ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ !ಚಿನ್ನಾಭರಣ ಖರೀದಿದಾರರು ನಿರಾಳ
Gold Price Today : ಬಜೆಟ್ ಘೋಷಣೆಯಾಗುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕೂಡಾ ಇಳಿಕೆ ಕಂಡು ಬಂದಿದೆ. ಆಮದು ಸುಂಕ ಕಡಿತದಿಂದಾಗಿ ಮುಂಬರುವ ದಿನಗಳಲ್ಲಿ ಈ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.
Gold Price Today : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರ, ಎಂಸಿಎಕ್ಸ್ ಮತ್ತು ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ.ಸಂಸತ್ತಿನಲ್ಲಿ ಬಜೆಟ್ ಮಂಡಿಸುವಾಗ ಹಣಕಾಸು ಸಚಿವರು ಚಿನ್ನ ಮತ್ತು ಬೆಳ್ಳಿ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಇದರ ಪರಿಣಾಮ ಚಿನ್ನ ಮತ್ತು ಬೆಳ್ಳಿ ಬೆಲೆಯ ಮೇಲೆ ಕಂಡುಬಂದಿದೆ.ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ತಗ್ಗಿಸಲು ಆಮದು ಸುಂಕವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸುವುದಾಗಿ ಸಚಿವರಿ ಘೋಷಿಸಿದ್ದಾರೆ. ಪ್ಲಾಟಿನಂ ಮೇಲಿನ ಒಟ್ಟು ಆಮದು ಸುಂಕವನ್ನು 15.4% ರಿಂದ 6.4% ಕ್ಕೆ ಇಳಿಸಲಾಗಿದೆ. ಈ ಘೋಷಣೆಯ ಕೆಲವೇ ಗಂಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಕುಸಿತ ಕಂಡು ಬಂದಿದೆ.
ಮೇ ತಿಂಗಳಲ್ಲಿ ದಾಖಲೆ ಮಟ್ಟ ತಲುಪಿದ್ದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಂದು ಭಾರೀ ಇಳಿಕೆ ಕಂಡುಬರುತ್ತಿದೆ. ಹಿಂದೆ ಚಿನ್ನದ ದರ 10 ಗ್ರಾಂಗೆ 74222 ರೂ.ಗೆ ಏರಿಕೆಯಾಗಿತ್ತು. ಬೆಳ್ಳಿಯ ದರ 94118 ರೂ.ಗೆ ತಲುಪಿತ್ತು. ಆದರೆ ಇದೀಗ ಬೆಲೆ ಕುಸಿತದಿಂದ ಆಭರಣ ಖರೀದಿಗೆ ಮುಂದಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಏಷ್ಯಾದ ಹಲವು ರಾಷ್ಟ್ರಗಳ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸಿರುವುದು ದರಗಳ ಹೆಚ್ಚಳಕ್ಕೆ ಕಾರಣ ಎಂದು ಹೇಳಲಾಗಿತ್ತು.ಆದರೆ ಈಗ ಆಮದು ಸುಂಕ ಕಡಿತದಿಂದಾಗಿ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತಷ್ಟು ಕಡಿಮೆಯಾಗಬಹುದು.
ಇದನ್ನೂ ಓದಿ : Budget 2024: ನಿತೀಶ್-ನಾಯ್ಡುಗೆ ರಿಟರ್ನ್ ಗಿಫ್ಟ್, ಬಿಹಾರ-ಆಂಧ್ರಕ್ಕೆ ಬಜೆಟ್‌ನಲ್ಲಿ ಬಂಪರ್
MCX ನಲ್ಲಿ ದರ ಎಷ್ಟಿತ್ತು? :
ಬಜೆಟ್ ನಂತರ, ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್) ಚಿನ್ನದ ಬೆಲೆ ಮಂಗಳವಾರ 4000 ರೂ.ಗಿಂತ ಹೆಚ್ಚು ಕುಸಿದಿದೆ. ಎಂಸಿಎಕ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲಿ ಭಾರೀ ಕುಸಿತ ಕಂಡುಬರುತ್ತಿದೆ. ಮಧ್ಯಾಹ್ನ 1.30ರ ಸುಮಾರಿಗೆ ಚಿನ್ನದ ಬೆಲೆ 4163ರಷ್ಟು ಕುಸಿತ ಕಂಡಿದ್ದು, 10ಗ್ರಾಂಗೆ 68555 ರೂಪಾಯಿ ಆಗಿದೆ. ಇನ್ನು ಬೆಳ್ಳಿ ಕೂಡಾ 4603 ರೂಪಾಯಿಯಷ್ಟು ಕುಸಿತ ಕಂಡಿದ್ದು, 84600 ರೂಪಾಯಿ ಆಗಿದೆ.
ಬುಲಿಯನ್ ಮಾರುಕಟ್ಟೆಯಲ್ಲೂ ಕುಸಿತ:
ಸಂಜೆಯ ಹೊತ್ತಿಗೆ ಬುಲಿಯನ್ ಮಾರುಕಟ್ಟೆಯಲ್ಲಿ ದೊಡ್ಡ ಕುಸಿತ ಕಂಡುಬರಬಹುದು. ಮಧ್ಯಾಹ್ನ 12 ಗಂಟೆಗೆ https://ibjarates.com ಬಿಡುಗಡೆ ಮಾಡಿದ ದರಗಳ ಪ್ರಕಾರ , ಚಿನ್ನ ಮತ್ತು ಬೆಳ್ಳಿ ಎರಡರಲ್ಲೂ ಇಳಿಕೆ ಕಂಡುಬಂದಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.