Union Ministry of Home Affairs : ಗೃಹ ಸಚಿವಾಲಯವು ದೊಡ್ಡ ಬದಲಾವಣೆಗಳನ್ನು ಮಾಡುತ್ತಿದೆ.ಇನ್ನು ಮುಂದೆ ಕುಟುಂಬದಲ್ಲಿ ಯಾವುದೇ ನವಜಾತ ಶಿಶು ಜನಿಸಿದರೆ,ಮಗುವಿನ ಜನನದ ನೋಂದಣಿಯಲ್ಲಿ ಪೋಷಕರ ಧರ್ಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕಾಗುತ್ತದೆ.ಇದರ ಅಡಿಯಲ್ಲಿ, ಮಗುವಿನ ಪೋಷಕರಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರತ್ಯೇಕವಾಗಿ ನಮೂದಿಸುವುದು ಅವಶ್ಯಕವಾಗಿದೆ. ಇದುವರೆಗಿನ ನಿಯಮದ ಪ್ರಕಾರ, ಮಗುವಿನ ಜನನದ ಸಮಯದಲ್ಲಿ ಕುಟುಂಬದ ಧರ್ಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ದಾಖಲಿಸಲಾಗಿತ್ತು.ಆದರೆ ಇದೀಗ ಈ ನಿಟ್ಟಿನಲ್ಲಿ ಗೃಹ ಸಚಿವಾಲಯ ಕರಡು ಮಾದರಿ ನಿಯಮಗಳನ್ನು ಸಿದ್ಧಪಡಿಸಿದೆ.ಈ ಕರಡನ್ನು ಗೃಹ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ.
ಸಂಬಂಧಿತ ಮಾಹಿತಿಯನ್ನು ಹೊಸ ಕಾಲಂನಲ್ಲಿ ನಮೂದಿಸಲಾಗುವುದು :
ಈ ಹಿಂದೆ ಮಗುವಿನ ಜನನಕ್ಕೆ ಸಂಬಂಧಿಸಿದ ನೋಂದಣಿ ನಮೂನೆ ಸಂಖ್ಯೆ 1ರಲ್ಲಿ ಕುಟುಂಬದ ಧರ್ಮದ ಕಾಲಂ ಇತ್ತು. ಆದರೆ ಈಗ ಅದಕ್ಕೆ ಮತ್ತೊಂದು ಅಂಕಣ ಸೇರ್ಪಡೆಯಾಗಿದೆ. ಈ ಅಂಕಣದಲ್ಲಿ ಮಗುವಿನ ಪೋಷಕರ ಧರ್ಮಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕಾಗುತ್ತದೆ. ದತ್ತು ಪ್ರಕ್ರಿಯೆಗೆ ನಮೂನೆ ಸಂಖ್ಯೆ 1 ಸಹ ಅಗತ್ಯವಾಗುತ್ತದೆ. ಕಳೆದ ವರ್ಷ ಅಂಗೀಕರಿಸಿದ ಜನನ-ಮರಣ ನೋಂದಣಿ (ತಿದ್ದುಪಡಿ) ಕಾಯಿದೆಯ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಜನನ ಮತ್ತು ಮರಣಗಳ ನೋಂದಣಿ ಅಗತ್ಯವಾಗಿದೆ.
ಇದನ್ನೂ ಓದಿ : RBI MPC: ಯುಪಿಐ ಮೂಲಕ ನಗದು ಠೇವಣಿ ಸೌಲಭ್ಯ: ಆರ್‌ಬಿಐ ಗವರ್ನರ್ ಹೇಳಿದ್ದೇನು?
ಈ ಡೇಟಾಬೇಸ್‌ನಿಂದ ಈ ವಿಷಯಗಳ ದಾಖಲೆಗಳನ್ನು ನಿರ್ವಹಿಸಲಾಗುತ್ತದೆ.ಮೂಲಗಳ ಪ್ರಕಾರ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್), ಆಧಾರ್ ಕಾರ್ಡ್, ಮತದಾರರ ಪಟ್ಟಿ, ರೇಷನ್ ಕಾರ್ಡ್, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್‌ನಂತಹ ದಾಖಲೆಗಳನ್ನು ಜನನ ನೋಂದಣಿಯ ಹೊಸ ನಮೂನೆ ಸಂಖ್ಯೆ 1 ರಿಂದ ಪಡೆದ ಡೇಟಾಬೇಸ್ ಆಧಾರದ ಮೇಲೆ ನವೀಕರಿಸಲಾಗುತ್ತದೆ. ಮಗುವಿನ ಜನನಕ್ಕೆ ಸಂಬಂಧಿಸಿದ ಈ ಡಿಜಿಟಲ್ ಪ್ರಮಾಣಪತ್ರವು ಒಂದೇ ದಾಖಲೆಯಾಗಿ ಮಾನ್ಯವಾಗಿರುತ್ತದೆ. ಅಷ್ಟೇ ಅಲ್ಲ, ಯಾವುದೇ ಶಾಲೆ ಅಥವಾ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಮಯದಲ್ಲಿ ಇದು ಜನನ ಪ್ರಮಾಣಪತ್ರವಾಗಿ ಮಾನ್ಯವಾಗಿರುತ್ತದೆ.
ಇದಲ್ಲದೇ ಈಗ ವ್ಯಕ್ತಿ ಸತ್ತ ನಂತರ ಸಿದ್ಧಪಡಿಸಿರುವ ಮರಣ ಪ್ರಮಾಣ ಪತ್ರದಲ್ಲಿ ಇತ್ತೀಚಿನ ಸಾವಿನ ಕಾರಣದ ಜತೆಗೆ ಹಳೆಯ ಕಾಯಿಲೆಗೆ ಸಂಬಂಧಿಸಿದ ಮಾಹಿತಿಯನ್ನೂ ನೀಡಬೇಕಾಗುತ್ತದೆ. ಭಾರತೀಯ ರಿಜಿಸ್ಟ್ರಾರ್ ಜನರಲ್ (RGI) ಮರಣ ಪ್ರಮಾಣಪತ್ರದಲ್ಲಿ ತಕ್ಷಣದ ಕಾರಣದೊಂದಿಗೆ ದೀರ್ಘಕಾಲದ ಕಾಯಿಲೆಗೆ ಸಂಬಂಧಿಸಿದ ಮಾಹಿತಿಯನ್ನು ನೀಡುವುದನ್ನು ಕಡ್ಡಾಯಗೊಳಿಸಿದ್ದಾರೆ. RGI ರಾಷ್ಟ್ರಮಟ್ಟದಲ್ಲಿ ದೇಶಾದ್ಯಂತ ಜನನ ಮತ್ತು ಮರಣಗಳ ಡೇಟಾವನ್ನು ನಿರ್ವಹಿಸುತ್ತದೆ.
ಇದನ್ನೂ ಓದಿ :ಸರ್ಕಾರಿ ನೌಕರರ ಆರು ಭತ್ಯೆಗಳಲ್ಲಿ ಹೆಚ್ಚಳ ! ಹೊರಬಿತ್ತು ನೋಟಿಫಿಕೇಶನ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ .