7th pay commission :ಈ ತಿಂಗಳಲ್ಲಿಯೇ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ : ಖಾತೆ ಸೇರುವ ಒಟ್ಟು ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ
7th pay commission :2024 ಕೇಂದ್ರ ಸರ್ಕಾರಿ ನೌಕರರಿಗೆ ಹಲವು ಒಳ್ಳೆಯ ಸುದ್ದಿಗಳನ್ನು ತಂದಿದೆ. ಈ ವರ್ಷ ನೌಕರರು ವೇತನದಲ್ಲಿ ಭಾರಿ ಹೆಚ್ಚಳವನ್ನು ಪಡೆಯುತ್ತಾರೆ.
7th pay commission : ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಇದೊಂದು ಪ್ರಮುಖ ಅಪ್‌ಡೇಟ್. ಹೊಸ ವರ್ಷ 2024 ಕೇಂದ್ರ ಸರ್ಕಾರಿ ನೌಕರರಿಗೆ ಹಲವು ಒಳ್ಳೆಯ ಸುದ್ದಿಗಳನ್ನು ತಂದಿದೆ. ಈ ವರ್ಷ ನೌಕರರು ವೇತನದಲ್ಲಿ ಭಾರಿ ಹೆಚ್ಚಳವನ್ನು ಪಡೆಯುತ್ತಾರೆ. ನೌಕರರು ಕಾಯುತ್ತಿರುವ ತುಟ್ಟಿಭತ್ಯೆ ಹೆಚ್ಚಳದ ಹೊರತಾಗಿ, ಇತರ ಭತ್ಯೆಗಳಲ್ಲಿಯೂ ಏರಿಕೆಯಾಗಲಿದೆ. ಇವುಗಳಿಂದಾಗಿ ಒಟ್ಟಾರೆ ವೇತನದಲ್ಲಿ ಉತ್ತಮ ಏರಿಕೆಯಾಗಲಿದೆ.
ಭತ್ಯೆಗಳಲ್ಲಿ ಹೆಚ್ಚಳ :
31 ಜನವರಿ 2024 ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಮೂಲ ಡೇಟಾದ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಈ ದಿನಾಂಕದಂದು, ಡಿಸೆಂಬರ್ ತಿಂಗಳ AICPI ಸೂಚ್ಯಂಕ ಸಂಖ್ಯೆಗಳು ಹೊರಬೀಳುತ್ತವೆ. ಇದಾದ ನಂತರ, ಜನವರಿಯಿಂದ ತುತ್ತಿಭತ್ಯೆಯಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬುದು ಸ್ಪಷ್ಟವಾಗುತ್ತದೆ. ನವೆಂಬರ್ ವರೆಗಿನ AICPI ದತ್ತಾಂಶವನ್ನು ಆಧರಿಸಿ, ಈ ಬಾರಿಯ ಡಿಎ ಕನಿಷ್ಠ 50 ಪ್ರತಿಶತವನ್ನು ತಲುಪುತ್ತದೆ ಎಂಬುದು ಸ್ಪಷ್ಟವಾಗಿದೆ.
ಇದನ್ನೂ ಓದಿ : Ram Mandir: ರಘುನಂದನ ಶ್ರೀರಾಮನ ಜೀವನದಿಂದ ಕಲಿಯಿರಿ ಫೈನಾನ್ಸಿಯಲ್ ಪ್ಲಾನಿಂಗ್ ಮಂತ್ರ, ನಿಮ್ಮ ಗಳಿಕೆ ರಕ್ಷಿಸುತ್ತಾನೆ ಭಗವಂತ
AICPI ಸೂಚ್ಯಂಕ :
ವರ್ಷಕ್ಕೆ ಎರಡು ಬಾರಿ ತುಟ್ಟಿಭತ್ಯೆ ದರವನ್ನು ಏರಿಕೆ ಮಾಡಲಾಗುತ್ತದೆ. ಜನವರಿಯಲ್ಲಿ ಏರಿಕೆಯಾಗುವ ತುಟ್ಟಿಭತ್ಯೆ ದರ ಎಷ್ಟು ಎನ್ನುವುದು ಹಿಂದಿನ ವರ್ಷದ ಜುಲೈನಿಂದ ಡಿಸೆಂಬರ್‌ವರೆಗಿನ AICPI ಸೂಚ್ಯಂಕವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಜುಲೈ ತಿಂಗಳ ತುಟ್ಟಿಭತ್ಯೆ ದರವನ್ನು ಜನವರಿಯಿಂದ ಜೂನ್‌ವರೆಗಿನ AICPI ಸೂಚ್ಯಂಕವನ್ನು ಆಧರಿಸಿ ಲೆಕ್ಕಹಾಕಲಾಗುತ್ತದೆ. ಪ್ರಸ್ತುತ, ಕೇಂದ್ರ ಸರ್ಕಾರಿ ನೌಕರರು 46 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಜನವರಿಯಿಂದ ಶೇ.50 ಅಥವಾ ಶೇ.51ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ.
ಡಿಎ ಹೆಚ್ಚಳದ ಘೋಷಣೆಯು ಮಾರ್ಚ್ 2024 ರಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಉದ್ಯೋಗಿಗಳಿಗೆ ಮತ್ತೊಂದು ಸಂತಸದ ಸುದ್ದಿಯಿದೆ. ಜನವರಿ 31ರ ನಂತರ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಭತ್ಯೆಯನ್ನು 3%ದಷ್ಟು ಹೆಚ್ಚಿಸಲಾಗುವುದು.
ಮನೆ ಬಾಡಿಗೆ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳ :
ಕೇಂದ್ರ ಉದ್ಯೋಗಿಗಳ ಡಿಎ ಶೀಘ್ರದಲ್ಲೇ ಶೇ.50ಕ್ಕೆ ಏರಿಕೆಯಾಗಲಿದೆ. ತುಟ್ಟಿ ಭತ್ಯೆ ಜತೆಗೆ ಕೇಂದ್ರ ನೌಕರರ ಮತ್ತೊಂದು ಭತ್ಯೆಯೂ ಹೆಚ್ಚಾಗಲಿದೆ. ಮನೆ ಬಾಡಿಗೆ ಭತ್ಯೆ ಕೂಡಾ ಹೆಚ್ಚಾಗಲಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರ ಅದನ್ನು ಹೆಚ್ಚಿಸಲು ನಿಯಮಗಳನ್ನು ರೂಪಿಸಿದೆ.
ಇದನ್ನೂ ಓದಿ : ಸರ್ಕಾರದ ಈ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಗೃಹಿಣಿಯರು ಲಕ್ಷಾಧಿಪತಿಗಳಾಗುವುದು ಗ್ಯಾರಂಟಿ !
2021 ರಲ್ಲಿ ತುಟ್ಟಿಭತ್ಯೆ 25% ಮೀರಿದಾಗ HRA ಅನ್ನು ಪರಿಷ್ಕರಿಸಲಾಗಿತ್ತು. ಜುಲೈ 2021 ರಂದು ಡಿಎ 25% ದಾಟಿದಾಗ HRAಯನ್ನು 3% ಹೆಚ್ಚಿಸಲಾಗಿತ್ತು. HRA ಪ್ರಸ್ತುತ 27%, 18% ಮತ್ತು 9% ಆಗಿದೆ. ತುಟ್ಟಿಭತ್ಯೆ ಶೀಘ್ರದಲ್ಲೇ 50% ತಲುಪುವ ನಿರೀಕ್ಷೆಯಿದೆ. ಹೀಗಾದಾಗ HRA ಮತ್ತೆ ಶೇಕಡಾ 3 ರಷ್ಟು ಹೆಚ್ಚಾಗುತ್ತದೆ.
HRA ಹೆಚ್ಚಳ:
ಮನೆ ಬಾಡಿಗೆ ಭತ್ಯೆಯಲ್ಲಿ ಮುಂದಿನ ಪರಿಷ್ಕರಣೆಯು ಶೇಕಡಾ 3 ಆಗಿರುತ್ತದೆ. HRA ಯ ಗರಿಷ್ಠ ದರವು 27% ಆಗಿದೆ. ಪರಿಷ್ಕರಣೆಯ ನಂತರ, ಗರಿಷ್ಠ HRA ದರವು 30 ಪ್ರತಿಶತಕ್ಕೆ ಏರುತ್ತದೆ. ಒಂದು ವೇಳೆ ಡಿಎ 50% ದಷ್ಟು ಹೆಚ್ಚಾದಾಗ ಮಾತ್ರ ಹೀಗಾಗುತ್ತದೆ. ಅಂದರೆ ಜ್ಞಾಪಕ ಪತ್ರದ ಪ್ರಕಾರ, HRA 30%, 20% ಮತ್ತು 10% ಆಗುತ್ತದೆ. X, Y ಮತ್ತು Z ವರ್ಗದ ಆಧಾರದ ಮೇಲೆ ಮನೆ ಬಾಡಿಗೆ ಭತ್ಯೆನೀಡಲಾಗುತ್ತದೆ.
HRA ಲೆಕ್ಕಾಚಾರ ಹೇಗೆ? :
7 ನೇ ವೇತನದ ಮ್ಯಾಟ್ರಿಕ್ಸ್ ಪ್ರಕಾರ, ಬಾಡಿಗೆ ವಸತಿಗಳಲ್ಲಿ ವಾಸಿಸುವ ಉದ್ಯೋಗಿಗಳು HRA ಪ್ರಯೋಜನವನ್ನು ಪಡೆಯುತ್ತಾರೆ. HRA ಮೊತ್ತವು ನಗರದಿಂದ ನಗರಕ್ಕೆ ಬದಲಾಗುತ್ತದೆ. ಉದಾಹರಣೆಗೆ, ಶ್ರೇಣಿ-1 ನಗರಗಳಲ್ಲಿ ವಾಸಿಸುವ ಉದ್ಯೋಗಿಯು ಶ್ರೇಣಿ-2 ಅಥವಾ ಶ್ರೇಣಿ-3 ನಗರಗಳಲ್ಲಿ ವಾಸಿಸುವ ಉದ್ಯೋಗಿಗಿಂತ ಹೆಚ್ಚಿನ HRAಯನ್ನು ಪಡೆಯುತ್ತಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ