ನವದೆಹಲಿ : ಖಾಸಗಿ ವಲಯದ ಬ್ಯಾಂಕ್ ಆಗಿರುವ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ (IDFC first bank) ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.  ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ದಿನಗಳಲ್ಲಿ ಡೆಬಿಟ್ ಕಾರ್ಡ್‌ಗಳಲ್ಲಿ ಉತ್ತಮ ಕ್ಯಾಶ್‌ಬ್ಯಾಕ್ ಆಫರ್ ಗಳನ್ನು (Cash bcak offer) ನೀಡುತ್ತಿದೆ. ಈ ಆಫರ್  ನವೆಂಬರ್ 4ರವರೆಗೆ ಮಾನ್ಯವಾಗಿರುತ್ತದೆ. ಐಡಿಎಫ್‌ಸಿ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಆಫರ್ ಅಡಿಯಲ್ಲಿ, ಕೆಲವು ವರ್ಗಗಳನ್ನು ಹೊರತುಪಡಿಸಿ ಎಲ್ಲಾ ಡೆಬಿಟ್ ಕಾರ್ಡ್ ಪಾವತಿಗಳಲ್ಲಿ (Debit card payment) ಒಂದು ಶೇಕಡಾ ಕ್ಯಾಶ್‌ಬ್ಯಾಕ್ ಕೊಡುಗೆ ಲಭ್ಯವಿದೆ.


COMMERCIAL BREAK
SCROLL TO CONTINUE READING

IDFC ಬ್ಯಾಂಕ್ ನೀಡುತ್ತಿರುವ ಈ ಆಫರ್, ಅಡಿಯಲ್ಲಿ ಸೆಪ್ಟೆಂಬರ್ 17 ರಿಂದ ನವೆಂಬರ್ 4, 2021 ರವರೆಗೆ ಬ್ಯಾಂಕಿನ ಡೆಬಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ (Debit card payment), ಒಂದು ಶೇಕಡಾ ಕ್ಯಾಶ್‌ಬ್ಯಾಕ್ ಪಡೆಯಬಹುದು. ಗರಿಷ್ಠ ಕ್ಯಾಶ್‌ಬ್ಯಾಕ್ (Cashback) ಮಿತಿ 10,000 ರೂ.ಗಳಾಗಿರುತ್ತವೆ. ಕ್ಯಾಶ್‌ಬ್ಯಾಕ್ ಪಡೆಯುವ ನಿಯಮಗಳು ಮತ್ತು ಷರತ್ತುಗಳು ಇಲ್ಲಿವೆ ..


ಇದನ್ನೂ ಓದಿ : ಅಕ್ಟೋಬರ್ 1 ರಿಂದ ಬದಲಾಗಲಿವೆ ಪಿಂಚಣಿ ನಿಯಮಗಳು..! ಪ್ರತಿಯೊಬ್ಬರಿಗೂ ಅನ್ವಯವಾಗುವ ನಿಯಮದ ಸಂಪೂರ್ಣ ವಿವರ ಇಲ್ಲಿದೆ
 
-ಡೆಬಿಟ್ ಕಾರ್ಡ್ (Debit card) ಮೂಲಕ ಮಾಡುವ ಆನ್‌ಲೈನ್ ಅಥವಾ ಆಫ್‌ಲೈನ್ (POS) ವಹಿವಾಟುಗಳು ಆಫರ್ ಅವಧಿಯಲ್ಲಿ ಮಾನ್ಯವಾಗಿರುತ್ತವೆ.
-ಡೆಬಿಟ್ ಕಾರ್ಡ್, ಇ-ವ್ಯಾಲೆಟ್‌ನಲ್ಲಿ ಮನಿ ಲೋಡ್, ಇಎಂಐ (EMI) ಮತ್ತು ಫಂಡ್ ಟ್ರಾನ್ಸ್‌ಫರ್ ಮೂಲಕ ಎಟಿಎಂನಿಂದ (ATM) ಹಣ ಪಡೆಯುವುದು ಇವುಗಳ ಮೇಲೆ ಆಫರ್‌ಗಳು ಮಾನ್ಯವಾಗಿರುವುದಿಲ್ಲ.
-48 ಗಂಟೆಗಳಲ್ಲಿ ಗ್ರಾಹಕರ ಖಾತೆಗೆ ಕ್ಯಾಶ್‌ಬ್ಯಾಕ್ ಕ್ರೆಡಿಟ್ ಆಗುತ್ತದೆ.
-IDFC ಫಸ್ಟ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಪ್ರತಿ ತಿಂಗಳು ಬಡ್ಡಿಯನ್ನು ಪಾವತಿಸುತ್ತದೆ.


ಗಮನಿಸಬೇಕಾದ ಸಂಗತಿಯೆಂದರೆ, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ತನ್ನ ಉಳಿತಾಯ ಬ್ಯಾಂಕ್ ಖಾತೆದಾರರಿಗೆ ಮಾಸಿಕ ಬಡ್ಡಿಯನ್ನು ಪಾವತಿಸುವ ಸೌಲಭ್ಯವನ್ನು ಆರಂಭಿಸಿದೆ. ಬ್ಯಾಂಕಿನ ಹೊಸ ನಿಯಮ ಜುಲೈ 1 ರಿಂದ ಜಾರಿಗೆ ಬಂದಿದೆ. ಆರ್‌ಬಿಐ ನಿಯಮಗಳ (RBI Rules) ಪ್ರಕಾರ ಬ್ಯಾಂಕುಗಳು ಮಾಸಿಕ ಆಧಾರದ ಮೇಲೆ ಬಡ್ಡಿಯನ್ನು ಕ್ರೆಡಿಟ್ ಮಾಡಲು ಮುಕ್ತವಾಗಿರುತ್ತವೆ. ಇದಕ್ಕೆ ಕೇಂದ್ರೀಯ ಬ್ಯಾಂಕಿನ ಕಡೆಯಿಂದ ಯಾವುದೇ ಅಭ್ಯಂತರವಿರುವುದಿಲ್ಲ.


ಇದನ್ನೂ ಓದಿ : Gold Silver Price Today: 6 ತಿಂಗಳಲ್ಲಿಯೇ ಕನಿಷ್ಠ ಮಟ್ಟಕ್ಕೆ ಕುಸಿದ ಚಿನ್ನದ ಬೆಲೆ; ಬೆಳ್ಳಿ ದರದಲ್ಲಿಯೂ ಇಳಿಕೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.