ಸರ್ಕಾರಿ ನೌಕರರ ವೇತನದಲ್ಲಿ 20484 ರೂ. ಹೆಚ್ಚಳ ! ಯಾವ ಲೆಕ್ಕಾಚಾರ ಇಲ್ಲಿದೆ ಸಂಪೂರ್ಣ ವಿವರ !
ಶೀಘ್ರದಲ್ಲೇ ಅವರ ತುಟ್ಟಿಭತ್ಯೆ ಹೆಚ್ಚಾಗುತ್ತದೆ. ತುಟ್ಟಿಭತ್ಯೆ ಈ ಬಾರಿ ಶೇಕಡಾ 50 ದಾಟುತ್ತದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು : ಮುಂದಿನ ವರ್ಷ ದೇಶದ ಕೇಂದ್ರ ನೌಕರರಿಗೆ ಎರಡು ದೊಡ್ಡ ಗುಡ್ ನ್ಯೂಸ್ ಸಿಗಲಿದೆ. ಇತ್ತೀಚೆಗಷ್ಟೇ ನೌಕರರ ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ ಫಿಟ್‌ಮೆಂಟ್ ಅಂಶ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ 2024 ರ ವರ್ಷವು ಶುಭ ಸುದ್ದಿಯೊಂದಿಗೆ ಪ್ರಾರಂಭವಾಗಲಿದೆ. ಶೀಘ್ರದಲ್ಲೇ ಅವರ ತುಟ್ಟಿಭತ್ಯೆ ಹೆಚ್ಚಾಗುತ್ತದೆ. ತುಟ್ಟಿಭತ್ಯೆ ಈ ಬಾರಿ ಶೇಕಡಾ 50 ದಾಟುತ್ತದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಶೇ.46ರ ದರದಲ್ಲಿ ನೀಡಲಾಗುತ್ತಿದೆ. ಆದರೆ, ತುಟ್ಟಿಭತ್ಯೆ ಹೆಚ್ಚಳದೊಂದಿಗೆ, ನೌಕರರ ಇತರ ಭತ್ಯೆಗಳು ಕೂಡಾ ಶೇಕಡಾ 3 ರಷ್ಟು ಹೆಚ್ಚಾಗುತ್ತವೆ. ಇದರೊಂದಿಗೆ ಅವರ ವೇತನದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಗಳೂ ಇವೆ.
ಇದನ್ನೂ ಓದಿ : Arecanut today price(December 8th): ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ
3ರಷ್ಟು ಭತ್ಯೆ ಹೆಚ್ಚಳವಾಗಲಿದೆ:
ತುಟ್ಟಿಭತ್ಯೆಯ ಹೊರತಾಗಿ, ಕೇಂದ್ರ ನೌಕರರು ಅನೇಕ ರೀತಿಯ ಭತ್ಯೆಗಳನ್ನು ಪಡೆಯುತ್ತಾರೆ. ಇವುಗಳಲ್ಲಿ ಒಂದು ಮನೆ ಬಾಡಿಗೆ ಭತ್ಯೆ (HRA). ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. 2021 ರಲ್ಲಿ, ತುಟ್ಟಿಭತ್ಯೆ 25% ದಾಟಿದಾಗ HRA ಪರಿಷ್ಕರಿಸಲಾಗಿತ್ತು. ಜುಲೈ 2021 ರಲ್ಲಿ, DA 25% ದಾಟಿದ ತಕ್ಷಣ, HRAಯನ್ನು ಕೂಡಾ 3% ದಷ್ಟು ಹೆಚ್ಚಿಸಲಾಯಿತು.
ಪ್ರಸ್ತುತ HRA ದರವನ್ನು 27%, 18% ಮತ್ತು 9% ರಲ್ಲಿ ನೀಡಲಾಗುತ್ತಿದೆ. ಈಗ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಸರ್ಕಾರಿ ನೌಕರರು ಕಾಯುತ್ತಿದ್ದಾರೆ. ಹೊಸ ವರ್ಷದಲ್ಲಿ ತುಟ್ಟಿಭತ್ಯೆ ಶೇಕಡಾ 50 ತಲುಪುವ ನಿರೀಕ್ಷೆಯಿದೆ. ಹೀಗಾದಾಗ ಮತ್ತೊಮ್ಮೆ HRAಯಲ್ಲಿ 3 ಪ್ರತಿಶತದಷ್ಟು ಪರಿಷ್ಕರಣೆಯಾಗುತ್ತದೆ.
ಇದನ್ನೂ ಓದಿ : ರೈತರಿಗೆ ಸರ್ಕಾರ ಭರ್ಜರಿ ಯೋಜನೆ ! ಲಾಭ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ
HRA ಶೇಕಡಾ 30 ದಾಟಲಿದೆ :
ಪ್ರಸ್ತುತ ಸರ್ಕಾರಿ ನೌಕರರು 27 ಪ್ರತಿಶತದಷ್ಟು ಹೆಚ್ಆರ್ ಎ ಪಡೆಯುತ್ತಿದ್ದಾರೆ. ಇದು ಪರಿಷ್ಕರಣೆ ನಂತರ HRA 30% ಆಗಿರುತ್ತದೆ. ಆದರೆ, ತುಟ್ಟಿಭತ್ಯೆ 50% ತಲುಪಿದಾಗ, ಮಾತ್ರ ಹೆಚ್ಆರ್ ಎ ಕೂಡಾ ಹೆಚ್ಚಳವಾಗುತ್ತದೆ. ಮೆಮೊರಾಂಡಮ್ ಪ್ರಕಾರ, ಡಿಎ ಶೇಕಡಾ 50 ತಲುಪಿದ ತಕ್ಷಣ, X, Y ಮತ್ತು Z ವರ್ಗದ ನಗರಗಳ ಪ್ರಕಾರ ಎಚ್‌ಆರ್‌ಎ 30%, 20% ಮತ್ತು 10% ಆಗುತ್ತದೆ.
ಎಕ್ಸ್ ವರ್ಗಕ್ಕೆ ಸೇರುವ ಕೇಂದ್ರೀಯ ಉದ್ಯೋಗಿಗಳು ಶೇಕಡಾ 27 ರಷ್ಟು ಎಚ್‌ಆರ್‌ಎ ಪಡೆಯುತ್ತಿದ್ದಾರೆ. ಡಿಎ 50% ಆದಾಗ ಅದು 30% ಆಗುತ್ತದೆ. ಅದೇ ಸಮಯದಲ್ಲಿ, ವೈ ಕ್ಲಾಸ್ ಜನರಿಗೆ ಇದು 18 ಪ್ರತಿಶತದಿಂದ 20 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಝಡ್ ವರ್ಗದವರಿಗೆ ಶೇ.9ರಿಂದ ಶೇ.10ಕ್ಕೆ ಏರಿಕೆಯಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.