ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಆದಾಯ ತೆರಿಗೆ ಪಾವತಿ ಅನಿವಾರ್ಯವಲ್ಲವೇ ? ಇಲ್ಲಿದೆ ಸಂಪೂರ್ಣ ಮಾಹಿತಿ
Income Tax Return : ಆದಾಯ ತೆರಿಗೆಯನ್ನು ಸಲ್ಲಿಸಲು ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಆದರೆ ಪ್ಯಾನ್ ಕಾರ್ಡ್ ಇಲ್ಲದೇ ಹೋದಾಗ ಅಂಥಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ? ಆದಾಯ ತೆರಿಗೆ ಸಲ್ಲಿಸುವುದು ಹೇಗೆ?
Income Tax Return : ಆದಾಯವು ತೆರಿಗೆ ಸಲ್ಲಿಸುವಾಗ ಪ್ರಮುಖ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ಅದುವೇ ಪ್ಯಾನ್ ಕಾರ್ಡ್. ಹೊಸ ಬ್ಯಾಂಕ್ ಖಾತೆ ತೆರೆಯಬೇಕಾದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ವೇಳೆ, ದೊಡ್ಡ ಮಟ್ಟದ ಹಣಕಾಸಿನ ವಹಿವಾಟುಗಳನ್ನು ನಡೆಸಬೇಕಾದರೆ ಪ್ಯಾನ್ ಕಾರ್ಡ್ ಬಳಸುವುದು ಅಗತ್ಯ. ಆದರೆ ಪ್ಯಾನ್ ಕಾರ್ಡ್ ಇಲ್ಲದೇ ಹೋದಾಗ ಅಂಥಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು ? ಆದಾಯ ತೆರಿಗೆ ಸಲ್ಲಿಸುವುದು ಹೇಗೆ?
ಆದಾಯ ತೆರಿಗೆ :
ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 139A ಅಡಿಯಲ್ಲಿ, ತೆರಿಗೆ ವಿಧಿಸಬಹುದಾದ ಆದಾಯವನ್ನು ಹೊಂದಿರುವಂತಹ ನಿರ್ದಿಷ್ಟ ವರ್ಗದ ವ್ಯಕ್ತಿಗಳಿಗೆ ಮತ್ತು ಬ್ಯಾಂಕ್‌ನಲ್ಲಿ ಹೆಚ್ಚಿನ ಮೌಲ್ಯದ ನಗದು ಠೇವಣಿ ಅಥವಾ ವಿಡ್ರಾ ವಹಿವಾಟುಗಳನ್ನು ನಡೆಸಲು ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ. ಅಂದರೆ ಆದಾಯ ತೆರಿಗೆಯನ್ನು ಸಲ್ಲಿಸಲು ಪ್ಯಾನ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಒಂದು ವೇಳೆ ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲ ಎಂದಾದರೆ ತಕ್ಷಣ ಅದಕ್ಕೆ ಅರ್ಜಿ ಸಲ್ಲಿಸಬೇಕು. ಅಲ್ಲದೆ, ಪ್ಯಾನ್ ಕಾರ್ಡ್ ಸುಲಭವಾಗಿ ಸಿಗುವುದಿಲ್ಲ ಎಂದಾದರೆ ಅಂಥವರಿಗೆ ಎರಡು ಆಯ್ಕೆಗಳನ್ನು ಒದಗಿಸಲಾಗಿದೆ.
ಇದನ್ನೂ ಓದಿ : Bank Rules: ಹೊಸ ವರ್ಷದಲ್ಲಿ ಗ್ರಾಹಕರಿಗೆ ಶಾಕ್ ನೀಡಿದ ಸರ್ಕಾರಿ ಬ್ಯಾಂಕ್
ಪ್ಯಾನ್ ಬದಲಿಗೆ ಆಧಾರ್ ಬಳಸಿ :
ಪ್ಯಾನ್ ಕಾರ್ಡ್ ಹೊಂದಿಲ್ಲದಿದ್ದರೆ, ಪ್ಯಾನ್ ಬದಲಿಗೆ ಆಧಾರ್ ಅನ್ನು ಬಳಸಲು ಅನುಮತಿ ನೀಡಲಾಗಿದೆ. ಹೀಗೆ ಮಾಡುವಾಗ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುವ ಹೊಸ ಪ್ಯಾನ್ ನಂಬರ್ ಅನ್ನು ಆದಾಯ ತೆರಿಗೆ ಇಲಾಖೆ ಜನರೆಟ್ ಮಾಡಬಹುದು. ಯಾರಿಗೆ ಪ್ಯಾನ್ ನಂಬರ್ ಅಲಾಟ್ ಮಾಡಲಾಗುತ್ತದೆಯೋ ಅವರು ಆಧಾರ್ ಜೊತೆ ಆ ನಂಬರ್ ಅನ್ನು ಲಿಂಕ್ ಮಾಡಿಕೊಂಡು ಬಳಸಬಹುದು.
ಫಾರ್ಮ್ 60 :
ಪ್ಯಾನ್ ಕಾರ್ಡ್ ಹೊಂದಿಲ್ಲದವರು ಆದಾಯ ತೆರಿಗೆ ನಿಯಮಗಳು, 1962 ರ ಅಡಿಯಲ್ಲಿ ಫಾರ್ಮ್ 60 ಅನ್ನು ಸಲ್ಲಿಸಬಹುದು. ಇಲ್ಲಿ ನಿಮ್ಮ ಆದಾಯದ ವಿವರಗಳನ್ನು ಸಲ್ಲಿಸಬೇಕಾಗುತ್ತದೆ. ನಿಮ್ಮ ಬಳಿ ಪ್ಯಾನ್ ಕಾರ್ಡ್ ಇಲ್ಲ ಮತ್ತು ನಿಮ್ಮ ಆದಾಯ ತೆರಿಗೆಯ ಮಿತಿಗಿಂತ ಕೆಳಗಿದೆ ಎನ್ನುವ ಸಂದರ್ಭದಲ್ಲಿ ಮಾತ್ರ ಫಾರ್ಮ್ 60 ಬಳಸಬಹುದಾಗಿದೆ. ಇಲ್ಲವಾದರೆ ಆದಾಯ ತೆರಿಗೆ ಕಾಯ್ದೆಯ 272B ಅಡಿಯಲ್ಲಿ ದಂಡವನ್ನು ಕಟ್ಟಬೇಕಾಗುತ್ತದೆ. ಪ್ಯಾನ್‌ಗಾಗಿ ಅರ್ಜಿ ಸಲ್ಲಿಸಲಾಗಿದ್ದು, ಪ್ಯಾನ್ ಕಾರ್ಡ್ ಕೈ ಸೇರಿಲ್ಲ ಎಂದಾದರೆ ಈ ಫಾರ್ಮ್ ಅನ್ನು ಸಲ್ಲಿಸಬಹುದು. ಆದರೆ, ಇಲ್ಲಿ ಪ್ಯಾನ್ ಕಾರ್ಡ್ ಗೆ ಸಲ್ಲಿಸಿರುವ ಅರ್ಜಿಯ Acknowledgement Number ಲಗತ್ತಿಸಬೇಕಾಗುತ್ತದೆ.
ಇದನ್ನೂ ಓದಿ : Arecanut Today Price: ಶಿವಮೊಗ್ಗದಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ಎಂದು ತಿಳಿಯಿರಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.