Honda CB300F: ವಾಯ್ಸ್ ಕಂಟ್ರೋಲ್ ಹೊಂದಿರುವ ಹೊಚ್ಚ ಹೊಸ ಬೈಕ್ ಅನ್ನು ಮಾರುಕಟ್ಟೆಗಿಳಿಸಿದ ಹೊಂಡಾ

Honda CB300F Launched: ಹೊಂಡಾ ಕಂಪನಿಯ ಹೊಚ್ಚ ಹೊಸ ಬೈಕ್ ಆಗಿರುವ CB300F ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಬೈಕ್ ದೂರದ ಪ್ರವಾಸದಲ್ಲಿ ಅತ್ಯುತ್ತಮ ಅನುಭವ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಬೈಕ್ ಅನ್ನು ಸ್ಪೋರ್ಟಿ ಏರ್ಗಾನಾಮಿಕ್ಸ್ ನೊಂದಿಗೆ ಬಿಡುಗಡೆಮಾಡಲಾಗಿದ್ದು. ಇದು 17 ಇಂಚಿನ ಅಲಾಯ್ ಚಕ್ರಗಳನ್ನು ಹೊಂದಿದೆ.   

Written by - Nitin Tabib | Last Updated : Aug 8, 2022, 09:36 PM IST
  • ಮಾರುಕಟ್ಟೆಗೆ ವಾಯ್ಸ್ ಕಂಟ್ರೋಲ್ ಬೈಕ್ ಇಳಿಸಿದ ಹೊಂಡಾ
  • Honda CB300F ಬೈಕ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ
  • ಬೆಲೆ-ವೈಶಿಷ್ಟ್ಯ ತಿಳಿದುಕೊಳ್ಳಲು ಈ ಸುದ್ದಿಯನ್ನೊಮ್ಮೆ ಓದಿ
Honda CB300F: ವಾಯ್ಸ್ ಕಂಟ್ರೋಲ್ ಹೊಂದಿರುವ ಹೊಚ್ಚ ಹೊಸ ಬೈಕ್ ಅನ್ನು ಮಾರುಕಟ್ಟೆಗಿಳಿಸಿದ ಹೊಂಡಾ title=
New Bike Released In India

Honda CB300F Price and Features: ಹೋಂಡಾ ತನ್ನ ಹೊಚ್ಚ ಹೊಸ ಸ್ಪೋರ್ಟಿ ಮೋಟಾರ್‌ಸೈಕಲ್ ಆಗಿರುವ CB300F ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಗ್ರಾಹಕರು ತಮ್ಮ ಹತ್ತಿರದ ಹೋಂಡಾ ಬಿಗ್‌ವಿಂಗ್ ಶೋರೂಮ್‌ನಲ್ಲಿ ಈ ಬೈಕ್ ಅನ್ನು ಬುಕ್ ಮಾಡಬಹುದು. ಒಟ್ಟು ಎರಡು ರೂಪಾಂತರಗಳಾಗಿರುವ - ಡಿಲಕ್ಸ್ ಮತ್ತು ಡಿಲಕ್ಸ್ ಪ್ರೊ.ನಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಬೈಕ್ ನ ಬೆಲೆ 2,25,900 ರೂ.ನಿಂದ ಆರಂಭವಾಗುತ್ತದೆ. ಈ ಬೆಲೆ ಬೈಕ್‌ನ ಡೀಲಕ್ಸ್ ರೂಪಾಂತರಕ್ಕೆ ನಿಗದಿಪಡಿಸಲಾಗಿದೆ. ಬೈಕ್‌ನ ಡಿಲಕ್ಸ್ ಪ್ರೊ ರೂಪಾಂತರದ ಬೆಲೆ 2,28,900 ರೂ (ಎಕ್ಸ್ ಶೋ ರೂಂ, ನವದೆಹಲಿ) ನಿಗದಿಪದಿಸಲಾಗಿದೆ. ಒಟ್ಟು ಮೂರು ಬಣ್ಣದ ಆಯ್ಕೆಗಳಾಗಿರುವ - ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್ ನಲ್ಲಿ ಇದನ್ನು ಪರಿಚಯಿಸಲಾಗಿದೆ.

ಶಕ್ತಿಯುತ ಮತ್ತು ಆಕ್ರಮಣಕಾರಿ ಪರ್ಫಾರ್ಮೆನ್ಸ್
ಈ ಬೈಕ್ 293 ಸಿಸಿ ಆಯಿಲ್ ಕೂಲ್ಡ್ 4-ವಾಲ್ವ್ SOHC ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು ದೂರದ ಪ್ರವಾಸದಲ್ಲಿ ಉತ್ತಮ ಅನುಭವವನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಂಜಿನ್ ಅನ್ನು 6-ಸ್ಪೀಡ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ. ಇದು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಹೊಂದಿದೆ, ಇದು ನಿಮ್ಮ ರೇಡ್ ಅನ್ನು ಮತ್ತಷ್ಟು ಆರಾಮದಾಯಕವಾಗಿಸುತ್ತದೆ. ಇದಲ್ಲದೆ, ಗೋಲ್ಡನ್ USD ಮುಂಭಾಗದ ಫೋರ್ಕ್‌ಗಳು ಅದ್ಭುತ ಕುಶನಿಂಗ್ ಜೊತೆಗೆ ರೈಡಿಂಗ್ ಅನ್ನು ಮತ್ತಷ್ಟು ಸುಲಭಗೊಳಿಸಲಿವೆ.

ಇದನ್ನೂ ಓದಿ-ಗ್ರಾಹಕರಿಗೆ ಏಕಾಏಕಿ ಬಿಗ್ ಶಾಕ್ ನೀಡಿದ HDFC ಬ್ಯಾಂಕ್..!

ಲುಕ್ಸ್ ಮತ್ತು ವೈಶಿಷ್ಟ್ಯಗಳು
ಬೈಕ್ ಗೆ ಸಂಪೂರ್ಣ LED ಹೆಡ್‌ಲ್ಯಾಂಪ್‌ಗಳು ಮತ್ತು ವಿಂಕರ್‌ಗಳನ್ನು ನೀಡಲಾಗಿದೆ. ಮತ್ತೊಂದೆಡೆ, ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ರೈಡರ್‌ಗೆ ನೈಜ ಸಮಯ/ಸರಾಸರಿ ಮೈಲೇಜ್, ಇಂಧನ ಮಟ್ಟ, ಬ್ಯಾಟರಿ ವೋಲ್ಟೇಜ್ ಮತ್ತು ಗೇರ್ ಪೋಜಿಶನ್ ನಂತಹ ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಟ್ರಾಕ್ಷನ್ ಕಂಟ್ರೋಲ್ ವೈಶಿಷ್ಟ್ಯವು ಕೂಡ ಈ ಬೈಕ್‌ನಲ್ಲಿ ನೀಡಲಾಗಿದೆ. ನೀವು Deluxe Pro ರೂಪಾನ್ತರಿಯಲ್ಲಿ ಹೋಂಡಾದ ಸ್ಮಾರ್ಟ್‌ಫೋನ್ ಧ್ವನಿ ನಿಯಂತ್ರಣ ವ್ಯವಸ್ಥೆಯನ್ನು ಸಹ ಪಡೆಯುವಿರಿ.

ಇದನ್ನೂ ಓದಿ-Mukesh Ambani Salary: ಮುಕೇಶ್ ಅಂಬಾನಿ ಸತತ ಎರಡು ವರ್ಷ ಸ್ಯಾಲರಿ ಪಡೆದಿಲ್ಲ! ಸಂಬಳ ಎಷ್ಟು ಗೊತ್ತಾ?

ಬೈಕ್ ಅನ್ನು ಸ್ಪೋರ್ಟಿ ಏರ್ಗಾನಾಮಿಕ್ಸ್ ನೊಂದಿಗೆ ಬಿಡುಗಡೆ ಮಾಡಲಾಗಿದೆ. ಇದು 17 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ. ಬೈಕು ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಸಿಸ್ಟಂ ನೀಡಲಾಗಿದೆ. ಇದರ ತೂಕ 153 ಕೆಜಿ, ಸೀಟ್ ಎತ್ತರ 789 ಎಂಎಂ, ಗ್ರೌಂಡ್ ಕ್ಲಿಯರೆನ್ಸ್ 177 ಎಂಎಂ ಮತ್ತು ಇಂಧನ ಟ್ಯಾಂಕ್ 14.1-ಲೀಟರ್ ಇದೆ. ಇದು KTM 200 ಡ್ಯೂಕ್, ಸುಜುಕಿ Gixxer 250, Yamaha FZ 25 ಮತ್ತು ಬಜಾಜ್ ಪಲ್ಸರ್ N250 ನಂತಹ ಬೈಕ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನಡೆಸಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News