ಸರ್ಕಾರಿ ನೌಕರರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳ ! ಈ ಬಾರಿ ಅವಧಿಗೂ ಮುನ್ನವೇ ನಿರ್ಧಾರ ಪ್ರಕಟ
ಕೊರೊನಾ ಅವಧಿಯಲ್ಲಿ ಖಾತೆಗೆ ಬೀಳದೆ ಬಾಕಿ ಉಳಿದಿರುವ ಡಿಎಯನ್ನು ಕೂಡಾ ವರ್ಗಾವಣೆ ಮಾಡಬಹುದು ಎನ್ನಲಾಗಿದೆ. ಇನ್ನು ಈ ಬಾರಿ ಅವಧಿಗಿಂತ ಮುನ್ನವೇ ಡಿಎ ಏರಿಕೆ ಬಗ್ಗೆ ಘೋಷಣೆ ಹೊರಬೀಳಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಬೆಂಗಳೂರು : ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಂಧಪಟ್ಟ ಈ ಘೋಷಣೆ ಯಾವುದೇ ಸಮಯದಲ್ಲಿಯೂ ಪ್ರಕಟವಾಗಬಹುದು. ಮೋದಿ ಸರ್ಕಾರ ಈ ದೊಡ್ಡ ಘೋಷಣೆಯನ್ನು ಇನ್ನು ಕೆಲವೇ ದಿನಗಳಲ್ಲಿ ಮಾಡಬಹುದು. ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎಯಲ್ಲಿನ ಹೆಚ್ಚಳವನ್ನು ಸರ್ಕಾರ ಶೀಘ್ರದಲ್ಲಿಯೇ ಘೋಷಣೆ ಮಾಡಲಿದೆ.
ಈ ಬಾರಿ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಏರಿಕೆಯಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೇ ಕೊರೊನಾ ಅವಧಿಯಲ್ಲಿ ಖಾತೆಗೆ ಬೀಳದೆ ಬಾಕಿ ಉಳಿದಿರುವ ಡಿಎಯನ್ನು ಕೂಡಾ ವರ್ಗಾವಣೆ ಮಾಡಬಹುದು ಎನ್ನಲಾಗಿದೆ. ಇನ್ನು ಈ ಬಾರಿ ಅವಧಿಗಿಂತ ಮುನ್ನವೇ ಡಿಎ ಏರಿಕೆ ಬಗ್ಗೆ ಘೋಷಣೆ ಹೊರಬೀಳಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ : UPI Enabled QR ಬಳಸಿ ಎನ್‌ಪಿಎಸ್ ಪೇಮೆಂಟ್ ಮಾಡುವುದರಿಂದ ಸಿಗುವ ಐದು ಪ್ರಮುಖ ಪ್ರಯೋಜನಗಳಿವು
2024 ರಲ್ಲಿ ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲು ತುಟ್ಟಿಭತ್ಯೆ ಹೆಚ್ಚಳವನ್ನು ಸರ್ಕಾರ ಘೋಷಣೆ ಮಾಡಲಿದೆ. ಈ ಮೂಲಕ ನೌಕರರ ವರ್ಗವನ್ನು ಓಲೈಸುವ ಪ್ರಯತ್ನದಲ್ಲಿದೆ ಸರ್ಕಾರ. ಸರ್ಕಾರ ಅಧಿಕೃತವಾಗಿ ಈ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ನೌಕರರ ಡಿಎಯಲ್ಲಿ ಎಷ್ಟು ಹೆಚ್ಚಳವಾಗಲಿದೆ ? :
ಕೇಂದ್ರ ಸರ್ಕಾರವು ನೌಕರರು ಮತ್ತು ಪಿಂಚಣಿದಾರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು ಎನ್ನಲಾಗಿದೆ. ಈ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯುತ್ತಿದೆ. ಒಂದು ವೇಳೆ ತುಟ್ಟಿಭತ್ಯೆ ಶೇ 4 ರಷ್ಟು ಏರಿಕೆಯಾದರೆ ಡಿಎ ಶೇ.50ಕ್ಕೆ ಏರಿಕೆಯಾಗಲಿದೆ. ಹಾಗಾಗಿ ಕೇಂದ್ರ ನೌಕರರ ಮೂಲ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ.
ಇದನ್ನೂ ಓದಿ : Today Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಚೇತರಿಕೆ
ಸದ್ಯ ನೌಕರರಿಗೆ ಶೇ.46 ರಷ್ಟು ಡಿಎ ಸೌಲಭ್ಯ ಸಿಗುತ್ತಿದೆ. ಡಿಎ ಹೆಚ್ಚಳದ ಲಾಭ ಸುಮಾರು 1 ಕೋಟಿ ಕುಟುಂಬಗಳಿಗೆ ದೊರೆಯಲಿದೆ. ಸರ್ಕಾರ ಇನ್ನೂ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಆದರೆ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.
ಖಾತೆ ಸೇರಲಿದೆ 18 ತಿಂಗಳ ಬಾಕಿ ಡಿಎ :
ಕರೋನ ಸಮಯದಲ್ಲಿ ತಡೆ ಹಿಡಿಯಲಾಗಿರುವ 18 ತಿಂಗಳ ಬಾಕಿ ಡಿಎ ಹಣವನ್ನು ಕೂಡಾ ಈ ಬಾರಿ ನೌಕರರ ಖಾತೆಗೆ ಜಮಾ ಮಾಡಬಹುದು ಎನ್ನಲಾಗಿದೆ. ಇದಾದ ಬಳಿಕ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಖಾತೆಗೆ ಭಾರೀ ಮೊತ್ತ ಜಮೆಯಾಗುವುದು ಖಚಿತ ಎಂದೇ ಹೇಳಲಾಗುತ್ತಿದೆ. ವರದಿಯೊಂದರ ಪ್ರಕಾರ, ಕೇಂದ್ರ ನೌಕರರ ಖಾತೆಗೆ ಸುಮಾರು 2 ಲಕ್ಷ 18 ಸಾವಿರ ರೂ.ಗಳಷ್ಟು ಹಣ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.