ನವದೆಹಲಿ: ಹಣದುಬ್ಬರದಿಂದ ಸಾಕಷ್ಟು ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಗ್ಯಾಸ್ ಸಿಲಿಂಡರ್‌ಗಳ ಮೇಲೆ 200 ರೂ.ಗಳ ಸಬ್ಸಿಡಿಯನ್ನು ಸರ್ಕಾರ ಅನುಮೋದಿಸಿದೆ, ಅಂದರೆ ಇನ್ನು ಮುಂದೆ ನಿಮಗೆ ಗ್ಯಾಸ್ ಸಿಲಿಂಡರ್‌ಗಳು ಅಗ್ಗವಾಗಿ ಸಿಗಲಿವೆ ಎಂದರ್ಥ. ಇನ್ನು ದೇಶಾದ್ಯಂತ ಎಲ್ಲರಿಗೂ ರೂ.200 ಕಡಿಮೆ ಬೆಳೆಯಲ್ಲಿ ಗ್ಯಾಸ್ ಸಿಲಿಂಡರ್ ಸಿಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ. ಇದರಿಂದ ರಕ್ಷಾ ಬಂಧನಕ್ಕೂ ಮುನ್ನ ಪ್ರಧಾನಿ ಮೋದಿ ಜನ ಸಾಮಾನ್ಯರಿಗೆ ಈ ಉಡುಗೊರೆ ನೀಡಿದ್ದಾರೆ (Modi Government Raksha Bandhan Gift).


COMMERCIAL BREAK
SCROLL TO CONTINUE READING

ದೇಶಾದ್ಯಂತ ಗ್ಯಾಸ್ ಸಿಲಿಂಡರ್ 200 ರೂ. ಅಗ್ಗ ಸಿಗಲಿವೆ
ಗ್ಯಾಸ್ ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿರುವ ಅನುರಾಗ್ ಠಾಕೂರ್, ದೇಶಾದ್ಯಂತ ಎಲ್ಲಾ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲಾಗುತ್ತಿದೆ ಎಂದಿದ್ದಾರೆ. ಇದೇ ವೇಳೆ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್‌ನಲ್ಲಿ 400 ರೂ ಸಬ್ಸಿಡಿ ಸಿಗಲಿದೆ, ಅಂದರೆ, ಉಜ್ವಲ ಯೋಜನೆಯಡಿಯಲ್ಲಿ ಇರುವವರಿಗೆ ರೂ.400 ಕಡಿಮೆ ಬೆಳೆಗೆ ಗ್ಯಾಸ್ ಸಿಲಿಂಡರ್ ಸಿಗಲಿದೆ.


75 ಲಕ್ಷ ಸಹೋದರಿಯರು ಉಚಿತ ಸಂಪರ್ಕ ಪಡೆಯಲಿದ್ದಾರೆ
ಓಣಂ ಮತ್ತು ರಕ್ಷಾಬಂಧನ ಹಬ್ಬಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಉಜ್ವಲ ಯೋಜನೆಯಡಿ 75 ಲಕ್ಷ ಸಹೋದರಿಯರಿಗೆ ಗ್ಯಾಸ್ ಸಂಪರ್ಕ ಕಲ್ಪಿಸುವ ಉಂಡುಗೊರೆ ನೀಡಿದ್ದಾರೆ. ಇದಕ್ಕಾಗಿ ನೀವು ಒಂದು ರೂಪಾಯಿ ಕೂಡ ಖರ್ಚು ಮಾಡಬೇಕಾಗಿಲ್ಲ. ಇಂದು ದೇಶಾದ್ಯಂತ 33 ಕೋಟಿ ಮನೆಗಳಲ್ಲಿ ಗ್ಯಾಸ್ ಸಿಲಿಂಡರ್ ಬಳಸಲಾಗುತ್ತಿದೆ.


ಉಜ್ವಲ ಯೋಜನೆಯಡಿ ಬೆಲೆಗಳು ಇಳಿಕೆಯಾಗಲಿವೆ
ಸರ್ಕಾರದಿಂದ ನೀಡಿರುವ ಮಾಹಿತಿಯ ಪ್ರಕಾರ ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 200 ರೂಪಾಯಿ ಇಳಿಕೆಯಾಗಲಿದೆ. ಇಂದು ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.


7500 ಕೋಟಿ ವೆಚ್ಚ ಬರಲಿದೆ
ಕ್ಯಾಬಿನೆಟ್ ಸಭೆಯಲ್ಲಿ ಉಜ್ವಲ ಯೋಜನೆಯಡಿ ಪ್ರತಿ ಸಿಲಿಂಡರ್‌ಗೆ ₹ 200 ಹೆಚ್ಚುವರಿ ಸಬ್ಸಿಡಿ ನೀಡಲು ಅನುಮೋದನೆ ನೀಡಲಾಗಿದೆ. ಕೇಂದ್ರ ಸರಕಾರ ಕೈಗೊಂಡಿರುವ ಈ ನಿರ್ಧಾರದಿಂದ ಸರಕಾರದ ಮೇಲೆ ಸುಮಾರು 7500 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.


ಇದನ್ನೂ ಓದಿ-ಮ್ಯೂಚವಲ್ ಫಂಡ್ ನಲ್ಲಿ ಯಾವ ರೀತಿ ಹೂಡಿಕೆಯನ್ನು ಮಾಡಿದರೆ ಹೆಚ್ಚು ಲಾಭದ ಜೊತೆಗೆ ಭದ್ರತೆ ಸಿಗುತ್ತದೆ?


ಮಾರ್ಚ್‌ನಿಂದ ದರ ಬದಲಾಗಿಲ್ಲ
ಗ್ಯಾಸ್ ಸಿಲಿಂಡರ್ ಬೆಲೆಗಳ ಬಗ್ಗೆ ಹೇಳುವುದಾದರೆ, ಆಗಸ್ಟ್ ಮೊದಲ ದಿನಾಂಕದಂದು ದೆಹಲಿಯಲ್ಲಿ ಗೃಹಬಳಕೆಯ ಅಡುಗೆ ಅನಿಲದ ಬೆಲೆ 1103 ರೂ.ಗಳಾಗಿದೆ. ಇದೇ ವೇಳೆ ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1102.50 ರೂ., ಕೋಲ್ಕತ್ತಾದಲ್ಲಿ 1129 ರೂ. ಮತ್ತು ಚೆನ್ನೈನಲ್ಲಿ 1118.50 ರೂ. ಮಾರ್ಚ್‌ನಿಂದ ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇನ್ನೊಂದೆಡೆ, ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಗಳು ಅನೇಕ ಬಾರಿ ಏರಿಳಿತಗೊಂಡಿವೆ.


ಇದನ್ನೂ ಓದಿ-ಎಸ್ಬಿಐ ಗ್ರಾಹಕರಿಗೊಂದು ಸಂತಸದ ಸುದ್ದಿ, ಹೊಸ ಯೋಜನೆ ಆರಂಭಿಸಿದ ಬ್ಯಾಂಕ್!


ಒಂದು ವರ್ಷದಲ್ಲಿ 12 ಸಿಲಿಂಡರ್‌ಗಳು ಲಭ್ಯವಿವೆ
ಕೇಂದ್ರ ಸರ್ಕಾರ 2016ರಲ್ಲಿ ಉಜ್ವಲ ಯೋಜನೆಯನ್ನು ದೇಶಾದ್ಯಂತ ಆರಂಭಿಸಿತ್ತು. ಈ ಯೋಜನೆಯಡಿ, ಫಲಾನುಭವಿಗಳು ಒಂದು ವರ್ಷದಲ್ಲಿ ಒಟ್ಟು 12 ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಪಡೆಯಬಹುದು. ಸರಕಾರದ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಉಚಿತವಾಗಿ ಅಡುಗೆ ಅನಿಲ ಸಂಪರ್ಕದ ಸೌಲಭ್ಯವನ್ನು ಪಡೆಯಯಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ