EPFO UAN Update : ಎಲ್ಲಾ ಕಚೇರಿ ನೌಕರರು EPF ಸದಸ್ಯರಾಗಿರುತ್ತಾರೆ.  ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳ ಭವಿಷ್ಯ ನಿಧಿ ಖಾತೆಗಳನ್ನು ನಿರ್ವಹಿಸುತ್ತದೆ. ಉದ್ಯೋಗಿಗಳು ತಮ್ಮ ಮಾಸಿಕ ವೇತನದ ಒಂಡು ನಿರ್ದಿಷ್ಟ ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ಕಂಪನಿಯು ಕೂಡಾ ಅಷ್ಟೇ ಮೊತ್ತವನ್ನು ಠೇವಣಿ ಮಾಡುತ್ತದೆ. ಇಪಿಎಫ್ ಮೊತ್ತವು ನಿವೃತ್ತಿಯ ನಂತರ ಉದ್ಯೋಗಿಗಳಿಗೆ ಸಹಾಯಕ್ಕೆ ಬರುತ್ತದೆ. EPF ಖಾತೆಗಳಿಗೆ ಸಂಬಂಧಿಸಿದ ಅನೇಕ  ಅಪ್ಡೇಟ್ ಗಳು ಕಾಲಕಾಲಕ್ಕೆ ಬಿಡುಗಡೆಯಾಗುತ್ತವೆ. ಇದಕ್ಕೆ ಅನುಸಾರವಾಗಿ  ಇಪಿಎಫ್ ಸದಸ್ಯರು ಇವುಗಳನ್ನು ನವೀಕರಿಸುತ್ತಿರಬೇಕು. 


COMMERCIAL BREAK
SCROLL TO CONTINUE READING

EPF ಸದಸ್ಯರು EPFO​​ನಲ್ಲಿ ನೀಡಿರುವ ಮಾಹಿತಿಯನ್ನು ಕೂಡಾ ಅಪ್ಡೇಟ್ ಮಾಡಬಹುದು. ನಿಮ್ಮ UAN ಪ್ರೊಫೈಲ್ ಅನ್ನು ನವೀಕರಿಸಲು ಸದಸ್ಯರು ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. 


ಇದನ್ನೂ ಓದಿ : ನಿಮ್ಮ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇಷ್ಟೇ ಹಣ ಇರಿಸಬಹುದು! ಹೆಚ್ಚಿದ್ದರೆ ಈ ಕ್ರಮಕ್ಕೆ ಸಿದ್ದರಾಗಬೇಕು !


ಮಾರ್ಚ್ 11, 2024ರಂದು ಇಪಿಎಫ್‌ಒದ ಪರಿಷ್ಕೃತ ಅಧಿಸೂಚನೆಯ ಪ್ರಕಾರ, ಪಿಎಫ್ ಅರ್ಜಿದಾರರು ಅರ್ಜಿ ಸಲ್ಲಿಸುವಾಗ ಸದಸ್ಯರ ತಂದೆ/ತಾಯಿಯ ಹೆಸರಿನಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, 10ನೇ ಅಥವಾ 12ನೇ ಅಂಕ ಪಟ್ಟಿ ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನು ಸಲ್ಲಿಸಬಹುದು. 


ಉದ್ಯೋಗಿ ತನ್ನ ಅಧಿಕಾರಾವಧಿಯಲ್ಲಿ ಎಷ್ಟು ವಿವರಗಳನ್ನು ಬದಲಾಯಿಸಬಹುದು? ಯಾವ ವಿವರಗಳನ್ನು ಎಡಿಟ್ ಮಾಡಬಹುದು? ಇವುಗಳನ್ನು ಎಷ್ಟು ಬಾರಿ ಬದಲಾಯಿಸಬಹುದು ಎನ್ನುವ ಪ್ರಶ್ನೆ ನಿಮ್ಮನ್ನುಕಾದುತ್ತಿದ್ದರೆ ಅದಕ್ಕೆ ಉತ್ತರ ಇಲ್ಲಿದೆ. ಒಬ್ಬ ಸದಸ್ಯ 11 ವಿವರಗಳನ್ನು ಬದಲಾಯಿಸಬಹುದು. ಉದ್ಯೋಗಿಗಳು ಯಾವ ಮಾಹಿತಿಯನ್ನು ಎಷ್ಟು ಬಾರಿ  ಎಡಿಟ್ ಮಾಡಬಹುದು ಎನ್ನುವ ಮಾಹಿತಿ ಇಲ್ಲಿದೆ. 


ಸದಸ್ಯರ ಹೆಸರು - 1 ಬಾರಿ
ಜಾತಿ - 1 ಬಾರಿ
ಹುಟ್ಟಿದ ದಿನಾಂಕ - 1 ಬಾರಿ
ತಂದೆ/ತಾಯಿಯ ಹೆಸರು - 1 ಬಾರಿ
ಸಂಬಂಧ - 1 ಬಾರಿ
ವೈವಾಹಿಕ ಸ್ಥಿತಿ - 2 ಬಾರಿ
ಜೋಯ್ನಿಂಗ್ ಡೇಟ್  - 1 ಬಾರಿ
ಲಿವಿಂಗ್ ಡೇಟ್ - 1 ಬಾರಿ
ಬಿಡಲು ಕಾರಣ - 1 ಬಾರಿ
ಪೌರತ್ವ - 1 ಬಾರಿ
ಆಧಾರ್ ಸಂಖ್ಯೆ - 1 ಬಾರಿ


ಇದನ್ನೂ ಓದಿ : Bharat Rice: ಮಾಲ್‌ ಮತ್ತು ಆನ್‌ಲೈನ್‌ನಲ್ಲಿಯೂ 29 ರೂ. ಕೆಜಿ ʼಭಾರತ್‌ ಅಕ್ಕಿʼ ಮಾರಾಟ


ನಿಯಮಿತ ಕೆಲಸದ ಸಮಯದಲ್ಲಿ, ಮೇಲೆ ತಿಳಿಸಲಾದ ಯಾವುದೇ 11 ವಿಷಯಗಳನ್ನು ಬದಲಾಯಿಸಲು EPF ಸದಸ್ಯರು ಐದು ಬಾರಿ ವಿನಂತಿಗಳನ್ನು ಮಾಡಬಹುದು. 


ಈ ಡಾಕ್ಯುಮೆಂಟ್‌ಗಳೊಂದಿಗೆ ನಿಮ್ಮ UAN ಪ್ರೊಫೈಲ್ ಅನ್ನು ಅಪ್ಡೇಟ್ ಮಾಡಬಹುದು. 
EPFO UAN ಪ್ರೊಫೈಲ್ ಅಪ್‌ಡೇಟ್‌ಗೆ ಅಗತ್ಯವಿರುವ ದಾಖಲೆಗಳು :
- ಸದಸ್ಯರ ಹೆಸರು
- ಲಿಂಗ
- ಹುಟ್ಟಿದ ದಿನಾಂಕ
- ತಂದೆ/ತಾಯಿಯ ಹೆಸರು
- ವೈವಾಹಿಕ ಸ್ಥಿತಿ
- ಆಧಾರ್ ಸಂಖ್ಯೆ


ಸದಸ್ಯರಿಗೆ ಸಂಬಂಧಿಸಿದಂತೆ ವಿವರಗಳನ್ನು ಸರಿಪಡಿಸಲು ಈ ದಾಖಲೆಗಳನ್ನು ತಾಯಿ/ತಂದೆಯ ಹೆಸರಿನಲ್ಲಿ ಸಲ್ಲಿಸಬೇಕು. 
- ತಾಯಿ / ತಂದೆಯ ಪಾಸ್‌ಪೋರ್ಟ್ 
- ರೇಷನ್ ಕಾರ್ಡ್ / PDS ಕಾರ್ಡ್ 
- CGHS / ECHS / ಮೆಡಿ-ಕ್ಲೈಮ್ ಕಾರ್ಡ್ /PSU ಕಾರ್ಡ್ ಕೇಂದ್ರ 
- ಪಿಂಚಣಿ ಕಾರ್ಡ್ 
- ಪುರಸಭೆಯಿಂದ ನೀಡಿದ ಜನನ ಪ್ರಮಾಣಪತ್ರ 
- ಸರ್ಕಾರ ನೀಡಿದ ವಿವಾಹ ಪ್ರಮಾಣಪತ್ರ 
- ಕೇಂದ್ರ/ರಾಜ್ಯ ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿ
- ಜನ ಆಧಾರ್, MNREGA, ಸೇನಾ ಕ್ಯಾಂಟೀನ್ ಕಾರ್ಡ್ 


ಇದನ್ನೂ ಓದಿ :  ಏನಿದು No Cost EMI? ನಿಜಕ್ಕೂ ಹೆಚ್ಚುವರಿ ಹಣ ಪಾವತಿಸಬೇಕಾಗುವುದಿಲ್ಲವೇ?


ಹುಟ್ಟಿದ ದಿನಾಂಕವನ್ನು ಸರಿಪಡಿಸಲು ಈ ದಾಖಲೆಗಳು ಅಗತ್ಯವಿದೆ : 
- ಜನನ ಮತ್ತು ಮರಣಗಳ ರಿಜಿಸ್ಟ್ರಾರ್ ನೀಡಿದ ಜನನ ಪ್ರಮಾಣಪತ್ರ
- ಮಾನ್ಯತೆ ಪಡೆದ ಸರ್ಕಾರಿ ಮಂಡಳಿ ಅಥವಾ ವಿಶ್ವವಿದ್ಯಾನಿಲಯದಿಂದ ನೀಡಲಾದ ಮಾರ್ಕ್ ಪಟ್ಟಿ 
- ಕೇಂದ್ರ/ರಾಜ್ಯ ಸರ್ಕಾರಿ ಸೇವಾ ರಿಜಿಸ್ಟರ್ ಆಧಾರಿತ ಪ್ರಮಾಣಪತ್ರ 
- ಜನ್ಮ ದಿನಾಂಕದ ಪುರಾವೆಯೊಂದಿಗೆ ವೈದ್ಯಕೀಯ ಪ್ರಮಾಣಪತ್ರ 
- ಆಧಾರ್ ಕಾರ್ಡ್
- ಪಾಸ್‌ಪೋರ್ಟ್ 
- ಪ್ಯಾನ್ ನೀಡುವ ಐಡಿ ಇಲಾಖೆ
- ಕೇಂದ್ರ/ರಾಜ್ಯ ಸರ್ಕಾರ ಪಿಂಚಣಿ ಪಾವತಿ ಆದೇಶ 
- ಕೇಂದ್ರ/ರಾಜ್ಯ ಯುಟಿ ಸರ್ಕಾರ CGHS/ECHS/ಮೆಡಿ-ಕ್ಲೈಮ್ ಕಾರ್ಡ್
- ಸರ್ಕಾರದಿಂದ ನೀಡಲಾದ ನಿವಾಸ ಪ್ರಮಾಣಪತ್ರ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ