ಬಿಸಿಲಿನ ಝಳಕ್ಕೆ ತರಕಾರಿಗಳ ಬೆಲೆ ಏರಿಕೆ : ತರಕಾರಿ ಬೆಲೆ ಕೇಳಿ ಬೆಸ್ತು ಬೀಳುವ ಸ್ಥಿತಿ
ರಾಜ್ಯ ರಾಜಾಧಾನಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಸಾವಿರಾರು ರೂಪಾಯಿ ಕೊಟ್ಟು ನೀರು ಖರೀದಿಸಿದಂತಹ ಸಿಲಿಕಾನ್ ಸಿಟಿ ಮಂದಿ ಇನ್ಮುಂದೆ ದುಬಾರಿ ಹಣ ಕೊಟ್ಟು ತರಕಾರಿಗಳನ್ನ ಖರೀದಿಸುವಂತಾಗಿದೆ.
ಬೆಂಗಳೂರು :ರಾಜಾಧಾನಿಯಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿ ಹೋಗಿದೆ.ಹೀಗಾಗಿ ಈ ಬೇಸಿಗೆಯಲ್ಲಿ ಸಿಟಿಗೆ ತರಕಾರಿಗಳು ಬರುವುದೇ ಕಡಿಮೆಯಾಗಿ ಹೋಗಿದ್ದು, ತರಕಾರಿಗಳ ಬೆಲೆ ಸದ್ಯ ಗಗನಕ್ಕೆ ಏರಿದೆ.ಗ್ರಾಹಕರು ಬೆಲೆ ಕೇಳಿ ಸುಸ್ತಾಗುವಂತಾಗಿದೆ.
ಬಿಸಿಲಿನ ಝಳಕ್ಕೆ ತರಕಾರಿಗಳ ಬೆಲೆ ಏರಿಕೆ :
ರಾಜ್ಯ ರಾಜಾಧಾನಿಯಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದೆ. ಇದರಿಂದ ಬೆಂಗಳೂರಿನ ಜನ ಮೊದಲೇ ನೀರಿಲ್ಲದೇ ರೋಸಿ ಹೋಗ್ತಾ ಇದ್ದಾರೆ. ಹೀಗಾಗಿ ಸಾವಿರಾರು ರೂಪಾಯಿ ಕೊಟ್ಟು ನೀರು ಖರೀದಿಸಿದಂತಹ ಸಿಲಿಕಾನ್ ಸಿಟಿ ಮಂದಿ ಇನ್ಮುಂದೆ ದುಬಾರಿ ಹಣ ಕೊಟ್ಟು ತರಕಾರಿಗಳನ್ನ ಖರೀದಿಸುವಂತಾಗಿದೆ.
ಇದನ್ನೂ ಓದಿ : ಜನನ ನೋಂದಣಿ ಮಾಡುವಾಗ ಈ ಮಾಹಿತಿ ನೀಡಲೇ ಬೇಕು! ಆಧಾರ್, ವೋಟರ್ ಐಡಿ, ರೇಶನ್ ಎಲ್ಲದಕ್ಕೂ Birth Registration ಆಧಾರ
ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಬಿಸಿಲಿನ ಪ್ರಮಾಣ:
ಬಿಸಿಲು ಹೆಚ್ಚಾದಂತೆ ತರಕಾರಿಗಳ ಬೆಲೆ ಕೂಡಾ ಏರಿಕೆಯಾಗಿದೆ. ಬೀನ್ಸ್,ಬದನೆ, ಸೊಪ್ಪು, ಮೆಣಸಿನಕಾಯಿ ಏರಿಕೆ ಬೆಲೆ ಡಬಲ್ ಆಗಿದೆ. ಬಿಸಿಲು ಜಾಸ್ತಿಯಾಗಿರುವುದರಿಂದ ಬೇಸಿಗೆಯಲ್ಲಿ ಹೆಚ್ಚು ಬಳಸುವ ಸೌತೆಕಾಯಿ, ಕ್ಯಾರೆಟ್, ನಿಂಬೆಹಣ್ಣುಗಳಿಗೂ ಬೆಲೆಯು ಏರಿಕೆಯಾಗಿದೆ. ಇದಲ್ಲದೇ ಸೊಪ್ಪುಗಳ ಬೆಲೆಯು ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ಬಿಸಿಲು ಹೆಚ್ಚಾದರೆ,ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯಾತೆ ಇದೆ.
ಸದ್ಯ ರಾಜ್ಯದ ವಿವಿಧ ಜಿಲ್ಲೆಗಳಿಂದ ತರಕಾರಿಗಳು ಬರುತ್ತಿವೆ. ಆದರೆ ಬೇಡಿಕೆಗೆ ತಕ್ಕಷ್ಟು ತರಕಾರಿಗಳು ಬರುತ್ತಿಲ್ಲ. ಬಿಸಿಲಲ್ಲಿ ತರಕಾರಿಗಳನ್ನು ರಕ್ಷಿಸುವುದು ಕೂಡಾ ಕಷ್ಟವಾಗಿ ಹೋಗಿದೆ ಅನ್ನುವುದು ವ್ಯಾಪಾರಸ್ಥರ ತಲೆ ನೋವು. ಸದ್ಯ ತರಕಾರಿಗಳ ಬೆಲೆ ಎಷ್ಟಿದೆ ನೋಡೋಣ.
ತರಕಾರಿ | ಇಂದಿನ ಬೆಲೆ | ಹಿಂದಿನ ಬೆಲೆ |
ಬೀನ್ಸ್ | 60 | 80 |
ಮೂಲಂಗಿ | 35 | 25 |
ಬದನೆಕಾಯಿ | 40 | 35 |
ಊಟಿ ಕ್ಯಾರೆಟ್ | 100 | 60 |
ಹಾಗಲಕಾಯಿ | 60 | 45 |
ಈರುಳ್ಳಿ | 25 | 20 |
ಬಿಟ್ರೋಟ್ | 45 | 40 |
ನವಿಲುಕೋಸು | 35 | 25 |
ಬೆಂಡೆಕಾಯಿ | 40 | 35 |
ಬೆಳ್ಳುಳ್ಳಿ | 160 | 300 |
ಅಲೂಗಡ್ಡೆ | 30 | 25 |
ಹೀರೆಕಾಯಿ | 40 | 35 |
ಟೋಮಾಟೋ | 25 | 20 |
ಮೆಣಸಿನಕಾಯಿ | 60 | 45 |
ಕೊತ್ತಂಬರಿ | 30 | 20 |
ಕ್ಯಾಪ್ಸಿಕಮ್ | 40 | 20 |
ನುಗ್ಗೆಕಾಯಿ | 80 | 60 |
ಇದನ್ನೂ ಓದಿ : RBI MPC: ಯುಪಿಐ ಮೂಲಕ ನಗದು ಠೇವಣಿ ಸೌಲಭ್ಯ: ಆರ್‌ಬಿಐ ಗವರ್ನರ್ ಹೇಳಿದ್ದೇನು?
ಎಲ್ಲಾ ವಸ್ತುಗಳ ಬೆಲೆ ಏರಿಕೆಯಿಂದ ಜನ ಮೊದಲೇ ತತ್ತರಿಸಿ ಹೋಗಿದ್ದಾರೆ. ಈ ನಡುವೆ, ತರಕಾರಿಗಳ ಬೆಲೆ ಏರಿಕೆಯಾಗಿರುವುದು ಸಾಮಾನ್ಯ ಜನರ ಜೀವನದ ಮೇಲೆ ಪರಿಣಾಮ ಬೀರಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .