SBI ನಿಂದ ಮಹಿಳೆಯರಿಗೆ ಸಿಹಿ ಸುದ್ದಿ : ಶೂನ್ಯ ಬಡ್ಡಿ ದರದಲ್ಲಿ ಗೃಹ ಸಾಲ ಯೋಜನೆ!

ಎಸ್‌ಬಿಐ ಈ ಹೊಸ 'ಮಾನ್ಸೂನ್ ಧಮಾಕ್ ಆಫರ್' ಅನ್ನು ಘೋಷಿಸಿದೆ, ಆಫರ್ ನಲ್ಲಿ ಗೃಹ ಸಾಲಗಳ ಮೇಲೆ ಶೇ.100 ಶೂನ್ಯ ಬಡ್ಡಿ ಮನ್ನಾ ಮಾಡಲಾಗುತ್ತದೆ. ಪ್ರಸ್ತುತ ಸಂಸ್ಕರಣಾ ಶುಲ್ಕ ಶೇ. 0.40 ರಷ್ಟಿದೆ.

Written by - Channabasava A Kashinakunti | Last Updated : Aug 3, 2021, 04:44 PM IST
  • ಎಸ್‌ಬಿಐ ಸಾಲದ ಮೇಲೆ ಮನೆ ಖರೀದಿಸಲು ಬಯಸುವವರಿಗೆ ಸೂಪರ್ ಆಫರ ನೀಡಿದೆ
  • ಎಸ್‌ಬಿಐ ಈ ಹೊಸ 'ಮಾನ್ಸೂನ್ ಧಮಾಕ್ ಆಫರ್' ಅನ್ನು ಘೋಷಿಸಿದೆ
  • ಎಸ್‌ಬಿಐನಲ್ಲಿ ಗೃಹ ಸಾಲಗಳಿಗೆ ಪ್ರಸ್ತುತ ಬಡ್ಡಿದರ ಶೇ. 6.70 ರಷ್ಟಿದೆ
SBI ನಿಂದ ಮಹಿಳೆಯರಿಗೆ ಸಿಹಿ ಸುದ್ದಿ : ಶೂನ್ಯ ಬಡ್ಡಿ ದರದಲ್ಲಿ ಗೃಹ ಸಾಲ ಯೋಜನೆ! title=

ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಾಲದ ಮೇಲೆ ಮನೆ ಖರೀದಿಸಲು ಬಯಸುವವರಿಗೆ ಸೂಪರ್ ಆಫರ ನೀಡಿದೆ. ಎಸ್‌ಬಿಐ ಈ ಹೊಸ 'ಮಾನ್ಸೂನ್ ಧಮಾಕ್ ಆಫರ್' ಅನ್ನು ಘೋಷಿಸಿದೆ, ಆಫರ್ ನಲ್ಲಿ ಗೃಹ ಸಾಲಗಳ ಮೇಲೆ ಶೇ.100 ಶೂನ್ಯ ಬಡ್ಡಿ ಮನ್ನಾ ಮಾಡಲಾಗುತ್ತದೆ. ಪ್ರಸ್ತುತ ಸಂಸ್ಕರಣಾ ಶುಲ್ಕ ಶೇ. 0.40 ರಷ್ಟಿದೆ.

ಎಸ್‌ಬಿಐ ಯೋನೊ ಆಪ್(SBI YONO App) ಮೂಲಕ ಈ ಆಫರ್‌ಗೆ ಅರ್ಜಿ ಸಲ್ಲಿಸಲು ಎದುರು ನೋಡುತ್ತಿರುವವರು 5 ಬಿಪಿಎಸ್ ರಿಯಾಯಿತಿ ಪಡೆಯಲು ಅರ್ಹರಾಗಿರುತ್ತಾರೆ, ಮಹಿಳಾ ಸಾಲಗಾರರು ಕೂಡ ಇದಕ್ಕೆ ಅರ್ಹರಾಗಿರುತ್ತಾರೆ. ಎಸ್‌ಬಿಐನಲ್ಲಿ ಗೃಹ ಸಾಲಗಳಿಗೆ ಪ್ರಸ್ತುತ ಬಡ್ಡಿದರ ಶೇ. 6.70 ರಷ್ಟಿದೆ. ಮಾನ್ಸೂನ್ ಧಮಾಕಾ ಆಫರ್ ಆಗಸ್ಟ್ 31 ರವರೆಗೆ ಮಾತ್ರ ಗ್ರಾಹಕರಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ : Post Office Scheme: 25 ಸಾವಿರ ರೂ. ಹೂಡಿಕೆ ಮಾಡಿ, 21 ಲಕ್ಷದವರೆಗೆ ಗಳಿಸಿ, ಹೇಗೆಂದು ತಿಳಿಯಿರಿ...

ಎಸ್‌ಬಿಐ(State Bank of India) ದೇಶದ ಅತ್ಯಂತ ವಿಶ್ವಾಸಾರ್ಹ ಬ್ಯಾಂಕುಗಳಲ್ಲಿ ಒಂದಾಗಿರುವುದರಿಂದ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಗತ್ಯಗಳಿಗಾಗಿ ಸಾಲ ಹುಡುಕಾಡುವುದು ಸಹಜ. ಎಸ್‌ಬಿಐ ತನ್ನ ಗೃಹ ಸಾಲ ಪೋರ್ಟ್ಫೋಲಿಯೊದಲ್ಲಿ ಈ ವರ್ಷ 5 ಲಕ್ಷ ಕೋಟಿ ರೂ.ಗಳ ದಾಟಿದೆ. ಈ ಬ್ಯಾಂಕ್ ಮಾರ್ಚ್ ನಲ್ಲಿ 37 ಲಕ್ಷ ಕೋಟಿಗಳಷ್ಟು ಮೂಲ ಠೇವಣಿ ಹೊಂದಿದ್ದು, ಕರೆಂಟ್ ಅಕೌಂಟ್ ಸೇವಿಂಗ್ ಅಕೌಂಟ್ (CASA) ಅನುಪಾತವು ಶೇ. 46 ಕ್ಕಿಂತ ಹೆಚ್ಚಿದೆ ಮತ್ತು ಈ ವರ್ಷ ಮಾರ್ಚ್ 31 ರ ವೇಳೆಗೆ 25 ಲಕ್ಷ ಕೋಟಿ ರೂ. ಮೌಲ್ಯದ ಮುಂಗಡವನ್ನು ಹೊಂದಿದೆ.

ಇದನ್ನೂ ಓದಿ : India Post : ಈ ಯೋಜನೆಯಲ್ಲಿ ಹೂಡಿಕೆ ಮಾಡಿ : ತಿಂಗಳಿಗೆ ಪಡೆಯಿರಿ 3300 ರೂ.ವರೆಗೆ ಪಿಂಚಣಿ!

ಎಸ್‌ಬಿಐನ ಸಂಯೋಜಿತ ಡಿಜಿಟಲ್ ಅಪ್ಲಿಕೇಶನ್ - ಎಸ್‌ಬಿಐ ಯೋನೊ(SBI YONO)ವನ್ನು 37 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಬಳಕೆದಾರರು ಬಳಸುತ್ತಿದ್ದಾರೆ ಮತ್ತು ದಿನಕ್ಕೆ ಸರಿಸುಮಾರು ಒಂಬತ್ತು ಮಿಲಿಯನ್ ಲಾಗಿನ್‌ಗಳನ್ನು ನೋಡುತ್ತಾರೆ. ಮಾರ್ಚ್ 31, 2021 ಕ್ಕಿಂತ ಮೊದಲು, ಎರಡು ಮಿಲಿಯನ್ ಖಾತೆಗಳನ್ನು ಆಪ್‌ನಲ್ಲಿ ರಚಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News