SBI Cash Deposit Machine Alert: ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಅನುಭವವನ್ನು ಸುಧಾರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಿಂದ ಎಟಿಎಂ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ. ಇದರಿಂದ ಗ್ರಾಹಕರು ತಮ್ಮ ಎಲ್ಲಾ ಕೆಲಸಗಳಿಗೂ ಬ್ಯಾಂಕ್‌ಗೆ ಭೇಟಿ ನೀಡಲೇಬೇಕು ಎಂಬ ಅನಿವಾರ್ಯತೆ ಕಡಿಮೆಯಾಗುತ್ತಿದೆ. ಆನ್‌ಲೈನ್ ಬ್ಯಾಂಕಿಂಗ್ ಮತ್ತು ಎಟಿಎಂ ಸೌಲಭ್ಯಗಳು ಗ್ರಾಹಕರ ಹಲವು ಕೆಲಸವನ್ನು ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತವೆ. ಬ್ಯಾಂಕಿನಿಂದ ಎಟಿಎಂನಲ್ಲಿ ನಗದು ಠೇವಣಿ ಯಂತ್ರವನ್ನು ಸ್ಥಾಪಿಸುವುದು ಸಹ ಅಂತಹ ಒಂದು ಪ್ರಮುಖ ಹೆಜ್ಜೆಯಾಗಿದೆ.


COMMERCIAL BREAK
SCROLL TO CONTINUE READING

ನಗದು ಠೇವಣಿ ಯಂತ್ರದ (Cash Deposit Machine) ಮೂಲಕ, ನೀವು ಬ್ಯಾಂಕಿಗೆ ಭೇಟಿ ನೀಡದೆ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಬಹುದು. ಇದಕ್ಕಾಗಿ, ನಗದು ಠೇವಣಿ ಯಂತ್ರದಲ್ಲಿ ನೀವು ಯಾವ ಖಾತೆಗೆ ಹಣ ಜಮಾ ಮಾಡಲು ಬಯಸುತ್ತೀರೋ ಅದರ ಬಗ್ಗೆ ಕೆಲವು ನಿರ್ದಿಷ್ಟ ಮಾಹಿತಿಯನ್ನು ನೀಡುವ ಮೂಲಕ ನೀವು ಯಂತ್ರದಲ್ಲಿ ನಗದು ಜಮಾ ಮಾಡಬಹುದು.


SBI Loan Offers: ಎಸ್‌ಬಿಐ ಕಾರ್, ಗೋಲ್ಡ್ ಲೋನ್‌ನಲ್ಲಿ ಸಿಗುತ್ತಿದೆ ಬಂಪರ್ ಕೊಡುಗೆ


ಈ ತಂತ್ರಜ್ಞಾನದಿಂದ ಗ್ರಾಹಕರಿಗೆ ಬಹಳಷ್ಟು ಅನುಕೂಲವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಸರಳ ತಂತ್ರಜ್ಞಾನವು ಕೆಲವೊಮ್ಮೆ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡದೆ ವಂಚಿಸುತ್ತದೆ. ಅಂದರೆ ಹಲವು ಸಂದರ್ಭಗಳಲ್ಲಿ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಅಥವಾ ಯಂತ್ರವೇ ಹಣವನ್ನು ತೆಗೆದುಕೊಳ್ಳಲು ನಿರಾಕರಿಸುತ್ತದೆ. ಈ ಸಂದರ್ಭದಲ್ಲಿ, ನೀವು ಹೆಚ್ಚು ಚಿಂತಿಸಬೇಕಾಗಿಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಟ್ವೀಟ್ ನಲ್ಲಿ ನಗದು ಠೇವಣಿ ಯಂತ್ರಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಯನ್ನು ನೀವು ಹೇಗೆ ಪರಿಹರಿಸಬಹುದು ಎಂದು ಮಾಹಿತಿ ನೀಡಿದೆ.


ವಾಸ್ತವವಾಗಿ, ಇತ್ತೀಚೆಗೆ ಎಸ್‌ಬಿಐ ಗ್ರಾಹಕರು ಇಂತಹ ಸಮಸ್ಯೆಯನ್ನು ಎದುರಿಸಬೇಕಾಯಿತು. ಅದಕ್ಕಾಗಿ ಅವರು ಟ್ವಿಟರ್‌ನಲ್ಲಿ ಬ್ಯಾಂಕಿಗೆ ದೂರು ನೀಡಿದರು. ತನ್ನ ಗ್ರಾಹಕರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಬ್ಯಾಂಕ್ ಸಮಸ್ಯೆಗೆ ಪರಿಹಾರವನ್ನು ತಿಳಿಸಿದೆ. 


ಇದನ್ನೂ ಓದಿ- SBI ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಎಷ್ಟಿರಬೇಕು?


ಹೇಗೆ ದೂರು ನೀಡುವುದು?
ನಗದು ಠೇವಣಿ ಯಂತ್ರಕ್ಕೆ ಸಂಬಂಧಿಸಿದ ಈ ದೂರುಗಳಿಗಾಗಿ ಗ್ರಾಹಕರು ನೇರವಾಗಿ ತಮ್ಮ ದೂರನ್ನು https://crcf.sbi.co.in/ccf/ ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಎಸ್‌ಬಿಐ ಹೇಳಿದೆ. ಇದಕ್ಕಾಗಿ ಅವರು ಈ ಲಿಂಕ್‌ಗೆ ಭೇಟಿ ನೀಡಿದ ನಂತರ ಸಾಮಾನ್ಯ ಬ್ಯಾಂಕಿಂಗ್/ ಬ್ರಾಂಚ್ ಸಂಬಂಧಿತ ವರ್ಗದ ಅಡಿಯಲ್ಲಿ EXISTING CUSTOMER // MSME/ Agri/ ಇತರೆ ಕುಂದುಕೊರತೆಗಳಿಗೆ ಹೋಗಬೇಕು. ಇಲ್ಲಿ ನೀವು ವಹಿವಾಟು ವಿವರಗಳು, ಮೊತ್ತ, ನೀವು ಯಾರ ಖಾತೆಯಲ್ಲಿ ಹಣ ಹಾಕುತ್ತಿದ್ದೀರಿ, ಅದರ ವಿವರಗಳು ಮತ್ತು ನಗದು ಠೇವಣಿ ಯಂತ್ರದ ಸ್ಥಳ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ.


ಇದನ್ನು ಹೊರತುಪಡಿಸಿ, ನೀವು ಬಯಸಿದರೆ, ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ನೀವು SBI ಸಹಾಯವಾಣಿ ಸಂಖ್ಯೆ 1800 11 2211 (ಟೋಲ್ ಫ್ರೀ), 1800 425 3800 (ಟೋಲ್ ಫ್ರೀ) ಅಥವಾ 080-26599990 ಗೆ ಕರೆ ಮಾಡಿ ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ