Budget 2024: ನಿತೀಶ್-ನಾಯ್ಡುಗೆ ರಿಟರ್ನ್ ಗಿಫ್ಟ್, ಬಿಹಾರ-ಆಂಧ್ರಕ್ಕೆ ಬಜೆಟ್‌ನಲ್ಲಿ ಬಂಪರ್

Budget 2024: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಿಲ್ಲ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮುರನೇ ಬಾರಿಗೆ ಸರ್ಕಾರ ರಚಿಸಲು ಮಿತ್ರಪಕ್ಷಗಳ ಮೊರೆಹೋಗಬೀಕಾಯಿತು. ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ತಮ್ಮ ರಾಜ್ಯಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದವು.

Written by - Yashaswini V | Last Updated : Jul 23, 2024, 02:30 PM IST
  • ಆಂಧ್ರ ಮತ್ತು ಬಿಹಾರ ರಾಜ್ಯಗಳಿಂದ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ 'ಆರ್ಥಿಕ ಪ್ಯಾಕೇಜ್' ಘೋಷಿಸಬೇಕು ಎಂಬ ಬಹಳ ದೊಡ್ಡ ನಿರೀಕ್ಷೆ ಇತ್ತು.
  • ಆದರೆ 2024-25ರ ಸಾಮಾನ್ಯ ಬಜೆಟ್‌ನಲ್ಲಿ ಅಂತಹ ಘೋಷಣೆ ಹೊರಬೀಳಲಿಲ್ಲ.
  • ಬದಲಿಗೆ ಆಂಧ್ರ ಮತ್ತು ಬಿಹಾರ ರಾಜ್ಯಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಡುವುದಾಗಿ ಘೋಷಿಸಲಾಗಿದೆ.
Budget 2024: ನಿತೀಶ್-ನಾಯ್ಡುಗೆ ರಿಟರ್ನ್ ಗಿಫ್ಟ್, ಬಿಹಾರ-ಆಂಧ್ರಕ್ಕೆ  ಬಜೆಟ್‌ನಲ್ಲಿ ಬಂಪರ್  title=

Budget 2024: ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎ ಸರ್ಕಾರ (NDA Govt) ರಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Andhra Pradesh CM Chandrababu Naidu) ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಅವರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನಲ್ಲಿ ಭರ್ಜರಿ ಕೊಡುಗೆ ನೀಡಿದ್ದಾರೆ.

ಆಂಧ್ರ ಮತ್ತು ಬಿಹಾರ ರಾಜ್ಯಗಳಿಂದ ಕೇಂದ್ರ ಸರ್ಕಾರ (Central Govt) ಈ ಬಾರಿಯ ಬಜೆಟ್‌ನಲ್ಲಿ 'ಆರ್ಥಿಕ ಪ್ಯಾಕೇಜ್' ಘೋಷಿಸಬೇಕು ಎಂಬ ಬಹಳ ದೊಡ್ಡ ನಿರೀಕ್ಷೆ ಇತ್ತು. ಆದರೆ 2024-25ರ ಸಾಮಾನ್ಯ ಬಜೆಟ್‌ನಲ್ಲಿ ಅಂತಹ ಘೋಷಣೆ ಹೊರಬೀಳಲಿಲ್ಲ. ಬದಲಿಗೆ  ಆಂಧ್ರ ಮತ್ತು ಬಿಹಾರ ರಾಜ್ಯಗಳ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಕೊಡುವುದಾಗಿ ಘೋಷಿಸಲಾಗಿದೆ. ಈ ಮುಲಕ ‘ದೋಸ್ತಿಗಳಾದ’ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಖುಷಿಪಡಿಸಲಾಗಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬಂದಿಲ್ಲ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಮುರನೇ ಬಾರಿಗೆ ಸರ್ಕಾರ ರಚಿಸಲು ಮಿತ್ರಪಕ್ಷಗಳ ಮೊರೆಹೋಗಬೀಕಾಯಿತು. ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯಾಗಿ ತಮ್ಮ ರಾಜ್ಯಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಮಿತ್ರಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಈ ಬೇಡಿಕೆಗಳನ್ನು ನೇರವಾಗಿ ‘ವಿಶೇಷ ಆರ್ಥಿಕ ಪ್ಯಾಕೇಜ್’ ಬದಲಿಗೆ ವಿವಿಧ ಯೋಜನೆಗಳಿಗೆ ಹಣ ನೀಡುವ ಮೂಲಕ ಈಡೇರಿಸಾಲಾಗಿದೆ.

ಇದನ್ನೂ ಓದಿ- Budget 2024: ಹೊಸ ತೆರಿಗೆ ಸ್ಲ್ಯಾಬ್‌ ಘೋಷಣೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆ

ಬಿಹಾರ ರಾಜ್ಯಕ್ಕೆ 47 ಸಾವಿರ ಕೋಟಿ ರೂ.ಗಳ ಯೋಜನೆ!
ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ (Finance Minister Nirmala Sitharaman) ತಮ್ಮ ಏಳನೇ ಬಜೆಟಿನಲ್ಲಿ ಬಿಹಾರ ರಾಜ್ಯಕ್ಕೆ ಸುಮಾರು 47 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ಘೋಷಿಸಿದ್ದಾರೆ. ಸರ್ಕಾರ ಈ ಯೋಜನೆಗೆ ‘ಪೂರ್ವೋದಯ’ ಎಂದು ಹೆಸರಿಟ್ಟಿದೆ. ಇದರ ಅಡಿಯಲ್ಲಿ, ಬಿಹಾರದ ಜೊತೆಗೆ ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ವೇಗವನ್ನು ಮಾಡುವುದಾಗಿ ಹೇಳಿದೆ.

ನಿರ್ಮಲಾ ಸೀತಾರಾಮನ್ ಅವರು ಪಾಟ್ನಾ-ಪೂರ್ಣಿಯಾ ಎಕ್ಸ್‌ಪ್ರೆಸ್‌ವೇ, ಬಕ್ಸರ್-ಭಾಗಲ್ಪುರ್ ಎಕ್ಸ್‌ಪ್ರೆಸ್‌ವೇ, ಬಿಹಾರದಲ್ಲಿ ಬೋಧಗಯಾ-ರಾಜ್‌ಗೀರ್-ವೈಶಾಲಿ-ದರ್ಭಾಂಗ ಟಚ್‌ಪಾಯಿಂಟ್ ಮತ್ತು ಬಕ್ಸಾರ್‌ನಲ್ಲಿ ಗಂಗಾ ನದಿಯ ಮೇಲೆ ಒಂದು ಮತ್ತು ಎರಡು ಪಥದ ಸೇತುವೆಗಾಳನ್ನು ಘೋಷಿಸಿದ್ದಾರೆ. ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳಿಗೆ 26 ಸಾವಿರ ಕೋಟಿ ರೂ. ಇದರೊಂದಿಗೆ ಬಿಹಾರದ ಪೀರ್ ಪಯಂತಿಯಲ್ಲಿ 2,400 ಮೆಗಾವ್ಯಾಟ್ ವಿದ್ಯುತ್ ಯೋಜನೆಯನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ 21,400 ಕೋಟಿ ರೂ. ಇದರೊಂದಿಗೆ ರಾಜ್ಯದಲ್ಲಿ ವೈದ್ಯಕೀಯ ಸೇವೆಗಳು ಮತ್ತು ವಿಮಾನ ನಿಲ್ದಾಣಗಳ ಅಭಿವೃದ್ಧಿಯ ಬಗ್ಗೆಯೂ ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ. 

ಇದಲ್ಲದೇ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು 11.5 ಸಾವಿರ ಕೋಟಿ ರೂಪಾಯಿ ನೀಡುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ನೇಪಾಳದಲ್ಲಿ ಅಣೆಕಟ್ಟು ನಿರ್ಮಾಣವಾಗಲಿದೆ. ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಈ ಹಣವನ್ನು ಕೋಸಿ ಇಂಟ್ರಾ ಸ್ಟೇಟ್ ಲಿಂಕ್ ಮತ್ತು ಇತರ 20 ಯೋಜನೆಗಳಿಗೆ ಖರ್ಚು ಮಾಡಲಾಗುತ್ತದೆ. ಕೋಸಿ ನದಿಯ ಪ್ರವಾಹ ಸಮೀಕ್ಷೆಯನ್ನೂ ಸರ್ಕಾರ ನಡೆಸಲಿದೆ. 

ಇದನ್ನೂ ಓದಿ- Budget 2024: ರೈತರಿಗೆ ಹೊಸ ರೀತಿಯ ಕಿಸಾನ್ ಕ್ರೆಡಿಟ್ ಕಾರ್ಡ್‌ ಘೋಷಣೆ : ರೈತರಿಗೆ ಭಾರೀ ಕೊಡುಗೆ ನೀಡಿದ ಸರ್ಕಾರ 

ಅದೇ ರೀತಿ ಆಂಧ್ರಪ್ರದೇಶದ ಅಭಿವೃದ್ಧಿಗೆ ಹಣಕಾಸು ಸಚಿವರು ಹಲವು ಯೋಜನೆಗಳನ್ನು ಘೋಷಿಸಿದ್ದಾರೆ. ಆಂಧ್ರಪ್ರದೇಶದ ಸ್ವಂತ ರಾಜಧಾನಿಯನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ 15000 ಕೋಟಿ ರೂ.ಗಳ ನೆರವು ನೀಡಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News