Sukanya Samrudhi Scheme : ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಹೆಚ್ಚಿನ ಬಡ್ಡಿ ಪಡೆಯಬೇಕಾದರೆ ಏನು ಮಾಡಬೇಕು ?
Sukanya Samrudhi Scheme :ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಇತರ ವೆಚ್ಚಗಳಿಗಾಗಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಅವಕಾಶವನ್ನು ಈ ಮೂಲಕ ಸರ್ಕಾರ ಒದಗಿಸುತ್ತದೆ. ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮೋದಿ ಸರ್ಕಾರವು 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು.
Sukanya Samrudhi Scheme : ದೇಶದ ಮಹಿಳೆಯರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತವೆ. ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸುಕನ್ಯಾ ಸಮೃದ್ಧಿ ಯೋಜನೆ (SSY) ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ನಡೆಸುತ್ತಿರುವ ಯೋಜನೆಯಾಗಿದೆ. ಹೆಣ್ಣು ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮೋದಿ ಸರ್ಕಾರವು 2015ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿತು.
ಹೆಣ್ಣು ಮಗುವಿನ ಉನ್ನತ ಶಿಕ್ಷಣ ಮತ್ತು ಇತರ ವೆಚ್ಚಗಳಿಗಾಗಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವ ಅವಕಾಶವನ್ನು ಈ ಮೂಲಕ ಸರ್ಕಾರ ಒದಗಿಸುತ್ತದೆ. ಸುಕನ್ಯಾ ಸಮೃದ್ದಿ ಯೋಜನೆ ಅಡಿಯಲ್ಲಿ, 10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಸುಕನ್ಯಾ ಸಮೃತಿ ಯೋಜನೆ ಖಾತೆಯನ್ನು ಅಂಚೆ ಕಚೇರಿ ಮತ್ತು ಅಧಿಕೃತ ಬ್ಯಾಂಕ್ ಶಾಖೆಗಳಲ್ಲಿ ತೆರೆಯಬಹುದು.
ಇದನ್ನೂ ಓದಿ : Salary Hike: ಇಂದು ಸಂಜೆಯೊಳಗೆ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಈ ಗುಡ್ ನ್ಯೂಸ್?
ಈ ಯೋಜನೆಯ ಲಾಭ ಪಡೆಯಬೇಕಾದರೆ ಯಾರ ಹೆಸರಿನಲ್ಲಿ ಹೂಡಿಕೆ ಮಾಡಲಾಗುತ್ತದೆಯೋ ಆ ಹೆಣ್ಣು ಮಗುವಿನ ಜನನ ಪ್ರಮಾಣಪತ್ರವನ್ನು ಬ್ಯಾಂಕ್‌ಗೆ ಸಲ್ಲಿಸಬೇಕು . ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.50 ಲಕ್ಷ ರೂಪಾಯಿಗಳವರೆಗೆ ಪಾವತಿಸಬಹುದು. ಈ ಯೋಜನೆಯು ಪ್ರಸ್ತುತ 8.2% ಬಡ್ಡಿಯನ್ನು ನೀಡುತ್ತಿದೆ. ಬಡ್ಡಿದರಗಳನ್ನು ಸರ್ಕಾರವು ಕಾಲಕಾಲಕ್ಕೆ ಬದಲಾಯಿಸುತ್ತದೆ.
ಹೆಣ್ಣು ಮಗುವಿಗೆ 15 ವರ್ಷ ವಯಸ್ಸಾಗುವವರೆಗೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.ನಂತರ, 18 ವರ್ಷವನ್ನು ತಲುಪಿದ ನಂತರ 50 ರಷ್ಟು ಮೊತ್ತವನ್ನು ಹಿಂಪಡೆಯಬಹುದು. ಖಾತೆ ತೆರೆದ ನಂತರ 21 ವರ್ಷಗಳವರೆಗೆ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಈ ಯೋಜನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಖಾತೆ ತೆರೆಯುವ ಅವಕಾಶವಿದೆ.
2000 ಠೇವಣಿ ಮಾಡಿದರೆ ಎಷ್ಟು ಸಿಗುತ್ತದೆ? :
ನೀವು ಪ್ರತಿ ತಿಂಗಳು ಸುಕನ್ಯಾ ಸಮೃತಿ ಯೋಜನೆಯಲ್ಲಿ 2,000 ರೂಪಾಯಿ ಹೂಡಿಕೆ ಮಾಡಿದರೆ, ಮೆಚ್ಯೂರಿಟಿಯ ನಂತರ ನಮಗೆ ಬಡ್ಡಿಯೊಂದಿಗೆ ಎಷ್ಟು ಸಿಗುತ್ತದೆ ನೋಡೋಣ.
ಇದನ್ನೂ ಓದಿ : Gold And Silver Price: ಭಾರತದಲ್ಲಿ ಚಿನ್ನದ ಬೆಲೆ ಹೆಚ್ಚಳ: ಬೆಳ್ಳಿಯ ದರ ಕುಸಿತ!
ತಿಂಗಳಿಗೆ ಎರಡು ಸಾವಿರ ರೂಪಾಯಿ ಠೇವಣಿ ಇಟ್ಟರೆ ವಾರ್ಷಿಕ ಹೂಡಿಕೆ 24 ಸಾವಿರ ಆಗುತ್ತದೆ. ಅಂದರೆ 15 ವರ್ಷಗಳಲ್ಲಿ ಈ ಹೂಡಿಕೆ 3 ಲಕ್ಷ 60 ಸಾವಿರ ರೂ. 21 ವರ್ಷಗಳ ಮುಕ್ತಾಯದ ನಂತರ, ಈ ಯೋಜನೆಯಡಿಯಲ್ಲಿ ಮಗಳ ಖಾತೆಗೆ 11,09,224 ರೂಪಾಯಿಯನ್ನು ಮೊತ್ತವನ್ನು ಪಾವತಿಸಲಾಗುತ್ತದೆ. ಆದರೆ, ಬಡ್ಡಿದರಗಳಲ್ಲಿನ ಬದಲಾವಣೆಗಳಿಂದ ಮೊತ್ತವು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಈ ಲೆಕ್ಕಾಚಾರವನ್ನು ಪ್ರಸ್ತುತ ಬಡ್ಡಿದರಗಳ ಆಧಾರದ ಮೇಲೆ ನೀಡಲಾಗಿದೆ.
5 ಸಾವಿರ ಹೂಡಿಕೆ ಮಾಡಿದರೆ ಎಷ್ಟು ಹಣ ಪಡೆಯಬಹುದು ? :
ಪ್ರತಿ ತಿಂಗಳು 5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 15 ವರ್ಷಗಳಲ್ಲಿ ನಿಮ್ಮ ಮೊತ್ತ 9 ಲಕ್ಷ ಹೂಡಿಕೆ ಮಾಡಿದ ಹಾಗೆ ಆಗುತ್ತದೆ. 21 ವರ್ಷಗಳ ಮುಕ್ತಾಯದ ನಂತರ 27,73,059 ಹಣವನ್ನು ಪಾವತಿಸಲಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.