OPS in Karnataka : ಕರ್ನಾಟಕ ಸರ್ಕಾರವು ತನ್ನ 13,000 ಉದ್ಯೋಗಿಗಳನ್ನು ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲಿ ತರಲು ಅಧಿಸೂಚನೆಯನ್ನು ಹೊರಡಿಸಿದೆ. ಯಾವ ಉದ್ಯೋಗಿಗಳು ಏಪ್ರಿಲ್ 1, 2006 ಕ್ಕೆ ಮೊದಲು ಅಧಿಸೂಚನೆ ಪಡೆದಿದ್ದರೋ ಆ ಎಲ್ಲಾ ಉದ್ಯೋಗಿಗಳು ಹಳೆ ಪಿಂಚಣಿ ಯೋಜನೆಯ ಲಾಭ ಪಡೆಯಲಿದ್ದಾರೆ. ಹೊಸ ಪಿಂಚಣಿ ಯೋಜನೆ ವಿರೋಧಿಸಿ ಮುಷ್ಕರ ನಡೆಸುತ್ತಿದ್ದ ಸರ್ಕಾರಿ ನೌಕರರಿಗೆ ನೀಡಿದ ಭರವಸೆಯನ್ನು ಈ ಮೂಲಕ ಈಡೇರಿಸುವುದಾಗಿ ಮುಖ್ಯಮತ್ರಿ ಸಿದ್ದರಾಮಯ್ಯ  ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ್ದರು.  


COMMERCIAL BREAK
SCROLL TO CONTINUE READING

ಇದೀಗ ಈ ನೌಕರರು ಹಳೇ ಪಿಂಚಣಿ ಯೋಜನೆಯ ಲಾಭ ಪಡೆಯಬೇಕಾದರೆ ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯ ಜೊತೆಗೆ ಅಗತ್ಯವಿರುವ ದಾಖಲೆಯನ್ನು ಕೂಡಾ ಸಲ್ಲಿಸಬೇಕಾಗುತ್ತದೆ. 


ಇದನ್ನೂ ಓದಿ : ಅಯೋಧ್ಯೆಗೆ ಪ್ರಯಾಣಿಸುವ ಭಕ್ತರಿಗೆ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆ ಪ್ರಕಟಿಸಿದ Paytm


ನೌಕರರು ಸಲ್ಲಿಸಬೇಕಾದ ಅರ್ಜಿ ನಮೂನೆಯ ವಿವರ ಹೀಗಿದೆ: 


ಮಾನ್ಯರೇ,  
ವಿಷಯ: ದಿನಾಂಕ 01/04/2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು : 


ಉಲ್ಲೇಖ: ಸರ್ಕಾರಿ ಆದೇಶ ಸಂ: ಆಇ-ಪಿಇಎನ್/99/2023, ದಿನಾಂಕ 24/01/2024 


....... ಇಲಾಖೆಯಲ್ಲಿ....... ಆಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ/ ಶ್ರೀಮತಿ..... ಆದ ನಾನು ಪ್ರಪ್ರಥಮವಾಗಿ.... ಇಲಾಖೆಯಲ್ಲಿ...... ಹುದ್ದೆಯಲ್ಲಿ ದಿನಾಂಕ...... ರಂದು ಸರ್ಕಾರಿ ಸೇವೆಯಲ್ಲಿ ವರದಿ ಮಾಡಿಕೊಂಡಿರುತ್ತೇನೆ. ಈ ಹುದ್ದೆಗೆ ನೇಮಕಾತಿ ಅಧಿಸೂಚನೆಯ ಪ್ರಕಟಣೆಯನ್ನು ದಿನಾಂಕ..... ರಂದು ಹೊರಡಿಸಲಾಗಿರುತ್ತದೆ. ನಾನು ಉಲ್ಲೇಖಿತ ಆದೇಶದನ್ವಯ ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡಲು ಅರ್ಹವಿರುವುದರಿಂದ ಹಿಂದಿನ ಡಿಫೈನ್ಡ್‌ ಪಿಂಚಣಿ ಯೋಜನಗೊಳಪಡಿಸಲು ನನ್ನ ಅಭಿಮತವನ್ನು ಈ ಮೂಲಕ ತಿಳಿಸುತ್ತಾ, ಈ ಕೆಳಕಂಡ ಮಾಹಿತಿ/ ದಾಖಲೆಗಳನ್ನು ಇದರೊಂದಿಗೆ ಸಲ್ಲಿಸುತ್ತಿದ್ದೇನೆ. 


ಅರ್ಜಿ ಸಲ್ಲಿಸುವ ವೇಳೆ ಸಲ್ಲಿಸಬೇಕಾದ ದಾಖಲೆಗಳು :  
- ಹುದ್ದೆಗಳ ಭರ್ತಿಗಾಗಿ ಪ್ರಕಟಿಸಲಾದ ನೇಮಕಾತಿ ಅಧಿಸೂಚನೆ ದಿನಾಂಕದ ಪ್ರತಿ  
- ಸಂಬಂಧಪಟ್ಟ ಆಯ್ಕೆ ಪಟ್ಟಿ ದಿನಾಂಕ ಪ್ರತಿ 
- ನೇಮಕಾತಿ ಆದೇಶ ದಿನಾಂಕ ಪ್ರತಿ 
- ನೇಮಕಾತಿಯ ನಂತರ ಇಲಾಖೆ ಬದಲಾವಣೆಯಾಗಿದ್ದರೆ ಅದರ ವಿವಿರವನ್ನು ಕೂಡಾ ಸಲ್ಲಿಸಬೇಕು. 
- ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿ/ ಇಲಾಖೆಯ ವಿಳಾಸ , 
- ಕೆಜಿಐಡಿ ಸಂಖ್ಯೆ,  NPS ಪ್ರಾನ್ ಸಂಖ್ಯೆ, 
-  ಪ್ರಸ್ತುತ ವೇತನ ಚೀಟಿ:


ಇದನ್ನೂ ಓದಿ : Budget 2024 : ಬಜೆಟ್ ಭಾಷಣವನ್ನು ಎಲ್ಲಿ ಮತ್ತು ಹೇಗೆ ಲೈವ್ ವೀಕ್ಷಿಸಬಹುದು? Budget ಪ್ರಕ್ರಿಯೆಯ ಸಂಪೂರ್ಣ ಟೈಮ್ ಟೇಬಲ್ ಇಲ್ಲಿದೆ.


ಅಲ್ಲದೆ, ಅರ್ಜಿ ನಮೂನೆ 2024 ಅನ್ನು ಸಲ್ಲಿಸಲು ಆಸಕ್ತಿ ಹೊಂದಿರುವ ಉದ್ಯೋಗಿ ಅಧಿಕೃತ ವೆಬ್‌ಸೈಟ್ ಅಂದರೆ https://finance.karnataka.gov.in/ ಗೆ ಭೇಟಿ ನೀಡುವ ಮೂಲಕ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. 


-ಹಳೆಯ ಪಿಂಚಣಿ ಯೋಜನೆಯ ಅಧಿಕೃತ ವೆಬ್‌ಪುಟಕ್ಕೆ ನ್ಯಾವಿಗೇಟ್ ಮಾಡಿ.
-ಮುಖಪುಟದಲ್ಲಿ Apply Online Link  ಅನ್ನು ಕ್ಲಿಕ್ ಮಾಡಿ.
-ಅದರ ನಂತರ, ಅರ್ಜಿ ನಮೂನೆಯು ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. 
-ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇತರ ಕಡ್ಡಾಯ ವಿವರಗಳನ್ನು ನಮೂದಿಸಿ.
-ಕೆಳಗೆ ತೋರಿಸಿರುವ Submit ಬಟನ್ ಮೇಲೆ ಕ್ಲಿಕ್ ಮಾಡಿ.
-ಇಷ್ಟು ಮಾಡಿದರೆ ನಿಮ್ಮ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿರುತ್ತದೆ. 


ಹಳೆಯ ಪಿಂಚಣಿ ಯೋಜನೆಗೆ ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ? : 
- ಅರ್ಜಿದಾರರು ಮೊದಲು ಅಧಿಕೃತ ವೆಬ್‌ಸೈಟ್ ಅಂದರೆ https://finance.karnataka.gov.in/ ಗೆ ಭೇಟಿ ನೀಡಿ.
-ಈಗ ಮುಖಪುಟದಲ್ಲಿ ನೀಡಿರುವ Application Status ಬಟನ್ ಮೇಲೆ ಕ್ಲಿಕ್ ಮಾಡಿ.
-ಫಾರ್ಮ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಸಂಖ್ಯೆಯನ್ನು ನಮೂದಿಸಿ.
-ಕೆಳಗೆ ನೀಡಲಾದ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. 


ಇದನ್ನೂ ಓದಿ : GK Quiz: ಭಾರತದಲ್ಲಿ ಒಟ್ಟು ಎಷ್ಟು ಅಂಚೆ ಕಚೇರಿಗಳಿವೆ ನಿಮಗೆ ತಿಳಿದಿದೆಯಾ?


ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದ್ದೇನು ? 
ಚುನಾವಣೆಗೂ ಮುನ್ನ ನೂತನ ಪಿಂಚಣಿ ವ್ಯವಸ್ಥೆ ವಿರೋಧಿಸಿ ನೌಕರರು ಮುಷ್ಕರ ನಡೆಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದೆ. ಅಧಿಕಾರಕ್ಕೆ ಬಂದ ನಂತರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದೆ. ಈ ಹಿನ್ನೆಲೆಯಲ್ಲಿ 13,000 ಉದ್ಯೋಗಿಗಳ ಕುಟುಂಬಗಳಿಗೆ ಪರಿಹಾರ ನೀದುತ್ತಿರುವ್ಯ್ದಾಗಿ ಕಳೆದ ಬುಧವಾರ ಸಿಎಂ ಸಿದ್ದರಾನಯ್ಯ ಘೋಷಿಸಿದ್ದರು. 


ಅನೇಕ ರಾಜ್ಯಗಳಲ್ಲಿ, ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ನೌಕರರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಸಾಮಾನ್ಯ ಬಜೆಟ್ ನಲ್ಲಿ ಒಳ್ಳೆಯ ಸುದ್ದಿ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿ ಸರ್ಕಾರಿ ಉದ್ಯೋಗಿಗಳು ಇದ್ದಾರೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ