ಹೋಳಿ ಹಬ್ಬಕ್ಕೆ Hyundai ಗಿಫ್ಟ್ : ಸ್ಯಾಂಟ್ರೊದಿಂದ i20ವರೆಗೆ ಕಾರುಗಳ ಮೇಲೆ 50,000 ರೂ. ವರೆಗೆ ರಿಯಾಯಿತಿ
ಹ್ಯುಂಡೈ ಇಂಡಿಯಾ ತನ್ನ ಗ್ರಾಹಕರಿಗೆ ಹೋಳಿಗೂ ಮುನ್ನ 50,000 ರೂ.ವರೆಗಿನ ರಿಯಾಯಿತಿಯನ್ನು ಉಡುಗೊರೆಯಾಗಿ ನೀಡಿದೆ. ಕಂಪನಿಯು ಹ್ಯುಂಡೈ ಸ್ಯಾಂಟ್ರೊ, ಗ್ರಾಂಡ್ ಐ10 ನಿಯೋಸ್, ಎಕ್ಸ್ಸೆಂಟ್ ಬೆಲೆ, ಔರಾ ಮತ್ತು ಐ20 ಮೇಲೆ ಈ ಕೊಡುಗೆಗಳನ್ನು ನೀಡಿದೆ.
ನವದೆಹಲಿ : ಹೊಸ ಕಾರು ಖರೀದಿಸುವ ಯೋಚನೆಯಿದ್ದರೆ ಇದು ಲಾಭದಾಯಕ ಡೀಲ್ ಆಗಲಿದೆ. ಈ ತಿಂಗಳು ಹಲವು ಕಂಪನಿಗಳು ತಮ್ಮ ವಾಹನಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿವೆ (Car Discount Offers). ಈಗ ಈ ಸಾಲಿಗೆ ದಕ್ಷಿಣ ಕೊರಿಯಾದ ಹ್ಯುಂಡೈ ಕಂಪನಿಯೂ ಸೇರಿಕೊಂಡಿದೆ. ಹುಂಡೈ ಕಾರುಗಳಲ್ಲಿ ಅನೇಕ ಉತ್ತಮ ಕೊಡುಗೆಗಳನ್ನು ನೀಡಲಾಗುತ್ತಿದೆ (Hyundai Discount Offers) . ಕಂಪನಿಯು ತನ್ನ Centro, Neos, Xcent Prime, Xcent Prime ಮತ್ತು i20 ಮೇಲೆ ನಗದು ರಿಯಾಯಿತಿ ಮಾತ್ರವಲ್ಲದೆ, ಎಕ್ಸ್ಚೇಂಜ್ ಬೋನಸ್ ಕೂಡಾ ನೀಡುತ್ತಿದೆ.
ಹುಂಡೈ ಸ್ಯಾಂಟ್ರೋ (Hyundai Santro) :
ಕಂಪನಿಯು ಈ ಕುರಿತು ಹಲವು ಕೊಡುಗೆಗಳನ್ನು ನೀಡುತ್ತಿದೆ. ಇಲ್ಲಿ ವಿವಿಧ ರೂಪಾಂತರಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ (Hyundai Discount Offers). ಉದಾಹರಣೆಗೆ, ನೀವು ಎರಾವನ್ನು ಖರೀದಿಸುವುದಾದರೆ, 10,000 ರೂ ನಗದು ರಿಯಾಯಿತಿ, ಮತ್ತು 10,000 ವರೆಗೆ ವಿನಿಮಯ ಬೋನಸ್, 5000 ರೂ . ಕಾರ್ಪೊರೇಟ್ ರಿಯಾಯಿತಿ ಸಿಗುತ್ತದೆ. ಈ ರೀತಿಯಾಗಿ ಈ ಕಾರಿನ ಮೇಲೆ ಒಟ್ಟು 25,000 ವರೆಗೆ ಲಾಭವಾಗಲಿದೆ. ಅಂತೆಯೇ, CNG ರೂಪಾಂತರದಲ್ಲಿ 10,000 ವಿನಿಮಯ ಬೋನಸ್ ಮತ್ತು 5000 ಕಾರ್ಪೊರೇಟ್ ಬೋನಸ್ ಮಾತ್ರ ಇದ್ದು, ಇದರಲ್ಲಿ 15,000 ದವರೆಗೆ ಲಾಭವಾಗಲಿದೆ. ಇತರ ರೂಪಾಂತರಗಳಲ್ಲಿ, ಕಂಪನಿಯು 25000 ನಗದು ರಿಯಾಯಿತಿ, 10,000 ವರೆಗೆ ಎಕ್ಸ್ಚೇಂಜ್ ಬೋನಸ್ ಮತ್ತು 5000 ಕಾರ್ಪೊರೇಟ್ ಬೋನಸ್ಗಳನ್ನು ನೀಡುತ್ತಿದೆ ಹೀಗಾಗಿ ಈ ಕಾರು ಖರೀದಿ ಮೇಲೆ 40,000 ರೂವರೆಗೆ ಲಾಭವಾಗಲಿದೆ (Hyundai Discount Offers).
ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧದ ಎಫೆಕ್ಟ್ ದಾಖಲೆ ಬರೆದ ತೈಲ ದರ!
ಹುಂಡೈ ಗ್ರಾಂಡ್ i10 NIOS (Hyundai Grand i10 NIOS) :
ಹ್ಯುಂಡೈ ನಿಯೋಸ್ನ ರೂಪಾಂತರಗಳ (Hyundai Grand i10 NIOS) ಬಗ್ಗೆ ಹೇಳುವುದಾದರೆ, ಟರ್ಬೊ ಮೇಲೆ 35,000 ರೂ ನಗದು ರಿಯಾಯಿತಿ, 10,000 ವರೆಗಿನ ಎಕ್ಸ್ಚೇಂಜ್ ಬೋನಸ್ ಮತ್ತು 5000 ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ರೀತಿಯಲ್ಲಿ ಒಟ್ಟು ಲಾಭವು 50,000 ವರೆಗೆ ತಲುಪಬಹುದು. CNG ಮಾದರಿಯಲ್ಲಿ ಯಾವುದೇ ನಗದು ರಿಯಾಯಿತಿ ಇರುವುದಿಲ್ಲ. ಆದರೆ, 10,000 ರೂಪಾಯಿಗಳ ವಿನಿಮಯ ಬೋನಸ್ ಮತ್ತು 5000 ರೂಪಾಯಿಗಳ ಕಾರ್ಪೊರೇಟ್ ಬೋನಸ್ ಲಭ್ಯವಿದೆ. ಇತರ ರೂಪಾಂತರಗಳಲ್ಲಿ, ಕಂಪನಿಯು 10,000 ನಗದು ರಿಯಾಯಿತಿ, 10,000 ವರೆಗೆ ವಿನಿಮಯ ಬೋನಸ್, 5000 ಕಾರ್ಪೊರೇಟ್ ಬೋನಸ್ ಅನ್ನು ನೀಡುತ್ತಿದೆ.
ಹುಂಡೈ ಐ20 (Hyundai i20) :
Hyundai i20 ಪ್ರೀಮಿಯಂ ಹ್ಯಾಚ್ಬ್ಯಾಕ್ನ iMT ಟರ್ಬೊ ರೂಪಾಂತರದ ಮೇಲೆ ಒಟ್ಟು 40,000 ವರೆಗೆ ಆಫರ್ ನೀಡಲಾಗಿದೆ. ಇದರಲ್ಲಿ 25,000 ರೂ.ವರೆಗೆ ನಗದು ರಿಯಾಯಿತಿ. 10,000 ರೂ. ವರೆಗೆ ಎಕ್ಸ್ಚೇಂಜ್ ಬೋನಸ್ ಮತ್ತು 5,000 ರೂ.ವರೆಗೆ ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ (exchange bonus). ಇದರ ಹೊರತಾಗಿ, ಕಂಪನಿಯು i20 ಡೀಸೆಲ್ ರೂಪಾಂತರದ ಮೇಲೆ 15,000 ರೂ.ವರೆಗಿನ ಪ್ರಯೋಜನಗಳನ್ನು ನೀಡಿದೆ.
ಇದನ್ನೂ ಓದಿ: TDS ಜಮಾ ಮಾಡದೆ ನೀವು EPF ನಿಂದ ನಿಮ್ಮ ಹಣ ಹಿಂಪಡೆಯಬಹುದು! ಹೇಗೆ ಇಲ್ಲಿದೆ ನೋಡಿ
ಹುಂಡೈ ಔರಾ (Hyundai Aura) :
ಹುಂಡೈ ಔರಾ (Hyundai Aura) ಕುರಿತು ಮಾತನಾಡುತ್ತಾ, ಟರ್ಬೊ ರೂಪಾಂತರವು 35,000 ನಗದು ರಿಯಾಯಿತಿ, 10,000 ವರೆಗೆ ವಿನಿಮಯ ಬೋನಸ್ ಮತ್ತು 5,000 ಕಾರ್ಪೊರೇಟ್ ಬೋನಸ್ ಪಡೆಯುತ್ತಿದೆ. ಅಂದರೆ, ನಿಮ್ಮ ಒಟ್ಟು ಲಾಭ 50,000. ಕಂಪನಿಯು CNG ರೂಪಾಂತರದ ಮೇಲೆ 10,000 ವಿನಿಮಯ ಬೋನಸ್ ಅನ್ನು ನೀಡುತ್ತಿದೆ. ಕಾರ್ಪೊರೇಟ್ ರಿಯಾಯಿತಿಯು 5000 ರೂ ಇರಲಿದ್ದು, ಖರೀದಿದಾರರಿಗೆ 15,000ದವರೆಗೆ ಲಾಭವಾಗಲಿದೆ. ಇತರ ರೂಪಾಂತರಗಳು 10,000 ರೂ ನಗದು ರಿಯಾಯಿತಿಯನ್ನು ಪಡೆಯುತ್ತಿದ್ದರೆ, 10,000 ವರೆಗೆ ವಿನಿಮಯ ಬೋನಸ್ ಮತ್ತು 5000 , ರೂ ವರೆಗೆ ಕಾರ್ಪೊರೇಟ್ ರಿಯಾಯಿತಿ ಸಿಗಲಿದೆ. ಈ ರೂಪಾಂತರಗಳಲ್ಲಿ ಒಟ್ಟು 25,000 ರೂ (Huge dicount on cars).
ಲಾಭವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.