NPS New Rule: ನ್ಯಾಷನಲ್ ಪೆನ್ಷನ್ ಸಿಸ್ಟಮ್ ನಿಯಮದಲ್ಲಿ ಬದಲಾವಣೆ, ಈ ದಿನದಿಂದ ನಿಯಮ ಜಾರಿ

NPS New Rule: ಈ ಹೊಸ ಸೆಕ್ಯೂರಿಟಿ ಪ್ರೋಟೋಕಾಲ್‌ ಒಂದೊಮ್ಮೆ ಅನುಷ್ಠಾನಗೊಂಡ ಬಳಿಕ, NPS ಚಂದಾದಾರರು ಇನ್ಮುಂದೆ ತಮ್ಮ ಖಾತೆಗೆ ಲಾಗಿನ್ ಆಗಲು ಆಧಾರ್‌ನೊಂದಿಗೆ ದೃಢೀಕರಿಸಿ (two factor authentication aadhaar otp verification compulsory), ರಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಬೇಕಾಗಲಿದೆ (Business News In Kannada)  

Written by - Nitin Tabib | Last Updated : Mar 21, 2024, 04:37 PM IST
  • ಸುತ್ತೋಲೆಯ ಪ್ರಕಾರ, NPS ನ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ (CRA) ವ್ಯವಸ್ಥೆಯು
  • ಅಸ್ತಿತ್ವದಲ್ಲಿರುವ ಬಳಕೆದಾರ ID ಮತ್ತು ಪಾಸ್‌ವರ್ಡ್ ಆಧಾರಿತ ಲಾಗಿನ್ ಪ್ರಕ್ರಿಯೆಗೆ
  • ಆಧಾರ್ ಆಧಾರಿತ ಲಾಗಿನ್ ದೃಢೀಕರಣದ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ.
NPS New Rule: ನ್ಯಾಷನಲ್ ಪೆನ್ಷನ್ ಸಿಸ್ಟಮ್ ನಿಯಮದಲ್ಲಿ ಬದಲಾವಣೆ, ಈ ದಿನದಿಂದ ನಿಯಮ ಜಾರಿ title=

NPS New Rule: ಏಪ್ರಿಲ್ 1, 2024 ರಿಂದ ಸರ್ಕಾರಿ ಬೆಂಬಲಿತ ನಿವೃತ್ತಿ ಯೋಜನೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಚಂದಾದಾರರಿಗೆ ಸಂಬಂಧಿಸಿದ  ಪ್ರಮುಖ ನಿಯಮ ಬದಲಾಗುತ್ತಿದೆ. ಪೆನ್ಷನ್ ಫಂಡ್ ರೇಗ್ಯುಲೆಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA) NPS ಖಾತೆಗಳ ಭದ್ರತೆಗಾಗಿ ಮತ್ತೊಂದು ಹಂತವನ್ನು ಸೇರಿಸಿದೆ (two factor authentication aadhaar otp verification compulsory). ಇದಕ್ಕಾಗಿ ಮಾರ್ಚ್ 15 ರಂದು ಸುತ್ತೋಲೆ ಹೊರಡಿಸಲಾಗಿದ್ದು, ಇದೀಗ ಪಾಸ್‌ವರ್ಡ್ ಆಧಾರಿತ ಬಳಕೆದಾರರಿಗೆ ಸಿಆರ್‌ಎ ವ್ಯವಸ್ಥೆಯನ್ನು ಪ್ರವೇಶಿಸಲು ಎರಡು ಅಂಶಗಳ ಆಧಾರ್ ಆಧಾರಿತ ದೃಢೀಕರಣವನ್ನು ಕಡ್ಡಾಯಗೊಳಿಸಲಾಗಿದೆ. (Business News In Kannada)

ಆಧಾರ್ ಆಧಾರಿತ ದೃಢೀಕರಣ ನಿಯಮ 
ಸುತ್ತೋಲೆಯ ಪ್ರಕಾರ, NPS ನ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ (CRA) ವ್ಯವಸ್ಥೆಯು ಅಸ್ತಿತ್ವದಲ್ಲಿರುವ ಬಳಕೆದಾರ ID ಮತ್ತು ಪಾಸ್‌ವರ್ಡ್ ಆಧಾರಿತ ಲಾಗಿನ್ ಪ್ರಕ್ರಿಯೆಗೆ ಆಧಾರ್ ಆಧಾರಿತ ಲಾಗಿನ್ ದೃಢೀಕರಣದ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಈ ಹೊಸ ಸೆಕ್ಯೂರಿಟಿ ಪ್ರೋಟೋಕಾಲ್‌ ಒಂದೊಮ್ಮೆ ಅನುಷ್ಠಾನಗೊಂಡ ಬಳಿಕ, NPS ಚಂದಾದಾರರು ಇನ್ಮುಂದೆ ತಮ್ಮ ಖಾತೆಗೆ ಲಾಗಿನ್ ಆಗಲು ಆಧಾರ್‌ನೊಂದಿಗೆ ದೃಢೀಕರಿಸಿ, ರಜಿಸ್ಟರ್ಡ್ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಬೇಕಾಗಲಿದೆ. ಇದಕ್ಕಾಗಿ, PFRDA ಪ್ರಸ್ತುತ ಬಳಕೆದಾರ ID ಮತ್ತು ಪಾಸ್ವರ್ಡ್ ಆಧಾರಿತ ಲಾಗಿನ್ ಅನ್ನು ಸಂಯೋಜಿಸಲಿದೆ.

ಪ್ರಸ್ತುತ, NPS ಖಾತೆದಾರರಿಗೆ CRA ಸಿಸ್ಟಮ್‌ಗೆ ಲಾಗಿನ್ ಆಗಲು NPS ID ಮತ್ತು ಪಾಸ್‌ವರ್ಡ್ ಅಗತ್ಯವಿರುತ್ತದೆ, ಆದರೆ ಇದರ ನಂತರ ಅವರು ಆಧಾರ್ ಆಧಾರಿತ ಪರಿಶೀಲನೆಯನ್ನು ಮಾಡಬೇಕಾಗಲಿದೆ.

ಇದನ್ನೂ ಓದಿ-RBI Cancels Sunday Holiday: ವಾರದ ರಜೆ ಕ್ಯಾನ್ಸಲ್, ಭಾನುವಾರ ಕೂಡ ಬ್ಯಾಂಕ್ ತೆರೆಯಿರಿ, RBIನ ಈ ತೀರ್ಮಾನಕ್ಕೆ ಕಾರಣ ಏನು?

NPS ಖಾತೆಗೆ ಹೇಗೆ ಲಾಗಿನ್ ಆಗಬೇಕು
ಎರಡು ಅಂಶಗಳ ಆಧಾರ್ ದೃಢೀಕರಣವನ್ನು ಬಳಸಿಕೊಂಡು NPS ಖಾತೆಯನ್ನು ಪ್ರವೇಶಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

ಇದನ್ನೂ ಓದಿ-RBI Big Relief: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಆರ್ಬಿಐ, ಬಿಲ್ಲಿಂಗ್ ಗೂ ಹೊಸ ನಿಯಮ ಜಾರಿ!

>> ಇದಕ್ಕಾಗಿ ಮೊದಲು NPS ವೆಬ್‌ಸೈಟ್‌ಗೆ ಭೇಟಿ ನೀಡಿ: https://enps.nsdl.com/eNPS/NationalPensionSystem.html
>> ಬಳಿಕ 'Login with PRAIN/IPIN' ಆಯ್ಕೆಯನ್ನು ಕ್ಲಿಕ್ ಮಾಡಿ.
>> ಹೊಸ ವಿಂಡೋ ತೆರೆದ ಬಳಿಕ PRAIN/IPIN ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
>> ನಿಮ್ಮ ಯೂಸರ್ ID ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಮಾಡಿ.
>> ಕ್ಯಾಪ್ಚಾ ವೇರಿಫಿಕೇಶನ್ ಪೂರ್ಣಗೊಳಿಸಿ.
>> ಹೊಸ ವಿಂಡೋ ಆಧಾರ್ ದೃಢೀಕರಣವನ್ನು ಕೇಳುತ್ತದೆ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಅನ್ನು ಕಳುಹಿಸುತ್ತದೆ.
>> OTP ನಮೂದಿಸಿ.
>> ಈಗ ನೀವು ನಿಮ್ಮ NPS ಖಾತೆಯನ್ನು ತೆರೆಯಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News