Salary Hike: ಇಂದು ಸಂಜೆಯೊಳಗೆ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಈ ಗುಡ್ ನ್ಯೂಸ್?

Lok Sabha Election 2024 ಸಮೀಪಿಸುತ್ತಿದೆ. ಅದಕ್ಕೂ ಮುನ್ನ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರಿಗೆ ಭಾರಿ ಗುಡ್ ನ್ಯೂಸ್ ನೀಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಹೌದು ದೇಶಾದ್ಯಂತದ 50 ಲಕ್ಷ ನೌಕರರು ಹಾಗೂ 62 ಲಕ್ಷ ಪಿಂಚಣಿದಾರರಿಗೆ ವೇತನ ಹೆಚ್ಚಳದ (Salary Hike) ಬಗ್ಗೆ ಸರ್ಕಾರ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ (Business News In Kannada)  

Written by - Nitin Tabib | Last Updated : Mar 7, 2024, 03:32 PM IST
  • ಸಾಮಾನ್ಯವಾಗಿ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.
  • ಸಾಮಾನ್ಯವಾಗಿ ಇದು ಜನವರಿ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಿಸಲಾಗುತ್ತದೆ.
  • ಈ ಹಿಂದೆ ಅಕ್ಟೋಬರ್ 2023 ರಲ್ಲಿ ಕೇಂದ್ರ ನೌಕರರ ಡಿಎಯನ್ನು ಶೇ. 4 ರಷ್ಟು ಹೆಚ್ಚಿಸಲಾಗಿತ್ತು.
Salary Hike: ಇಂದು ಸಂಜೆಯೊಳಗೆ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಈ ಗುಡ್ ನ್ಯೂಸ್? title=

Salary Hike: ಲೋಕಸಭೆ ಚುನಾವಣೆಗಳ ವೇಳಾಪಟ್ಟಿ ಪ್ರಕಟನೆಗೆ ಕೌಂಟ್ ಡೌನ್ ಆರಂಭಗೊಂಡಿದೆ. ಆದರೆ, ಅದಕ್ಕೂ ಮುನ್ನ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ (Modi Government ) ದೇಶಾದ್ಯಂತ ಇರುವ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 62 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಈ ಸಂಜೆ ಮೊದಲು ಗುಡ್ ನ್ಯೂಸ್ ಪ್ರಕಟಿಸುವ ಸಾಧ್ಯತೆ. ಇದೆ. ಅರ್ಥಾತ್ ಇಂದು ಸಂಜೆ ಕೇಂದ್ರ ನೌಕರರ ಡಿಎ-ಡಿಆರ್ ನಲ್ಲಿ ಶೇ.4ರಷ್ಟು ಹೆಚ್ಚಳ ಘೋಷಣೆಯಾಗುವ ನಿರೀಕ್ಷೆಯಿದೆ.

ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳ 
ಇಂದು ಸಂಜೆ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು. ಈ ಸಭೆಯಲ್ಲಿ ಡಿಎ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೇಂದ್ರ ಸರ್ಕಾರ ಕೈಗೊಳ್ಳುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರವು ನೌಕರರಿಗೆ (Central Government Employees) ತುಟ್ಟಿಭತ್ಯೆ (ಡಿಎ) ಯಲ್ಲಿ ಶೇ.4 ರಷ್ಟು ಹೆಚ್ಚಳವನ್ನು ಘೋಷಿಸಬಹುದು. ಸರ್ಕಾರವು ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದರೆ, ಕೇಂದ್ರ ನೌಕರರ ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪಲಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರ ಸೂಚನೆಗಳು ತುಟ್ಟಿ ಭತ್ಯೆಗೆ ಸಂಬಂಧಿಸಿದಂತೆ ಇಂದು ಪರಿಹಾರ ಸಿಗುವ ಭರವಸೆಯನ್ನು ಮೂಡಿಸಿವೆ. 

ತುಟ್ಟಿಭತ್ಯೆ ಯಾವಾಗ ಹೆಚ್ಚಾಗುತ್ತದೆ?
ಸಾಮಾನ್ಯವಾಗಿ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ. ಸಾಮಾನ್ಯವಾಗಿ ಇದು ಜನವರಿ ಮತ್ತು ಜುಲೈ ತಿಂಗಳಲ್ಲಿ ಹೆಚ್ಚಿಸಲಾಗುತ್ತದೆ. ಈ ಹಿಂದೆ ಅಕ್ಟೋಬರ್ 2023 ರಲ್ಲಿ ಕೇಂದ್ರ ನೌಕರರ ಡಿಎಯನ್ನು ಶೇ. 4 ರಷ್ಟು ಹೆಚ್ಚಿಸಲಾಗಿತ್ತು. ಈ ಹೆಚ್ಚಳದ ನಂತರ ಕೇಂದ್ರ ನೌಕರರ ಡಿಎ ಶೇ.42ರಿಂದ ಶೇ.46ಕ್ಕೆ ಏರಿಕೆಯಾಗಿದೆ. ಇದೀಗ ಮತ್ತೆ ಡಿಎಯಲ್ಲಿ ಶೇ. 4 ರಷ್ಟು ಹೆಚ್ಚಳವಾದರೆ ತುಟ್ಟಿಭತ್ಯೆ ಶೇ. 50 ಕ್ಕೆ ತಲುಪಲಿದೆ. ಡಿಎ ಹೆಚ್ಚಳದ ಜೊತೆಗೆ ಮನೆ ಬಾಡಿಗೆ ಭತ್ಯೆ (ಎಚ್ ಆರ್ ಎ), ಮಕ್ಕಳ ಶಿಕ್ಷಣ ಭತ್ಯೆ, ಸಾರಿಗೆ ಭತ್ಯೆ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ. ಅಂದರೆ ಕೇಂದ್ರ ನೌಕರರ ಟೇಕ್ ಹೋಮ್ ಸ್ಯಾಲರಿ ಹೆಚ್ಚಾಗಲಿದೆ.

ಇದನ್ನೂ ಓದಿ-StartUp Idea: ಅತ್ಯಂತ ಕಡಿಮೆ ಹೂಡಿಕೆಯಲ್ಲಿ ಈ ಉದ್ಯಮ ಆರಂಭಿಸಿ, ತಿಂಗಳಿಗೆ ಕೈತುಂಬಾ ಹಣ ಕೊಡುತ್ತೇ!

ಡಿಎ ಅನ್ನು ಹೇಗೆ ಲೆಕ್ಕಾಚಾರ ಹಾಕಲಾಗುತ್ತದೆ?
ಸಾರ್ವಜನಿಕ ವಲಯದ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಹೆಚ್ಚಳವನ್ನು ದೇಶದ ಪ್ರಸ್ತುತ ಹಣದುಬ್ಬರಕ್ಕೆ ಅನುಗುಣವಾಗಿ ಲೆಕ್ಕಹಾಕಲಾಗುತ್ತದೆ. ಅಖಿಲ ಭಾರತ ಸಿಪಿಐ-ಐಡಬಲ್ಯು ದತ್ತಾಂಶದ ಆಧಾರದ ಮೇಲೆ ತುಟ್ಟಿಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಕೈಗಾರಿಕಾ ಕಾರ್ಮಿಕರ ಸಿಪಿಐ-ಐಡಬಲ್ಯು ಸರಾಸರಿ 392.83 ಇದೆ. ಇದರ ಪ್ರಕಾರ, ಡಿಎ ಮೂಲ ವೇತನದ ಶೇ. 50.26 ಆಗುತ್ತದೆ.

ಇದನ್ನೂ ಓದಿ-Internet Banking ಗಾಗಿ ಬರಲಿದೆ ಹೊಸ ವ್ಯವಸ್ಥೆ, ಆರ್ಬಿಐನಿಂದ ಮಹತ್ವದ ಘೋಷಣೆ!

4 ರಷ್ಟು ಡಿಎ ಹೆಚ್ಚಾದರೆ, ನೌಕರರ ವೇತನ ಎಷ್ಟು ಹೆಚ್ಚಾಗುತ್ತದೆ?
ಡಿಎ ಹೆಚ್ಚಳದಿಂದ ನೌಕರರ ಟೇಕ್ ಹೋಮ್ ಸ್ಯಾಲರಿ ಹೆಚ್ಚಾಗುತ್ತದೆ. ಇದರ ಲೆಕ್ಕಾಚಾರವನ್ನು ಮೂಲ ವೇತನದ ಪ್ರಕಾರ ನಡೆಸಲಾಗುತ್ತದೆ. ನೌಕರನ ಮೂಲ ವೇತನ 18000 ರೂ ಎಂದು ಭಾವಿಸೋಣ. ಅದರಂತೆ ಪ್ರಸ್ತುತ ಅವರು ಶೇ.46 ರ ದರದಲ್ಲಿ  8280 ರೂ.ಗಳನ್ನು ತುಟ್ಟಿ ಭತ್ಯೆ  ಪಡೆಯುತ್ತಿದ್ದಾರೆ. ಮತ್ತೆ ಶೇ. 4 ರಷ್ಟು ಹೆಚ್ಚಾಗಿ ಒಟ್ಟು ತುಟ್ಟಿಭತ್ಯೆ ಶೇ. 50 ಕ್ಕೆ ತಲುಪಿದರೆ, ಡಿಎ 9000 ರೂ. ಆಗುತ್ತದೆ. ಅಂದರೆ ತುಟ್ಟಿಭತ್ಯೆ ಹೆಚ್ಚಳದೊಂದಿಗೆ ನೇರವಾಗಿ 720 ರೂಪಾಯಿ ವೇತನ ಹೆಚ್ಚಳವಾಗಲಿದೆ. ವಾರ್ಷಿಕ ಆಧಾರದ ಮೇಲೆ 8640 ರೂ.ಗಳಷ್ಟು ವೇತನ ಹೆಚ್ಚಾಗುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News