Ram Mandir Ayodhya: ಶ್ರೀರಾಮನ ದರ್ಶನಕ್ಕೆ ಉಚಿತ ಬಸ್ ಟಿಕೆಟ್, ಇಂದಿನಿಂದ ಕೊಡುಗೆ ಆರಂಭ, ಈ ರೀತಿ ಬುಕ್ ಮಾಡಿ!

Ram Mandir Ayodhya: ದೇಶದ ವಿವಿಧ ರಾಜ್ಯಗಳಿಂದ ವಿಶೇಷ ಬಸ್‌ಗಳನ್ನು ರಸ್ತೆ ಮೂಲಕ ಓಡಿಸಲಾಗುತ್ತಿದೆ. ನೀವೂ ಅಯೋಧ್ಯೆಗೆ ಹೋಗಲು ಯೋಜನೆ ರೂಪಿಸುತ್ತಿದ್ದರೆ,  ಉಚಿತ ಬಸ್ ಟಿಕೆಟ್ ಪಡೆದುಕೊಳ್ಳಬಹುದು. ಹೌದು, ಭಕ್ತರಿಗಾಗಿ ಪೇಟಿಎಂ ಈ ವಿಶೇಷ ಕೊಡುಗೆ ಆರಂಭಿಸಿದೆ. (Business News In Kannada)  

Written by - Nitin Tabib | Last Updated : Jan 19, 2024, 05:09 PM IST
  • ಇದಲ್ಲದೇ, ಪ್ರಯಾಣದ ಅನುಭವವನ್ನು ಸುಧಾರಿಸಲು ಪೇಟಿಎಂ ಲೈವ್ ಬಸ್ ಟ್ರ್ಯಾಕಿಂಗ್ ಸೇವೆಯನ್ನು ಸಹ ಒದಗಿಸುತ್ತಿದೆ.
  • ಇದರ ಪ್ರಯೋಜನವೆಂದರೆ ಬಳಕೆದಾರರು ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಮತ್ತು
  • ಅವರು ಬುಕ್ ಮಾಡಿದ ಬಸ್‌ನ ರಿಯಲ್ ಟೈಮ್ ಸ್ಥಳವನ್ನು ತಮ್ಮ ಹತ್ತಿರದವರೊಂದಿಗೆ ಹಂಚಿಕೊಳ್ಳಬಹುದು.
Ram Mandir Ayodhya: ಶ್ರೀರಾಮನ ದರ್ಶನಕ್ಕೆ ಉಚಿತ ಬಸ್ ಟಿಕೆಟ್, ಇಂದಿನಿಂದ ಕೊಡುಗೆ ಆರಂಭ, ಈ ರೀತಿ ಬುಕ್ ಮಾಡಿ! title=

ಪೇಟಿಎಂ ಬಸ್ ಟಿಕೆಟ್ ಆಫರ್: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಜನರು ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಅಯೋಧ್ಯೆಗೆ ವಿಶೇಷ ರೈಲುಗಳನ್ನು ರೇಲ್ವೆ ವಿಭಾಗ ಓಡಿಸುತ್ತಿದೆ. ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಕಂಪನಿಗಳು ವಿಮಾನ ದರವನ್ನು ಹೆಚ್ಚಿಸಿವೆ. ದೇಶದ ವಿವಿಧ ರಾಜ್ಯಗಳಿಂದ ವಿಶೇಷ ಬಸ್‌ಗಳನ್ನು ರಸ್ತೆ ಮೂಲಕ ಓಡಿಸಲಾಗುತ್ತಿದೆ. ನೀವೂ ಅಯೋಧ್ಯೆಗೆ ಹೋಗಬೇಕೆಂದಿದ್ದರೆ ಉಚಿತ ಬಸ್ ಟಿಕೆಟ್ ಪಡೆಯಬಹುದು. ಹೌದು, ಭಕ್ತರಿಗಾಗಿ ಪೇಟಿಎಂ ವಿಶೇಷ ಕೊಡುಗೆ ಆರಂಭಿಸಿದೆ. ಈ ವಿಶೇಷ ಯೋಜನೆಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ, 

ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿದೆ
ಪೇಟಿಎಂ ಮಾಲೀಕತ್ವದ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ (ಓಸಿಎಲ್) ಈ ಯೋಜನೆಯನ್ನು ಪ್ರಾರಂಭಿಸಿದೆ. ಯೋಜನೆಯು ಜನವರಿ 19 ರಿಂದ ಆರಂಭವಾಗಿದೆ. ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಅಯೋಧ್ಯೆಗೆ ತೆರಳುವ ಭಕ್ತರಿಗೆ ವಿಶೇಷ ಕೊಡುಗೆಯನ್ನು ಕಂಪನಿ ಪ್ರಕಟಿಸಿದೆ. ದೇವಾಲಯದ ಉದ್ಘಾಟನಾ ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಯೋಧ್ಯೆಗೆ ಬರುತ್ತಾರೆ ಎಂದು ಕಂಪನಿ ನಿರೀಕ್ಷಿಸುತ್ತದೆ. ಇದರ ಅಡಿಯಲ್ಲಿ, ಮೊದಲ 1,000 ಜನರಿಗೆ ಉಚಿತ ಬಸ್ ಟಿಕೆಟ್ ನೀಡುವುದಾಗಿ ಕಂಪನಿ ಹೇಳಿದೆ.

ಇದನ್ನೂ ಓದಿ-iPhone14 ಪ್ರಿಯರಿಗೊಂದು ಭಾರಿ ಸಂತಸದ ಸುದ್ದಿ, 60 ಸಾವಿರಕ್ಕೂ ಕಡಿಮೆ ಬೆಲೆಗೆ ಖರೀದಿಸುವ ಸುವರ್ಣಾವಕಾಶ!

ಉಚಿತ ಟಿಕೆಟ್ ಪಡೆಯುವುದು ಹೇಗೆ
ಪೇಟಿಎಂ ನೀಡಿರುವ ಮಾಹಿತಿಯ ಪ್ರಕಾರ, ನೀವು ಸಹ ಅಯೋಧ್ಯೆಗೆ ಉಚಿತ ಬಸ್ ಟಿಕೆಟ್ ಪಡೆಯಲು ಬಯಸಿದರೆ, ನೀವು ಪೇಟಿಎಂ ಅಪ್ಲಿಕೇಶನ್ ಮೂಲಕ ಟಿಕೆಟ್ ಅನ್ನು ಬುಕ್ ಮಾಡಬೇಕಾಗುತ್ತದೆ. ಅಪ್ಲಿಕೇಶನ್ ಮೂಲಕ ಬಸ್ ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲ 1,000 ಬಳಕೆದಾರರು ಉಚಿತ ಬಸ್ ಟಿಕೆಟ್‌ಗಳನ್ನು ಪಡೆಯುತ್ತಾರೆ. ಇದಕ್ಕಾಗಿ ‘BUSAYODHYA’ ಪ್ರೋಮೋ ಕೋಡ್ ಬಳಸಬೇಕಾಗುತ್ತದೆ.

ಇದನ್ನೂ ಓದಿ-Economic Growth Rate: ವರ್ಷ 2024-25ರಲ್ಲಿ ಭಾರತದ ಆರ್ಥಿಕ ಅಭಿವೃದ್ಧಿ ದರ ಶೇ. 7 ರಷ್ಟಿರಲಿದೆ, ದಾವೋಸ್ ನಲ್ಲಿ ಆರ್ಬಿಐ ಗವರ್ನರ್ ಹೇಳಿಕೆ

ಇದಲ್ಲದೇ, ಪ್ರಯಾಣದ ಅನುಭವವನ್ನು ಸುಧಾರಿಸಲು ಪೇಟಿಎಂ ಲೈವ್ ಬಸ್ ಟ್ರ್ಯಾಕಿಂಗ್ ಸೇವೆಯನ್ನು ಸಹ ಒದಗಿಸುತ್ತಿದೆ. ಇದರ ಪ್ರಯೋಜನವೆಂದರೆ ಬಳಕೆದಾರರು ಆರಾಮವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ ಮತ್ತು ಅವರು ಬುಕ್ ಮಾಡಿದ ಬಸ್‌ನ ರಿಯಲ್ ಟೈಮ್ ಸ್ಥಳವನ್ನು ತಮ್ಮ ಹತ್ತಿರದವರೊಂದಿಗೆ ಹಂಚಿಕೊಳ್ಳಬಹುದು. ಪೇಟಿಎಂ ಮೂಲಕ ಉಚಿತ ಬಸ್ ಟಿಕೆಟ್ ರದ್ದು ಮಾಡುವ ಸೌಲಭ್ಯವನ್ನೂ ನೀಡಲಾಗುತ್ತಿದೆ. ಬಳಕೆದಾರರು ಯಾವುದೇ ಕಾರಣವನ್ನು ನೀಡದೆ ತಮ್ಮ ಟಿಕೆಟ್ ಅನ್ನು ರದ್ದುಗೊಳಿಸಬಹುದು ಮತ್ತು ಸಂಪೂರ್ಣ ಮರುಪಾವತಿಯನ್ನು ಪಡೆಯಬಹುದು. ತ್ವರಿತ ಪಾವತಿ ಅಪ್ಲಿಕೇಶನ್‌ನಿಂದ ಪ್ರಾರಂಭಿಸಿದ ಈ ಸೌಲಭ್ಯದ ಕುರಿತು ಮಾತನಾಡಿರುವ ಪೇಟಿಎಂ ವಕ್ತಾರರು, ಅಯೋಧ್ಯೆಗೆ ಹೋಗುವ ಭಕ್ತರಿಗೆ ವಿಶೇಷ ಯೋಜನೆಯನ್ನು ಒದಗಿಸಲು ಕಂಪನಿಗೆ ತುಂಬಾ ಸಂತಸವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News