1 ಲೀಟರ್ ಪೆಟ್ರೋಲ್ ನಲ್ಲಿ 30 ಕಿ.ಮೀ ದೂರ ಕ್ರಮಿಸಲಿದೆ ಈ ಕಾರು, ಅದ್ಬುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ

ಹೋಂಡಾ ಇಂಡಿಯಾವು New Cityಯ   ಹೈಬ್ರಿಡ್ ರೂಪಾಂತರವನ್ನು ಬಿಡುಗಡೆ ಮಾಡಲಿದೆ. ಇದು ಲೀಟರ್ ಪೆಟ್ರೋಲ್‌ನಲ್ಲಿ ಸುಮಾರು 30 ಕಿಮೀವರೆಗಕ್ರಮಿಸಲದ ೆಕಾಂ  ಪ್ಯಾಕ್ಟ್ ಸೆಡಾನ್ ಹೋಂಡಾದ i-MMD eHEV ಹೈಬ್ರಿಡ್ ಸಿಸ್ಟಮ್‌ನಿಂದ ಚಾಲಿತವಾಗಲಿದ್ದು ಅದು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತದೆ.

Written by - Ranjitha R K | Last Updated : Mar 7, 2022, 10:26 AM IST
  • ಹೋಂಡಾ ಸಿಟಿ ಹೈಬ್ರಿಡ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ
  • 1 ಲೀಟರ್ ಪೆಟ್ರೋಲ್ ನಲ್ಲಿ ಕ್ರಮಿಸಲಿದೆ ಸುಮಾರು 30 ಕಿಮೀ
  • ಉತ್ತಮ ಶೈಲಿಯೊಂದಿಗೆ ಅದ್ಭುತ ವೈಶಿಷ್ಟ್ಯಗಳು
 1 ಲೀಟರ್ ಪೆಟ್ರೋಲ್ ನಲ್ಲಿ  30 ಕಿ.ಮೀ  ದೂರ ಕ್ರಮಿಸಲಿದೆ ಈ ಕಾರು, ಅದ್ಬುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ    title=
ಹೋಂಡಾ ಸಿಟಿ ಹೈಬ್ರಿಡ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ (file photo)

ಬೆಂಗಳೂರು :  ಐದನೇ ತಲೆಮಾರಿನ ಹೋಂಡಾ ಸಿಟಿಯು ಕಾಂಪ್ಯಾಕ್ಟ್ ಸೆಡಾನ್  ಸೆಗ್ಮೆಂಟ್ ಮಾರುಕಟ್ಟೆಗೆ ಕಾಲಿಟ್ಟ ತಕ್ಷಣ ಹೊಸದ ಛಾಪು ಮೂಡಿಸಿದೆ. ಈ ಕಾರನ್ನು ಬಲವಾದ ವೈಶಿಷ್ಟ್ಯಗಳೊಂದಿಗೆ ಉತ್ತಮ ಸ್ಟೈಲಿಂಗ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಈಗ ಕಂಪನಿಯು ಹೊಸ ತಲೆಮಾರಿನ Cityಯ  ಹೈಬ್ರಿಡ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಬಹುತೇಕ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ( Honda City Hybrid). ಈ ಕಾರಿಗೆ ಹೋಂಡಾದ i-MMD EHEV ಹೈಬ್ರಿಡ್ ಸಿಸ್ಟಮ್ ಅನ್ನು ನೀಡಲಾಗುವುದು. ಇದು ಎರಡು ಎಲೆಕ್ಟ್ರಿಕ್ ಮೋಟಾರ್‌ಗಳೊಂದಿಗೆ ಬರುತ್ತದೆ. ಈ ವ್ಯವಸ್ಥೆಯೊಂದಿಗೆ, ಹೊಸ ಹೋಂಡಾ ಸಿಟಿಯನ್ನು ವಿದ್ಯುತ್ ಶಕ್ತಿಯಿಂದ ಕೂಡಾ  ಚಲಾಯಿಸಬಹುದು (Honda Electric Car). ಟೊಯೊಟಾ ಕ್ಯಾಮ್ರಿಯನ್ನು ಹಿಂದಿಕ್ಕಿ ಭಾರತದಲ್ಲಿ ಮಾರಾಟವಾಗುವ ಅಗ್ಗದ ಸ್ವಯಂ ಚಾರ್ಜಿಂಗ್ ಹೈಬ್ರಿಡ್ ಕಾರು ಇದಾಗಲಿದೆ.  

ಸುಮಾರು 30 kmpl ಮೈಲೇಜ್ ನೀಡಲಿರುವ ಕಾರು :
ಹೋಂಡಾ ಸಿಟಿಯ ಹೊಸ ಹೈಬ್ರಿಡ್ ರೂಪಾಂತರವು 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ( Honda City Hybrid). ಇದರಲ್ಲಿ  98PS ಪವರ್ ಮತ್ತು 127Nm ಪೀಕ್ ಟಾರ್ಕ್ ಇರಲಿದೆ. ಹೊಸ ಕಾರೂ, ವೇಗದಲ್ಲಿ ಮಾತ್ರ ಮುಂದಿರುವುದಲ್ಲ, ಅತೀ ಹೆಚ್ಚು ಮೈಲೇಜ್ ಕೂಡಾ ನೀಡುತ್ತದೆ. ಕಾರಿನಲ್ಲಿರುವ ಎಲೆಕ್ಟ್ರಿಕ್ ಮೋಟಾರ್ 109PS ಪವರ್ ಮತ್ತು 253Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಾರಿನ ಇಂಜಿನ್ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಹೋಂಡಾ ಇಂಡಿಯಾ ನ್ಯೂ ಸಿಟಿ ಹೈಬ್ರಿಡ್‌ಗೆ ಮೂರು ಮೋಡ್‌ಗಳನ್ನು ನೀಡಲಾಗಿದೆ. ಇದರಲ್ಲಿ ಪ್ಯೂರ್  EV, ಹೈಬ್ರಿಡ್ ಮತ್ತು ಎಂಜಿನ್ ಮಾತ್ರ ಸೇರಿವೆ. ಹೈಬ್ರಿಡ್ ಸಿಸ್ಟಮ್ ಅನ್ನು ಸ್ಥಾಪಿಸಿದ ನಂತರ, ಕಾರಿನ ಮೈಲೇಜ್ 27.78 kmpl ಆಗಲಿದೆ ಎನ್ನಲಾಗಿದೆ ( Honda City Hybrid price ).  

 ಇದನ್ನೂ ಓದಿ : GST Tax Slab: ಶ್ರೀ ಸಾಮಾನ್ಯರಿಗೆ ಶಾಕ್ ನೀಡಲಿದೆಯಾ ಕೇಂದ್ರ ಸರ್ಕಾರ?

ಅಂದಾಜು ಬೆಲೆ ಎಷ್ಟು?
ಹೋಂಡಾ ಈ ಕಾರನ್ನು (Honda Car) ಸ್ಪರ್ಧಾತ್ಮಕ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಕಾಂಪ್ಯಾಕ್ಟ್ ಸೆಡಾನ್ ಗಳು ಈಗ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು, ಹೈಬ್ರಿಡ್ ವ್ಯವಸ್ಥೆಯಿಂದ ಇದರ ಬೆಲೆ ಹೆಚ್ಚಾಗುವುದು ಖಚಿತ. ಇಂತಹ ಪರಿಸ್ಥಿತಿಯಲ್ಲಿ ಹೋಂಡಾ ಸಿಟಿ ಹೈಬ್ರಿಡ್ ಅನ್ನು 17.5 ಲಕ್ಷ ರೂ.ಗಳ ಎಕ್ಸ್ ಶೋ ರೂಂ ಬೆಲೆಯಲ್ಲಿ ಬಿಡುಗಡೆ ಮಾಡಬಹುದು ಎಂದು ಅಂದಾಜಿಸಲಾಗಿದೆ ( Honda City Hybrid price in India). ಅದರ ಪ್ರಸ್ತುತ ಪೆಟ್ರೋಲ್ ರೂಪಾಂತರದ ಆರಂಭಿಕ ಎಕ್ಸ್ ಶೋ ರೂಂ ಬೆಲೆ 11.23 ಲಕ್ಷ ರೂ.ಗಳಾಗಿದೆ. ಇದು ಟಾಪ್ ಮಾಡೆಲ್ ಬೆಲೆ 15.18 ಲಕ್ಷ ರೂ. ಆಗಿದೆ. 

 ಇದನ್ನೂ ಓದಿ : SBI ಗ್ರಾಹಕರಿಗೆ ಸಿಹಿ ಸುದ್ದಿ! ಮನೆಯಲ್ಲೇ ಕುಳಿತು ಈ ಕೆಲಸ ಮಾಡಿ, ತೆರಿಗೆಯಲ್ಲಿ ಬಂಪರ್ ವಿನಾಯಿತಿ ಸಿಗುತ್ತೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News