Petrol Diesel Rate List : ಕೇಂದ್ರ ಸರ್ಕಾರವು 2024ರ ಲೋಕಸಭೆ ಚುನಾವಣೆಗೂ ಮುನ್ನ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿತಗೊಳಿಸಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರೂಪಾಯಿಯಷ್ಟು ಇಳಿಸಿದೆ. ಇದರಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ಸುದ್ದಿಯನ್ನು ಪ್ರಕಟಿಸಿದೆ. ದೇಶಾದ್ಯಂತ ಪೆಟ್ರೋಲ್ ಬೆಲೆಗಳ ಪರಿಷ್ಕರಣೆಯ ಬಗ್ಗೆ OMCಗಳು ಸಚಿವಾಲಯಕ್ಕೆ ತಿಳಿಸಿವೆ ಎಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್ ಮೂಲಕ ಹೇಳಿದೆ.


COMMERCIAL BREAK
SCROLL TO CONTINUE READING

ಮೇ 2022 ರ ನಂತರ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿರುವುದು ಇದೇ ಮೊದಲು. ಈ ಮಧ್ಯೆ, ದೇಶದ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜೂನ್ 2017ರ ಮೊದಲು, ಪ್ರತಿ 15 ದಿನಗಳಿಗೊಮ್ಮೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿತ್ತು.


ಇದನ್ನೂ ಓದಿ : Paytm Fastag Alert: ಪೇಟಿಎಂ ಫಾಸ್ಟ್ಯಾಗ್ ಬಳಕೆದಾರರಿಗೆ ಕೊನೆ ಅವಕಾಶ, ನಾಳೆಯಿಂದ ದುಪ್ಪಟ್ಟಾಗಲಿದೆ ಟೋಲ್


ಭಾರತದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯು ಸರಕು ಸಾಗಣೆ ಶುಲ್ಕಗಳು, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಸ್ಥಳೀಯ ತೆರಿಗೆಗಳಂತಹ ಪ್ರಭಾವಗಳಿಗೆ ಒಳಪಟ್ಟಿರುತ್ತದೆ. ಇದರ ಪರಿಣಾಮವಾಗಿ ರಾಜ್ಯಗಳಾದ್ಯಂತ ವಿಭಿನ್ನ ದರಗಳು ಕಂಡುಬರುತ್ತವೆ.


ಇಂದಿನ ಪೆಟ್ರೋಲ್ ಡೀಸೆಲ್ ದರದಲ್ಲಿ ಬದಲಾವಣೆ :
ಮಹಾರಾಷ್ಟ್ರದಲ್ಲಿ ಪೆಟ್ರೋಲ್ ಬೆಲೆ 42 ಪೈಸೆ ಮತ್ತು ಡೀಸೆಲ್ ಬೆಲೆ 40 ಪೈಸೆ ಇಳಿಕೆಯಾಗಿದೆ. ಉತ್ತರ ಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ 21 ಪೈಸೆಗಳಷ್ಟು ಅಗ್ಗವಾಗಿದೆ.ರಾಜಸ್ಥಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ 17 ಪೈಸೆಗಳಷ್ಟು ಅಗ್ಗವಾಗಿದೆ. ಬಿಹಾರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 19 ಪೈಸೆ ಮತ್ತು 18 ಪೈಸೆ ಏರಿಕೆಯಾಗಿದೆ.ಇದಲ್ಲದೆ ಛತ್ತೀಸ್‌ಗಢದಲ್ಲಿ ಪೆಟ್ರೋಲ್ 50 ಪೈಸೆ ಮತ್ತು ಡೀಸೆಲ್ 49 ಪೈಸೆಯಷ್ಟು ಅಗ್ಗವಾಗಿದೆ. ಮಾಚಲ ಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿದೆ.


ಇದನ್ನೂ ಓದಿ : Personal Loan-Credit Card ನಡುವಿನ ವ್ಯತ್ಯಾಸವೇನು? ಯಾವ ಸಮಯದಲ್ಲಿ ಯಾವ ಸಾಲ ಸೌಲಭ್ಯ ಹೆಚ್ಚು ಸೂಕ್ತ!


ಮಾರ್ಚ್ 15 ರಂದು ನಗರವಾರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಶೀಲಿಸಿ :


ನಗರ ಪೆಟ್ರೋಲ್ ಬೆಲೆ (ರೂ/ಲೀಟರ್) ಡೀಸೆಲ್ ಬೆಲೆ (ರೂ/ಲೀಟರ್)
 
ಚೆನ್ನೈ 100.75 92.24
 
ಕೋಲ್ಕತ್ತಾ 103.94 90.76
 
ಬೆಂಗಳೂರು 99.94 85.89
 
ಹೈದರಾಬಾದ್     107.66 95.82
 
ತಿರುವನಂತಪುರ 107.73 96.53
 

ಭಾರತದಲ್ಲಿ, ಕೇಂದ್ರ ಸರ್ಕಾರ ಮತ್ತು ಹಲವಾರು ರಾಜ್ಯಗಳು ಇಂಧನ ತೆರಿಗೆಗಳನ್ನು ಕಡಿತಗೊಳಿಸಿದ ನಂತರ ಮೇ 2022 ರಿಂದ ಇಂಧನ ಬೆಲೆಗಳು ಸ್ಥಿರವಾಗಿವೆ. ಕಚ್ಚಾ ತೈಲದ ಜಾಗತಿಕ ಬೆಲೆಯನ್ನು ಆಧರಿಸಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ OMCಗಳು ಇಂಧನ ಚಿಲ್ಲರೆ ಬೆಲೆಗಳನ್ನು ಸರಿಹೊಂದಿಸುತ್ತವೆ.ಅಬಕಾರಿ ತೆರಿಗೆ, ಮೂಲ ಬೆಲೆ ಮತ್ತು ಬೆಲೆ ಮಿತಿಗಳಂತಹ ಕಾರ್ಯವಿಧಾನಗಳ ಮೂಲಕ ಸರ್ಕಾರವು ಇಂಧನ ಬೆಲೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.