Gold Silver price : ಮದುವೆಯ ಸೀಸನ್ ನಡೆಯುತ್ತಿದ್ದು, ಜನರು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಬೆಳ್ಳಿಯ ಬೆಲೆಯಲ್ಲೂ ಭಾರೀ  ಏರಿಕೆಯಾಗಿದೆ.  ಬುಲಿಯನ್ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಏರಿಕೆಗೆ US FED ನಿರ್ಧಾರವೇ ಕಾರಣ ಎನ್ನಲಾಗಿದೆ.  


COMMERCIAL BREAK
SCROLL TO CONTINUE READING

MCX ನಲ್ಲಿ ಚಿನ್ನ ಮತ್ತು ಬೆಳ್ಳಿ  ಬೆಲೆ  : 
ಗುರುವಾರ  MCX ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು 2-4% ರಷ್ಟು ಹೆಚ್ಚಾಗಿದೆ. ಚಿನ್ನದ ಬೆಲೆಯ ವಿಚಾರದಲ್ಲಿ ದೇಶೀಯ ಮಾರುಕಟ್ಟೆಗಳು ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ದಾಖಲೆಯ ಏರಿಕೆ ಕಾಣುತ್ತಿದೆ.  COMEX ನಲ್ಲಿ ಚಿನ್ನದ ಬೆಲೆ ಪ್ರತಿ  ಔನ್ಸ್ ಗೆ 2050 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯ ಈ ಏರಿಕೆಗೆ ಯುಎಸ್ ಸೆಂಟ್ರಲ್ ಬ್ಯಾಂಕಿನ ನಿರ್ಧಾರವೇ ಕಾರಣ ಎನ್ನಲಾಗಿದೆ.  


ಇದನ್ನೂ ಓದಿ : ಬ್ಯಾಂಕ್ ನೌಕರರ ವೇತನದಲ್ಲಿಯೂ ಹೆಚ್ಚಳ ! ತಿಂಗಳ ವೇತನದಲ್ಲಿ 15ಸಾವಿರ ರೂ. ಏರಿಕೆ !


ದೇಶೀಯ ಮಾರುಕಟ್ಟೆಯಲ್ಲೂ ದುಬಾರಿಯಾದ ಚಿನ್ನ : 
ದೇಶಿಯ ವಾಯಿದಾ ಬಜಾರ್ ನಲ್ಲಿ ಚಿನ್ನದ ಬೆಲೆಯಲ್ಲಿ ಬಿರುಸಿನ ಏರಿಕೆ ಕಂಡುಬರುತ್ತಿದೆ. ಎಂಸಿಎಕ್ಸ್‌ನಲ್ಲಿ ಚಿನ್ನದ ಬೆಲೆ 1,200 ರೂಪಾಯಿಗಳಷ್ಟು ಹೆಚ್ಚಾಗಿದ್ದು, ದರ 62,400 ರೂಪಾಯಿಗಳಿಗೆ ತಲುಪಿದೆ.


ಬೆಳ್ಳಿಯೂ ದುಬಾರಿ :  
ಬೆಳ್ಳಿಯ ಬೆಲೆ ಕೂಡಾ ಶೇಕಡಾ 4 ರಷ್ಟು  ಏರಿಕೆ ಕಂಡಿದೆ. ಈ ಏರಿಕೆಯೊಂದಿಗೆ ಪ್ರತಿ ಕೆಜಿ ಬೆಳ್ಳಿಗೆ 74,300 ರೂಪಾಯಿ ಆಗಿದೆ. ಇಂದು ಬೆಳ್ಳಿ ಬೆಲೆಯಲ್ಲಿ  2,700 ರೂ.ಗೂ ಅಧಿಕ ಏರಿಕೆ ದಾಖಲಾಗಿದೆ. 


ವಿದೇಶಿ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ : 
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ದರವು ಎರಡೂವರೆ ಪ್ರತಿಶತದಷ್ಟು ಹೆಚ್ಚಾಗಿದ್ದು, ಪ್ರತಿ ಔನ್ಸ್ ಗೆ 2050 ಡಾಲರ್ ತಲುಪಿದೆ. ಬೆಳ್ಳಿಯ ಬೆಲೆಯು ಪ್ರತಿ ಔನ್ಸ್ ಗೆ 24 ಡಾಲರ್ ಅನ್ನು ದಾಟಿದೆ.  
 
ಇದನ್ನೂ ಓದಿ : ಹೀಗೆ ಬುಕ್ ಮಾಡಿದರೆ ಗ್ಯಾಸ್ ಸಿಲಿಂಡರ್ ಬೆಲೆಯ ಮೇಲೆಯೂ ಸಿಗುವುದು ರಿಯಾಯಿತಿ !


ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗಲು ಕಾರಣ : 
ಬುಲಿಯನ್ ಮಾರುಕಟ್ಟೆಯ ಏರಿಕೆಗೆ US FED ನಿರ್ಧಾರವೇ ಕಾರಣ. ಡಿಸೆಂಬರ್‌ನಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಬ್ಯಾಂಕ್ ಸತತ ಮೂರನೇ ಬಾರಿಗೆ ದರಗಳನ್ನು ಸ್ಥಿರವಾಗಿಡಲು ನಿರ್ಧರಿಸಿದೆ. ವಿಶೇಷವೆಂದರೆ 2024ರಲ್ಲಿ ಈ ದರಗಳು ಇಳಿಕೆಯಾಗುವ ಸೂಚನೆಗಳಿವೆ. ಆ ಸಂದರ್ಭದಲ್ಲಿ ಬಡ್ಡಿದರಗಳನ್ನು 3 ಬಾರಿ ಕಡಿಮೆ ಮಾಡಬಹುದು. ಇದರ ಪರಿಣಾಮವಾಗಿ, US ಬಾಂಡ್  ಯೀಲ್ಡ್  ಮತ್ತು ಡಾಲರ್ ಸೂಚ್ಯಂಕವು ನಾಲ್ಕು ತಿಂಗಳ ಕನಿಷ್ಠ ಮಟ್ಟವನ್ನು ತಲುಪಲಿದೆ. 


ಈಗ ಮನೆಯಲ್ಲಿ ಕುಳಿತು ಇತ್ತೀಚಿನ ಚಿನ್ನದ ಬೆಲೆಗಳನ್ನು ಪರಿಶೀಲಿಸಿ : 
ನೀವು ದೇಶದ ಬುಲಿಯನ್ ಮಾರುಕಟ್ಟೆಗಳಲ್ಲಿ ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತಿಳಿಯಲು 8955664433 ಗೆ ಕರೆ ಮಾಡಬೇಕು.  ಸ್ವಲ್ಪ ಸಮಯದ ನಂತರ ನಿಮಗೆ SMS ಮೂಲಕ  ಚಿನ್ನದ ಇಂದಿನ ಬೆಲೆಯ ವಿವರವನ್ನು ಕಳುಹಿಸಲಾಗುವುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.