ಈಗ EMI ನಲ್ಲಿ ಸಿಗುತ್ತಿದೆ ಸಗಣಿ ಭರಣಿ, ಈ ವೆಬ್ ಸೈಟ್ ಮೂಲಕ ಖರೀದಿಸಬಹುದು

ಮನೆಯಲ್ಲಿ ಪೂಜೆ, ಹೋಮ ಹವನ ಮಾಡುವುದಾದರೆ ಸಗಣಿ ಭರಣಿಯ ಅಗತ್ಯವಿರುತ್ತದೆ. ಈಗಿನ ಕಾಲದಲ್ಲಿ  ಸಗಣಿ ಭರಣಿ ಎಲ್ಲಿಂದ ತರುವುದು ಎಂದು ಯೋಚಿಸಬೇಕಿಲ್ಲ.

Written by - Ranjitha R K | Last Updated : Aug 13, 2021, 06:42 PM IST
  • ಇಎಂಐನಲ್ಲಿ ಖರೀದಿಸಬಹುದು ಸಗಣಿ ಭರಣಿ
  • 199 ರೂ.ಗೆ ಮಾರಾಟವಾಗುತ್ತಿದೆ ಮಾವಿನ ಎಲೆ
  • ಸಗಣಿ ಭರಣಿಯನ್ನು ಪೂಜೆಯಲ್ಲಿ ಬಳಸಲಾಗುತ್ತದೆ
ಈಗ EMI ನಲ್ಲಿ ಸಿಗುತ್ತಿದೆ ಸಗಣಿ ಭರಣಿ,  ಈ ವೆಬ್ ಸೈಟ್ ಮೂಲಕ ಖರೀದಿಸಬಹುದು  title=
ಇಎಂಐನಲ್ಲಿ ಖರೀದಿಸಬಹುದು ಸಗಣಿ ಭರಣಿ (file photo)

ನವದೆಹಲಿ : ಇತ್ತೀಚಿನ ದಿನಗಳಲ್ಲಿ ನೀವು ಇಎಂಐನಲ್ಲಿ (EMI) ಬಹಳಷ್ಟು ವಸ್ತುಗಳನ್ನು ಖರೀದಿಸಬಹುದು. ಆನ್‌ಲೈನ್ ವ್ಯಾಪಾರ (Online business) ಮಾಡುವ ಇ-ಕಾಮರ್ಸ್ ವೆಬ್‌ಸೈಟ್‌ಗಳು ಈಗ ಜನರಿಗೆ ಈ ಆಯ್ಕೆಯನ್ನು ನೀಡುತ್ತಿವೆ.

ಇಎಂಐನಲ್ಲಿ ಖರೀದಿಸಬಹುದು ಸಗಣಿ ಭರಣಿ : 
ಮನೆಯಲ್ಲಿ ಪೂಜೆ, ಹೋಮ ಹವನ ಮಾಡುವುದಾದರೆ ಸಗಣಿ ಭರಣಿಯ (Cow dung) ಅಗತ್ಯವಿರುತ್ತದೆ. ಈಗಿನ ಕಾಲದಲ್ಲಿ  ಸಗಣಿ ಭರಣಿ ಎಲ್ಲಿಂದ ತರುವುದು ಎಂದು ಯೋಚಿಸಬೇಕಿಲ್ಲ. ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಈಗ ಸಗಣಿ ಭರಣಿಗಳನ್ನು ಆರ್ಡರ್ ಮಾಡಬಹುದಾಗಿದೆ. ಇಲ್ಲಿ ಸಗಣಿ ಭರಣಿ, ಮಾವಿನ ಎಲೆಗಳು (Mango leave), ಬೇವಿನ ಎಲೆಗಳನ್ನು ಕೂಡಾ ಆರ್ಡರ್ ಮಾಡಬಹುದು. ಈ ವಸ್ತುಗಳನ್ನು ಖರೀದಿಸಲು ನಿಮ್ಮಲ್ಲಿ ಹೆಚ್ಚಿನ ಹಣವಿಲ್ಲದಿದ್ದರೆ, ಇವುಗಳನ್ನು ಇಎಂಐ (Emi) ಮೂಲಕವೂ ಖರೀದಿಸಬಹುದು. ಅಮೆಜಾನ್ (Amazon) ವೆಬ್‌ಸೈಟ್ ಇವುಗಳನ್ನು ಖರೀದಿಸಬಹುದಾಗಿದೆ. 

ಇದನ್ನೂ ಓದಿ : ಸೂರ್ಯನ ರಾಶಿ ಪರಿವರ್ತನೆಯಿಂದ ಪ್ರಕಾಶಿಸಲಿದೆ ಈ ರಾಶಿಯವರ ಭಾಗ್ಯ

199 ರೂ.ಗೆ ಮಾರಾಟವಾಗುತ್ತಿದೆ ಮಾವಿನ ಎಲೆ : 
ಇಂಡಿಯಾ ಡಾಟ್ ಕಾಮ್ ವರದಿಯ ಪ್ರಕಾರ, ಮಾವಿನ ಎಲೆಗಳನ್ನು ಅಮೆಜಾನ್ ವೆಬ್‌ಸೈಟ್‌ನಲ್ಲಿ ರೂ 199ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಇದರ ಮೇಲೆ ರಿಯಾಯಿತಿ ಕೂಡಾ ನೀಡಲಾಗುತ್ತದೆ. ರಿಯಾಯಿತಿಯ ನಂತರ ಮಾವಿನ ಎಲೆಗಳನ್ನು ಇದರಲ್ಲಿ 79 ರೂ.ಗೆ ಕೊಂಡುಕೊಳ್ಳಬಹುದು. ಇನ್ನು, ಸಗಣಿ ಭರಣಿ 500 ತುಂಡುಗಳಿಗೆ 2100 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಅದೇ ರೀತಿ, ಪೂಜೆಗೆ ಬಳಸುವ ಬಿಲ್ವ ಪತ್ರಕ್ಕೆ  444 ರೂ, ತುಳಸಿ ಗಿಡಕ್ಕೆ (Tulsi plant) 299 ರೂ ಚಾರ್ಜ್ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ, ಗೋಮೂತ್ರವನ್ನು 249 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಸಗಣಿ ಭರಣಿಯನ್ನು  ಪೂಜೆಯಲ್ಲಿ ಬಳಸಲಾಗುತ್ತದೆ : 
ಹಬ್ಬಗಳ ಸಂದರ್ಭಗಳಲ್ಲಿ  ಸಗಣಿ ಭರಣಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಾವಿನ ಎಲೆಗಳನ್ನು ಕೂಡಾ ಹೋಮ ಹವನಗಳಲ್ಲಿ  ಬಳಸಲಾಗುತ್ತದೆ. ಆದರೆ,  ಶಿವನ ಪೂಜೆಯ (Shva pooja) ಸಂದರ್ಭಗಳಲ್ಲಿ ಬಿಲ್ವ ಪತ್ರೆ ಬಳಸುವುದು ಕಡ್ಡಾಯ. ಈ ವಸ್ತುಗಳು ಈಗ ಆನ್‌ಲೈನ್‌ನಲ್ಲಿ ಲಭ್ಯವಿರಲಿದೆ. ಇದನ್ನು ಇಎಂಐ ಮೂಲಕ ಆರ್ಡರ್ ಮಾಡಬಹುದು. ಇನ್ನು ಕಾರ್ಡ್ ಮೂಲಕ ಪಾವತಿಸಿದರೆ ಅವುಗಳ ಮೇಲೆ  ರಿಯಾಯಿತಿ ಸಿಗಲಿದೆ. 

ಇದನ್ನೂ ಓದಿ : Best Sleeping Direction: ಸುಖ ನಿದ್ದೆ ಮಾಡಬೇಕಾದರೆ ಯಾವಾಗಲೂ ಈ ವಿಷಯಗಳ ಬಗ್ಗೆ ಇರಲಿ ಗಮನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News