ಬೆಂಗಳೂರು: ದೇಶದ ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ತನ್ನ ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗಾಗಿ ಹೊಸ ಸ್ಕೀಮ್ ವೊಂದನ್ನು ಆರಂಭಿಸಿದ್ದು, ಈ ಯೋಜನೆಯ ಮೂಲಕ, ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಅನ್ನು ಮಾತ್ರ ಬಳಸಿಕೊಂಡು ಸಾಮಾಜಿಕ ಭದ್ರತಾ ಯೋಜನೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಗ್ರಾಹಕರು ಇನ್ನು ಮುಂದೆ ಬ್ಯಾಂಕ್‌ಗೆ ಪಾಸ್‌ಬುಕ್ ಕೊಂಡೊಯ್ಯುವ ಅವಶ್ಯಕತೆ ಇಲ್ಲ. ಇದಕ್ಕಾಗಿ SBI ಅಧ್ಯಕ್ಷ ದಿನೇಶ್ ಖಾರಾ ಅವರು ಗ್ರಾಹಕ ಸೇವಾ ಕೇಂದ್ರವನ್ನು (CSP) ಪರಿಚಯಿಸಿದ್ದಾರೆ, ಅಲ್ಲಿ ಬಳಕೆದಾರರು ಈ ಸಾಮಾಜಿಕ ಭದ್ರತಾ ಯೋಜನೆಗಳಂತಹ ಸೇವೆಗಳನ್ನು ಪಡೆಯಬಹುದು. ಗ್ರಾಹಕ ಸೇವಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ದಿನೇಶ್ ಖಾರಾ, ಎಲ್ಲಾ ಸಾಮಾಜಿಕ ವರ್ಗಗಳನ್ನು ಸಬಲೀಕರಣಗೊಳಿಸುವುದು ಮತ್ತು ಎಲ್ಲರಿಗೂ ಆರ್ಥಿಕ ಭದ್ರತೆ ಒದಗಿಸುವುದು ನಮ್ಮ ಗುರಿಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಇನ್ಮುಂದೆ ಪಾಸ್ಬುಕ್ ಅವಶ್ಯಕತೆ ಇರುವುದಿಲ್ಲ
ಈ ಯೋಜನೆಯ ಅನುಷ್ಠಾನದ ಬಳಿಕ, SBI ಗ್ರಾಹಕರು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಅಟಲ್ ಪಿಂಚಣಿ ಯೋಜನೆಗಳಂತಹ ಸಾಮಾಜಿಕ ಭದ್ರತಾ ಯೋಜನೆಗಳಿಗೆ ತಮ್ಮನ್ನು ತಾವು ನೋಂದಾಯಿಸಲು ಕೇವಲ ಆಧಾರ್ ಕಾರ್ಡ್ ನೀಡಿದರೆ ಸಾಕು.
ಇದನ್ನೂ ಓದಿ-ಶೀಘ್ರದಲ್ಲೇ ಸರ್ಕಾರಿ ನೌಕರರಿಗೆ ಸಿಗಲಿದೆಯಾ ಈ ಸಂತಸದ ಸುದ್ದಿ !
ಪಾಸ್ ಬುಕ್ ಇಲ್ಲದೆ ನೋಂದಣಿ ಮಾಡುವುದು ಹೇಗೆ
SBI ಖಾತೆದಾರರು ಈಗ ಬ್ಯಾಂಕ್‌ನ ಹೊಸ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ, ಪಾಸ್‌ಬುಕ್ ಇಲ್ಲದೆಯೇ ಬ್ಯಾಂಕ್‌ಗೆ ಹೋಗುವ ಮೂಲಕ ಸರ್ಕಾರಿ ಯೋಜನೆಯಲ್ಲಿ ತಮ್ಮ ನೋಂದಣಿಯನ್ನು ನೋಂದಾಯಿಸಿಕೊಳ್ಳಬಹುದು. ದಾಖಲಾತಿ ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ತ್ವರಿತಗೊಳಿಸಲು ಇದು ಸಹಾಯ ಮಾಡುತ್ತದೆ ಎಂದು ಎಸ್‌ಬಿಐ ಹೇಳಿಕೆ ನೀಡಿದೆ.
ಇದನ್ನೂ ಓದಿ-ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಬಿಸ್ನೆಸ್ ಮಾಡುವ ಯೋಚನೆಯೇ? ಈ ವ್ಯಾಪಾರ ಪರಿಕಲ್ಪನೆ ಒಮ್ಮೆ ಟ್ರೈ ಮಾಡಿ!
ಎಸ್‌ಬಿಐ ದೇಶದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಆಸೆಟ್ ಗಳು, ಉಳಿತಾಯಗಳು, ಶಾಖೆಗಳು, ಗ್ರಾಹಕರು ಹಾಗೂ ಸಿಬ್ಬಂದಿಗಳ ವಿಷಯದಲ್ಲಿ ದೇಶದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ಆಗಿದೆ ಎಂಬುದು ಇಲ್ಲಿ ಗಮನಾರ್ಹ. ಜೂನ್ 2023 ರ ಹೊತ್ತಿಗೆ, ಬ್ಯಾಂಕ್ 45.31 ಲಕ್ಷ ಕೋಟಿ ಡಿಪಾಸಿಟ್ ಬೇಸ್ ಹೊಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದಲ್ಲಿ ಕೇವಲ ಶೇ.19 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದರೂ ಬ್ಯಾಂಕ್‌ನ ಒಟ್ಟು ಮಾರುಕಟ್ಟೆ ಪಾಲು 33.4% ಆಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.