Hyundai Car Discount Offers : ಈ ತಿಂಗಳಲ್ಲಿ, ಹ್ಯುಂಡೈ ತನ್ನ ಗ್ರಾಹಕರಿಗೆ ರಿಯಾಯಿತಿ ಕೊಡುಗೆಗಳನ್ನು ತಂದಿದೆ. ಹ್ಯುಂಡೈ ಎಕ್ಸ್‌ಸೆಂಟ್ ಮತ್ತು ಗ್ರ್ಯಾಂಡ್ ಐ10 ನಂತಹ ಕೆಲವು ಮಾದರಿಗಳ ಮೇಲೆ  ಭಾರೀ ನಗದು ರಿಯಾಯಿತಿಗಳನ್ನು  ನೀಡಲಾಗುತ್ತಿದೆ. ಇನ್ನು ಉಳಿದ ಕೆಲವು ಕಾರುಗಳ ಮೇಲೆ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳನ್ನು ಒದಗಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಹ್ಯುಂಡೈ ಸ್ಯಾಂಟ್ರೊ ಮೇಲೆ 28,000 ರೂ. ವರೆಗೆ  ರಿಯಾಯಿತಿ : 
ಹ್ಯುಂಡೈ ತನ್ನ ಸ್ಯಾಂಟ್ರೊದ ಎರಾ ರೂಪಾಂತರದ ಮೇಲೆ ಒಟ್ಟು  23,000 ರೂಪಾಯಿಯಷ್ಟು ರಿಯಾಯಿತಿ ನೀಡುತ್ತಿದೆ. ಸ್ಯಾಂಟ್ರೊದ ಸಿಎನ್‌ಜಿ ಟ್ರಿಮ್‌ ಮೇಲೆ  13,000 ರೂಪಾಯಿ ಆಫರ್  ನೀಡಲಾಗುತ್ತಿದೆ. ಸ್ಯಾಂಟ್ರೊದ ಇತರ ರೂಪಾಂತರಗಳಲ್ಲಿ 28,000 ರೂ ಮೌಲ್ಯದ ಒಟ್ಟು ಕೊಡುಗೆಗಳನ್ನು ಪಡೆಯಬಹುದು.  


ಇದನ್ನೂ ಓದಿ : Vegetable Price: ಇಂದಿನ ತರಕಾರಿ ಬೆಲೆ


ಹುಂಡೈ ಗ್ರಾಂಡ್ i10 ಖರೀದಿಸಿದರೆ  48,000 ರೂಪಾಯಿ ಆಫರ್ :
ಹ್ಯುಂಡೈ ಗ್ರಾಂಡ್ ಐ10 ಮಾದರಿಯಲ್ಲೂ ಆಫರ್‌ಗಳು ಲಭ್ಯವಿವೆ. ಅದರ ಟರ್ಬೊ ರೂಪಾಂತರದ ಮೇಲೆ ಹೆಚ್ಚಿನ ಆಫರ್ ನೀಡಲಾಗುತ್ತಿದೆ. ಟರ್ಬೊ ರೂಪಾಂತರದ ಮೇಲೆ  35,000 ರೂಪಾಯಿ ನಗದು ರಿಯಾಯಿತಿ ಸೇರಿದಂತೆ 48,000 ರೂ. ಮೌಲ್ಯದ ಒಟ್ಟು  ರಿಯಾಯಿತಿಗಳನ್ನು ನೀಡಲಾಗುತ್ತಿದೆ. CNG ಮಾಡೆಲ್ ಸೇರಿದಂತೆ ಗ್ರಾಂಡ್ i10 ನ ಇತರ ರೂಪಾಂತರಗಳ ಮೇಲೆ 23,000  ರೂ. ಆಫರ್ ನೀಡಲಾಗಿದೆ. 


ಇತರ ಕಾರುಗಳ ಮೇಲಿನ ಕೊಡುಗೆಗಳು :
ಹ್ಯುಂಡೈ ಲೈನ್‌ಅಪ್‌ನಲ್ಲಿರುವ ಇತರ ಕಾರುಗಳ ಮೇಲೂ ಆಫರ್‌ಗಳನ್ನು ನೀಡಲಾಗುತ್ತಿದೆ. Aura ಮೇಲೆ 23,000 ರೂ. ವರೆಗಿನ  ಆಫರ್ ಇದೆ. ಆದರೆ i20 ಮ್ಯಾಗ್ನಾ ಮತ್ತು ಸ್ಪೋರ್ಟ್ಜ್ ಟ್ರಿಮ್‌ಗಳಲ್ಲಿ  20,000 ರೂಪಾಯಿಗಳ ಒಟ್ಟು ಪ್ರಯೋಜನಗಳನ್ನು ನೀಡಲಾಗುತ್ತಿದೆ. ಹ್ಯುಂಡೈ ಎಕ್ಸ್‌ಸೆಂಟ್ ಪ್ರೈಮ್‌ನಲ್ಲಿ 50,000 ರೂಪಾಯಿಗಳ ನಗದು ರಿಯಾಯಿತಿಯನ್ನು ನೀಡಲಾಗುತ್ತಿದೆ. 


ಇದನ್ನೂ ಓದಿ : RBI: ಆರ್‌ಬಿಐನ ಈ ನಿರ್ಧಾರದಿಂದ 8 ಬ್ಯಾಂಕ್‌ಗಳಿಗೆ ದೊಡ್ಡ ಹೊಡೆತ!


ಈ ಕಾರುಗಳ ಮೇಲೆ ಯಾವುದೇ  ಆಫರ್ ಇಲ್ಲ : 
ಆದರೆ ಹುಂಡೈ ವೆನ್ಯೂ, i20 N-Line, Creta, Verna, Elantra ಮತ್ತು Alcazar ಕಾರುಗಳ ಮೇಲೆ ಯಾವುದೇ ರಿಯಾಯಿತಿಗಳನ್ನು ಘೋಷಿಸಿಲ್ಲ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.