Gold-Silver Price Today : ಕಳೆದ ಹಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತಗಳು ನಡೆಯುತ್ತಿವೆ.ವರ್ಷದ ಆರಂಭದಲ್ಲಿ, ಜನವರಿ 2 ರಂದು ಚಿನ್ನದ ದಾಖಲೆಯ ಮಟ್ಟ 63602 ರೂ.ಗೆ ತಲುಪಿತ್ತು. ಇದಾದ ಬಳಿಕ ಮತ್ತೆ ಬಂಗಾರದ ಬೆಲೆಯಲ್ಲಿ  ಕುಸಿತ ಕಂಡಿದ್ದು  62,000 ರೂ.ಗಿಂತ ಕೆಳಗಿಳಿದಿತ್ತು. ಆದರೆ, ಶುಕ್ರವಾರ ಮತ್ತೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಜನವರಿ ತಿಂಗಳೊಂದರಲ್ಲೇ ಚಿನ್ನದ ಬೆಲೆಯಲ್ಲಿ ಸುಮಾರು  1500 ರೂ.ಗೂ ಹೆಚ್ಚು ಕುಸಿತ ಕಂಡಿದೆ. 


COMMERCIAL BREAK
SCROLL TO CONTINUE READING

ಜನವರಿ 2 ರಂದು ಚಿನ್ನದ ಬೆಲೆ 10 ಗ್ರಾಂಗೆ 63,602 ರೂ.ಗೆ ಏರಿಕೆಯಾಗಿತ್ತು. ಈ ದಿನ ಚಿನ್ನ ತನ್ನ ಸಾರ್ವಕಾಲಿಕ ದಾಖಲೆಯ ಮಟ್ಟದಲ್ಲಿತ್ತು. ಆದರೆ, ಜನವರಿ 18 ರಂದು 24 ಕ್ಯಾರೆಟ್ ಚಿನ್ನ 10 ಗ್ರಾಂ ಬೆಲೆ 61,982 ರೂ.ಗೆ ಇಳಿದಿದೆ. https://ibjarates.com/ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ , ಜನವರಿ 19 ರ ಬೆಳಿಗ್ಗೆ ಚಿನ್ನದ ಬೆಲೆಯಲ್ಲಿ  ಮತ್ತೆ ಏರಿಕೆ ಕಂಡಿದ್ದು, 10 ಗ್ರಾಂಗೆ 62,207 ರೂ. ಆಗಿತ್ತು. ಜನವರಿ 18 (ಗುರುವಾರ) ವರೆಗೆ ನೋಡಿದರೆ, ಜನವರಿ ಆರಂಭದಿಂದಲೂ ಚಿನ್ನದಲ್ಲಿ 1,620 ರೂ.ಗಳ ಕುಸಿತ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಈ ಬೆಲೆಯಲ್ಲಿ ಮತ್ತಷ್ಟು ಕುಸಿತ  ದಾಖಲಾಗಬಹುದು ಎಂದು ಹೇಳಲಾಗಿದೆ. 


ಇದನ್ನೂ ಓದಿ : Ram Mandir Ayodhya: ಶ್ರೀರಾಮನ ದರ್ಶನಕ್ಕೆ ಉಚಿತ ಬಸ್ ಟಿಕೆಟ್, ಇಂದಿನಿಂದ ಕೊಡುಗೆ ಆರಂಭ, ಈ ರೀತಿ ಬುಕ್ ಮಾಡಿ!


ಡಾಲರ್ ಸೂಚ್ಯಂಕ ಏರಿಕೆ:
ಕಳೆದ ಒಂದು ತಿಂಗಳ ಅವಧಿಯಲ್ಲಿ ಡಾಲರ್ ಸೂಚ್ಯಂಕದಲ್ಲಿ ಶೇ.1.44ರಷ್ಟು ಏರಿಕೆ ಕಂಡು 103.3ಕ್ಕೆ ತಲುಪಿದೆ. ಇದರ ಪರಿಣಾಮ ಕಡಿಮೆ ಡಾಲರ್‌ಗೆ ಹೆಚ್ಚು ಚಿನ್ನ ಲಭ್ಯವಾಗತೊಡಗಿತು.ಇತರ ಕರೆನ್ಸಿಗಳಿಗೆ ಹೋಲಿಸಿದರೆ US ಡಾಲರ್‌ನ ಬಲವು ಚಿನ್ನದ ಮೌಲ್ಯವನ್ನು ಕಡಿಮೆ ಮಾಡುತ್ತದೆ. ಹೂಡಿಕೆದಾರರು ಡಾಲರ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ. ಇದರಿಂದ ಚಿನ್ನದ ಬೇಡಿಕೆ ಕಡಿಮೆಯಾಗುತ್ತದೆ.


ಬೇಡಿಕೆ ಕುಸಿತ:
2024ರ ಆರಂಭದಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ಬೆಲೆ ಏರಿಕೆಯಿಂದ ಚಿನ್ನದ ಬೇಡಿಕೆ ಕಡಿಮೆಯಾಗಿದೆ.ಮದುವೆ ಸೀಸನ್‌ನಲ್ಲೂ ಚಿನ್ನದ ಬೇಡಿಕೆಯಲ್ಲಿ ಇಳಿಕೆಯಾಗುತ್ತಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. 


ಇದನ್ನೂ ಓದಿ : ಶನಿವಾರವೂ ಕಾರ್ಯನಿರ್ವಹಿಸಲಿರುವ ಷೇರು ಮಾರುಕಟ್ಟೆ: ನಾಳೆ ವಿಶೇಷ ಲೈವ್ ಟ್ರೇಡಿಂಗ್ ಸೆಷನ್!


ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರವನ್ನು ಹೆಚ್ಚಿಸಿದ ಪರಿಣಾಮವು ಚಿನ್ನದ ಬೆಲೆಯ ಮೇಲೂ ಗೋಚರಿಸುತ್ತದೆ. ವಾಸ್ತವವಾಗಿ, ಬಡ್ಡಿದರಗಳ ಹೆಚ್ಚಳದಿಂದಾಗಿ ಹೂಡಿಕೆದಾರರು ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ. ಇದರಿಂದ ಚಿನ್ನದ ಬೇಡಿಕೆ ಕಡಿಮೆಯಾಗಿದೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಬಡ್ಡಿದರ ಇಳಿಕೆಯಾಗುವ ನಿರೀಕ್ಷೆ ಇತ್ತು. ಆದರೆ  ಪ್ರಸ್ತುತ ಈ  ನಿರೀಕ್ಷೆಯೇ ಕಡಿಮೆಯಾಗಿರುವುದರಿಂದ ಚಿನ್ನದ ಬೆಲೆ ಕಡಿಮೆಯಾಗುತ್ತಿದೆ.


ಉತ್ಪಾದನೆಯಲ್ಲಿ ಹೆಚ್ಚಳ :
ಚಿನ್ನದ ಬೇಡಿಕೆ ಕುಸಿತ ಮತ್ತು ಉತ್ಪಾದನೆಯಲ್ಲಿ ಹೆಚ್ಚಳದಿಂದಾಗಿ ಚಿನ್ನದ ಬೆಲೆಯೂ ಇಳಿಕೆಯಾಗಿದೆ. ಏಕೆಂದರೆ ಚಿನ್ನದ ಲಭ್ಯತೆ ಹೆಚ್ಚಾದಂತೆ ಬೇಡಿಕೆ ಕಡಿಮೆಯಾಗಿದೆ. ಅದರ ಪರಿಣಾಮ ಚಿನ್ನದ ಬೆಲೆ ಕುಸಿತದ ರೂಪದಲ್ಲಿ ಕಾಣುತ್ತಿದೆ.


ಚಿನ್ನ ಬೆಳ್ಳಿ ಇಂದಿನ ಸ್ಥಿತಿ:
ವಾರದ ಕೊನೆಯ ವಹಿವಾಟು ದಿನವಾದ ಶುಕ್ರವಾರ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಏರಿಕೆ ಕಾಣುತ್ತಿದೆ. https://ibjarates.com/ ಬಿಡುಗಡೆ ಮಾಡಿದ ಬುಲಿಯನ್ ಮಾರುಕಟ್ಟೆ ದರಗಳ ಪ್ರಕಾರ , ಶುಕ್ರವಾರ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 237 ರೂಪಾಯಿ ಏರಿಕೆಯಾಗಿ 62207 ರೂಪಾಯಿಗಳಿಗೆ ತಲುಪಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.