Gold Silver Rate Today : ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರುತ್ತಲೇ ಇವೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ 63,000 ರೂಪಾಯಿ ಮೀರಿದೆ. ಇದಲ್ಲದೇ ಬೆಳ್ಳಿಯ ಬೆಲೆ ಕೂಡಾ 79,000 ರೂಪಾಯಿ ಸಮೀಪದಲ್ಲಿದೆ. ಚಿನ್ನದ ಬೆಲೆಯಲ್ಲಿನ ಏರಿಕೆಯಿಂದಾಗಿ, ಶೀಘ್ರದಲ್ಲೇ ಚಿನ್ನವು ಹೊಸ ದಾಖಲೆಯ ಮಟ್ಟವನ್ನು ತಲುಪಬಹುದು ಎನ್ನುತ್ತಾರೆ ತಜ್ಞರು. ಬುಲಿಯನ್ ಮಾರುಕಟ್ಟೆ ಸೇರಿದಂತೆ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. 


COMMERCIAL BREAK
SCROLL TO CONTINUE READING

ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 250 ರೂ.ಗಳಷ್ಟು ಏರಿಕೆಯಾಗಿ 63,730 ರೂ. ಆಗಿದೆ. ಇದಲ್ಲದೇ, ಬೆಳ್ಳಿಯ ಬೆಲೆಯು ಪ್ರತಿ ಕೆಜಿಗೆ 350 ರೂ. ಏರಿಕೆಯಾಗಿ 79,450 ರೂ.ಗೆ ತಲುಪಿದೆ. 


ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ
 
ತಜ್ಞರು ಹೇಳುವುದೇನು ? :
ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ-ಸರಕು ಸೌಮಿಲ್ ಗಾಂಧಿ ಹೇಳಿದ್ದಾರೆ. ವಿದೇಶಿ ಮಾರುಕಟ್ಟೆಗಳಲ್ಲಿ ಚುರುಕಾದ ವಹಿವಾಟಿನ ನಂತರ, ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ 250 ರೂ. ಏರಿಕೆ ಕಂಡಿದೆ. 


ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ : 
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 2,062 ನಲ್ಲಿ  ವಹಿವಾಟು ನಡೆಸಿದೆ. ಬೆಳ್ಳಿ ಕೂಡಾ ಔನ್ಸ್‌ಗೆ 24.34 ಡಾಲರ್‌ ನಷ್ಟಾಗಿದೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯ ಕೊಮೆಕ್ಸ್‌ನಲ್ಲಿ ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 2,062 ಡಾಲರ್ ನಲ್ಲಿ ವಹಿವಾಟು ನಡೆಸಿದೆ.


ಇದನ್ನೂ ಓದಿ : Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ಹೇಗಿದೆ ನೋಡಿ
 
MCX ನಲ್ಲಿಯೂ ದುಬಾರಿಯಾದ ಚಿನ್ನ : 
ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್‌ನಲ್ಲಿhttps://zeenews.india.com/kannada/business/atal-pension-yojna-complete-details-179087 ಚಿನ್ನದ ಬೆಲೆ 10 ಗ್ರಾಂಗೆ 63100 ರೂಪಾಯಿಗಳಾಗಿದ್ದು, ಶೇಕಡಾ 0.23 ರಷ್ಟು ಏರಿಕೆಯಾಗಿದೆ. ಇದಲ್ಲದೇ ಬೆಳ್ಳಿ ಕೂಡಾ  ಪ್ರತಿ ಕೆಜಿಗೆ 75388 ರೂ. ಆಗಿದೆ. 


22 ಕ್ಯಾರೆಟ್ ಚಿನ್ನದ ಬೆಲೆ  (10 ಗ್ರಾಂ) :
ಬೆಂಗಳೂರು : 58,400ರೂ. 
ದೆಹಲಿ: 58,550 ರೂ. 
ಹೈದರಾಬಾದ್ : 58,400ರೂ. 
ಕೇರಳ : 58,400ರೂ. 
ತಮಿಳುನಾಡು : 58,950  ರೂ.
ಮುಂಬಯಿ  : 58,400ರೂ. 
ಕೋಲ್ಕತಾ  : 58,400ರೂ. 


ಇದನ್ನೂ ಓದಿ : ಬ್ಯಾಂಕ್‌ ಉದ್ಯೋಗಿಗಳಿಗೆ ಗುಡ್‌ ನ್ಯೂಸ್‌: ಜನವರಿ 2024ರಲ್ಲಿ 16 ದಿನಗಳು ರಜಾ!
 
ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ಇಂಡಿಯನ್ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಪ್ರಕಾರ, ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.