Bank Rules: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ (BoB) ಮಂಗಳವಾರ(ಜನವರಿ 09) ಬಡ್ಡಿ ದರವನ್ನು ಹೆಚ್ಚಿಸಿದ್ದು ಈ ಮೂಲಕ ಕೋಟ್ಯಾಂತರ ಗ್ರಾಹಕರಿಗೆ ಶಾಕ್ ನೀಡಿದೆ. ಬ್ಯಾಂಕ್ ಆಫ್ ಬರೋಡಾ ಮಾರ್ಜಿನಲ್ ಕಾಸ್ಟ್ ಬೇಸ್ಡ್ ಲೆಂಡಿಂಗ್ ದರವನ್ನು (MCLR) ಶೇಕಡಾ 0.35 ರಷ್ಟು ಹೆಚ್ಚಿಸಿದ್ದು ಇದರಿಂದಾಗಿ ಬೆಂಚ್ಮಾರ್ಕ್ ಲೋನ್ ದರಕ್ಕೆ ಲಿಂಕ್ ಮಾಡಲಾದ ಸಾಲಗಳು ಕೂಡ ದುಬಾರಿಯಾಗಲಿವೆ. ಈ ಹೊಸ ದರಗಳು ನಾಳೆಯಿಂದ (ಜನವರಿ 12) ಜಾರಿಗೆ ಬರಲಿವೆ ಎಂದು ಬ್ಯಾಂಕ್ ಆಫ್ ಬರೋಡ ನಿಯಂತ್ರಕ ಫೈಲಿಂಗ್‌ನಲ್ಲಿ ಮಾಹಿತಿ ನೀಡಿದೆ.
ಬ್ಯಾಂಕ್ ಆಫ್ ಬರೋಡಾ ಎಂಸಿಎಲ್‌ಆರ್ ಅನ್ನು ಹಿಂದಿನ ಶೇಕಡಾ 7.50 ರಿಂದ ಶೇಕಡಾ 7.85 ಕ್ಕೆ ಹೆಚ್ಚಿಸಲಾಗಿದೆ, ಇದು 35 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವಾಗಿದೆ. ಒಂದು-, ಮೂರು-, ಆರು ತಿಂಗಳ ಮತ್ತು ಒಂದು ವರ್ಷದ ಅವಧಿಯ ಸಾಲಗಳಿಗೆ MCLR ಅನ್ನು 20 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಲಾಗಿದೆ.
ಇದನ್ನೂ ಓದಿ- Income Tax ಪಾವತಿದಾರರಿಗೆ ಗುಡ್ ನ್ಯೂಸ್! ಮೂಲ ತೆರಿಗೆ ಮಿತಿಯಲ್ಲಿ ಭಾರೀ ಬದಲಾವಣೆ!!
ಎಷ್ಟು ಅವಧಿಯ ಸಾಲಕ್ಕೆ ಎಷ್ಟು ಬಡ್ಡಿ?
* ಒಂದು ತಿಂಗಳ ಅವಧಿಯ ಸಾಲಕ್ಕೆ ಬಡ್ಡಿದರ 8.15%
* ಮೂರು ತಿಂಗಳ ಅವಧಿಯ ಸಾಲದ ಬಡ್ಡಿ ದರ 8.25%
* ಆರು ತಿಂಗಳ ಅವಧಿಯ ಸಾಲದ ಮೇಲಿನ ಬಡ್ಡಿ ದರ 8.35%
* ಒಂದು ವರ್ಷದ ಅವಧಿಯ ಸಾಲದ ಬಡ್ಡಿ ದರ 8.50%
ಇದನ್ನೂ ಓದಿ- LIC ಯ ಈ ಯೋಜನೆಯಲ್ಲಿ ₹256 ಹೂಡಿಕೆ ಮಾಡಿ, ₹54.50 ಲಕ್ಷ ಲಾಭ ಪಡೆಯಿರಿ!
ವಾಸ್ತವವಾಗಿ, ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ವರ್ಷ ಮೇ ತಿಂಗಳಿನಿಂದ ರೆಪೋ ದರಗಳನ್ನು ಶೇ.2.25ರಷ್ಟು ಹೆಚ್ಚಿಸಿದೆ. ಡಿಸೆಂಬರ್ 7, 2022 ರಂದು 35 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಇತ್ತೀಚಿನ ಸುತ್ತಿನ ರೆಪೊ ದರ ಹೆಚ್ಚಳದ ನಂತರ ಬೆಂಚ್‌ಮಾರ್ಕ್ ಬಡ್ಡಿ ದರವು ಈಗ 6.25 ಪ್ರತಿಶತಕ್ಕೆ ನಿಂತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.