸಬಹುದು. ರೈಲು ನಿಲ್ದಾಣಕ್ಕೆ ಹೋದಾಗಲೆಲ್ಲಾ ಪ್ರಯಾಣಿಕರು ಅಲ್ಲಿ ಉಚಿತ ವೈಫೈ ಬಳಸಬಹುದು. ಪ್ರಯಾಣಿಕರು ತಮ್ಮ ಮೊಬೈಲ್‌ ಗೆ ಉಚಿತ ವೈಫೈ ಸೌಲಭ್ಯವನ್ನು ಪಡೆಯಬಹುದು.

ಇದನ್ನೂ ಓದಿ : ಪ್ಯಾನ್‌ ಕಾರ್ಡ್‌ದಾರರೇ ಗಮನಿಸಿ ಮಾರ್ಚ್ 31ರವರೆಗೆ ಈ ಕೆಲಸ ಮಾಡದಿದ್ದರೆ ಭಾರೀ ನಷ್ಟ

6,100 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿಉಚಿತ ವೈಫೈ  :
ಭಾರತೀಯ ರೈಲ್ವೆಯು ಭಾರತದ 6100 ಕ್ಕೂ ಹೆಚ್ಚು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯನ್ನು ಒದಗಿಸಲು ಪ್ರಾರಂಭಿಸಿದೆ. ಮೊದಲು ಈ ಸೇವೆಯನ್ನು 2016 ರಲ್ಲಿ ಮುಂಬೈ ರೈಲು ನಿಲ್ದಾಣದಲ್ಲಿ ಪ್ರಾರಂಭಿಸಲಾಯಿತು. ಗ್ರಾಮೀಣ ಭಾರತದಲ್ಲಿ ಹೆಚ್ಚು ಡೇಟಾವನ್ನು ಬಳಸಲಾಗುತ್ತದೆ. ಆದ್ದರಿಂದ, ವೈಫೈ ಸೌಲಭ್ಯವು ಗ್ರಾಮೀಣ ಜನರು ಉಚಿತವಾಗಿ ಇಂಟರ್ನೆಟ್  ಅಕ್ಸೆಸ್ ಪಡೆಯಲು ಸಹಾಯ ಮಾಡುತ್ತದೆ.

ಇಂಟರ್ನೆಟ್ ಸೌಲಭ್ಯ :
ನಮ್ಮ ದೇಶದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 5000 ನಿಲ್ದಾಣಗಳಿವೆ. ಈ ಪ್ರದೇಶಗಳು ಕಾಶ್ಮೀರ ಕಣಿವೆಯಲ್ಲಿ 15 ನಿಲ್ದಾಣಗಳನ್ನು ಹೊಂದಿರುವ ಎಲ್ಲಾ ಈಶಾನ್ಯ ರಾಜ್ಯಗಳನ್ನು ಒಳಗೊಂಡಿವೆ. ಇದು ದೇಶದ ಡಿಜಿಟಲ್ ಇಂಡಿಯಾ ಕಾರ್ಯಕ್ರಮಕ್ಕೆ ಆಡ್-ಆನ್ ಆಗಿದ್ದು, ಹಲವಾರು ರೈಲು ನಿಲ್ದಾಣಗಳಲ್ಲಿ  ಅಕ್ಸೆಸ್ ಪಡೆಯಬಹುದಾದ ವೈ-ಫೈ ಇಂಟರ್ನೆಟ್ ಸೌಲಭ್ಯಗಳನ್ನು ಒದಗಿಸಲು ಯೋಜನೆಯನ್ನು ಹೊಂದಿಸಲಾಗಿದೆ. ಇದರೊಂದಿಗೆ, ಭಾರತವು ತನ್ನ ಸಾರ್ವಜನಿಕರಿಗೆ ರೈಲ್ವೆ ನಿಲ್ದಾಣಗಳಲ್ಲಿ ವಿಶ್ವದ ಅತಿದೊಡ್ಡ ಮತ್ತು ವೇಗದ ಸಾರ್ವಜನಿಕ ಇಂಟರ್ನೆಟ್ ಪೂರೈಕೆದಾರನಾಗುವ ಹಾದಿಯಲ್ಲಿದೆ.

ಇದನ್ನೂ ಓದಿ : ತೆರಿಗೆದಾರರೇ ಗಮನಿಸಿ! ಈ ಒಂದು ಕೆಲಸ ಮಾಡದಿದ್ದಲ್ಲಿ ತೆರಬೇಕಾದೀತು ಹೆಚ್ಚು ಟ್ಯಾಕ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News