ಮಾರ್ಚ್ ಅಂತ್ಯದವರೆಗೆ ಈ ಕೆಲಸ ಮಾಡದಿದ್ದರೆ ನಿಷ್ಕ್ರಿಯಗೊಳ್ಳಲಿದೆ ನಿಮ್ಮ ಪ್ಯಾನ್ ಕಾರ್ಡ್
PAN-Aadhaar Linking: ಪ್ರಸ್ತುತ ಭಾರತದಲ್ಲಿ ಎಲ್ಲಾ ರೀತಿಯ ಹಣಕಾಸಿನ ವಹಿವಾಟಿಗೂ ಪ್ಯಾನ್ ಮತ್ತು ಆಧಾರ್ ಕಾರ್ಡ್ ಎರಡೂ ಕೂಡ ಬಹಳ ಮುಖ್ಯವಾದ ದಾಖಲೆಯಾಗಿದೆ. ಇದೀಗ ಇವೆರಡೂ ಪ್ರಮುಖ ದಾಖಲೆಗಳನ್ನು ಲಿಂಕ್ ಮಾಡುವುದು ಕೂಡ ಅಗತ್ಯವಾಗಿದೆ. ಈ ಮಾರ್ಚ್ ಅಂತ್ಯದೊಳಗೆ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು ನೀವು ವಿಫಲರಾದಲ್ಲಿ ಹಲವು ಸೌಲಭ್ಯಗಳಿಂದ ನೀವು ವಂಚಿತರಾಗಬಹುದು.
PAN-Aadhaar Linking: ಭಾರತದಲ್ಲಿ ಪ್ರಸ್ತುತ ಪ್ಯಾನ್-ಆಧಾರ್ ಎರಡೂ ಕೂಡ ಬಹಳ ಮುಖ್ಯವಾದ ದಾಖಲೆಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ರೀತಿಯ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್-ಆಧಾರ್ ಅತ್ಯಗತ್ಯವಾಗಿದೆ. ಮಾತ್ರವಲ್ಲ, ಇವೆರಡನ್ನೂ ಲಿಂಕ್ ಮಾಡುವುದು ಕೂಡ ಬಹಳ ಮುಖ್ಯವಾಗಿದೆ. ಇದೀಗ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡಲು ಮಾರ್ಚ್ 31, 2023ವರೆಗೆ ಅಂತಿಮ ಗಡುವನ್ನು ನೀಡಲಾಗಿದೆ. ಈ ನಿಗದಿತ ದಿನಾಂಕದೊಳಗೆ ಪ್ಯಾನ್-ಆಧಾರ್ ಕಾರ್ಡ್ ಎರಡನ್ನೂ ಲಿಂಕ್ ಮಾಡಲು ವಿಫಲರಾದಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವುದರ ಜೊತೆಗೆ ನೀವು ಹಲವು ಸೌಕರ್ಯಗಳಿಂದಲೂ ವಂಚಿತರಾಗಬಹುದು.
ಈ ಕುರಿತಂತೆ ಜನವರಿ 9, 2023 ರಂದು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಆದಾಯ ತೆರಿಗೆ ಇಲಾಖೆ, ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ವಿನಾಯಿತಿ ಪಡೆದ ವರ್ಗದಲ್ಲಿರುವ ಎಲ್ಲಾ ಪ್ಯಾನ್ ಹೊಂದಿರುವವರು ತಮ್ಮ ಪ್ಯಾನ್ ಅನ್ನು 31.03.2023 ರ ಮೊದಲು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. 01 ಎಪ್ರಿಲ್ 2023ರಿಂದ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಲಾಗದ ಪ್ಯಾನ್ ಕಾರ್ಡ್ ಗಳು ನಿಷ್ಕ್ರಿಯಗೊಳ್ಳಲಿವೆ. ತಡವಾಗುವ ಮುನ್ನವೇ ಇಂದೇ ಈ ಎರಡು ದಾಖಲೆಗಳನ್ನು ಲಿಂಕ್ ಮಾಡಿ ಎಂದು ತಿಳಿಸಿದೆ.
Car Sales: ಡಿಸೆಂಬರ್‌ನಲ್ಲಿ ಅತಿಹೆಚ್ಚು ಮಾರಾಟವಾದ ಕಾರು ಇದೇ ನೋಡಿ
ಪ್ಯಾನ್-ಆಧಾರ್ ಲಿಂಕ್ ಮಾಡಲು ಈ ಸುಲಭ ವಿಧಾನವನ್ನು ಅನುಸರಿಸಿ:
ನೀವು ಇನ್ನೂ ಕೂಡ ನಿಮ್ಮ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಸುಲಭವಾಗಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಬಹುದು.
* ಇದಕ್ಕಾಗಿ ಮೊದಲು, https://www.incometax.gov.in/iec/foportal/ ಗೆ ಹೋಗಿ ಮತ್ತು 'ಕ್ವಿಕ್ ಲಿಂಕ್ಸ್' ವಿಭಾಗದ ಅಡಿಯಲ್ಲಿ 'ಲಿಂಕ್ ಆಧಾರ್' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
* ನಿಗದಿತ ಸ್ಥಳದಲ್ಲಿ ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ನಂತರ 'ವ್ಯಾಲಿಡೇಟ್' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ಒಂದೊಮ್ಮೆ ಈಗಾಗಲೇ ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ನೊಂದಿಗೆ ಲಿಂಕ್ ಆಗಿದ್ದರೆ 'ನಿಮ್ಮ ಪ್ಯಾನ್ ಈಗಾಗಲೇ ಆಧಾರ್‌ನೊಂದಿಗೆ ಲಿಂಕ್ ಆಗಿದೆ' ಎಂಬ ಸಂದೇಶ ಪರದೆಯ ಮೇಲೆ ಕಾಣಿಸುತ್ತದೆ.
* ಇನ್ನೂ ಕೂಡ ನಿಮ್ಮ ಪ್ಯಾನ್ ಕಾರ್ಡ್ ಆಧಾರ್‌ಗೆ ಲಿಂಕ್ ಆಗದಿದ್ದಲ್ಲಿ ನೀವು NSDL ಪೋರ್ಟಲ್‌ನಲ್ಲಿ ಚಲನ್ ಅನ್ನು ಪಾವತಿಸಿದ್ದರೆ, ಪಾವತಿ ಮಾಹಿತಿಯನ್ನು ಎಲೆಕ್ಟ್ರಾನಿಕ್ ಫೈಲಿಂಗ್ ಮೂಲಕ ಮೌಲ್ಯೀಕರಿಸಲಾಗುತ್ತದೆ.
* ಪ್ಯಾನ್ ಮತ್ತು ಆಧಾರ್ ಅನ್ನು ಪರಿಶೀಲಿಸಿದ ನಂತರ, ನಿಮ್ಮ ಪಾವತಿ ವಿವರಗಳನ್ನು ಪರಿಶೀಲಿಸಲಾಗಿದೆ ಎಂದು ಹೇಳುವ ಪಾಪ್-ಅಪ್ ಅಧಿಸೂಚನೆಯನ್ನು ನೀವು ಪಡೆಯುತ್ತೀರಿ.
* ನಂತರ ಅಗತ್ಯವಿರುವ ವಿವರಗಳನ್ನು ಟೈಪ್ ಮಾಡಿದ ನಂತರ ಲಿಂಕ್ ಆಧಾರ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
* ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಸ್ವೀಕರಿಸಲಾದ ಆರು ಅಂಕಿಯ ಒಟಿಪಿಯನ್ನು ನಮೂದಿಸಿ.
* ಬಳಿಕ ಪ್ಯಾನ್-ಆಧಾರ್ ಲಿಂಕ್‌ಗಾಗಿ ನಿಮ್ಮ ವಿನಂತಿಯನ್ನು ಸಲ್ಲಿಸಿ.
ಇದನ್ನೂ ಓದಿ- ಓಲಾಗೆ ಟಕ್ಕರ್ ನೀಡಲು ಬಂದಿದೆ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್!
ಪ್ಯಾನ್ ನಿಷ್ಟ್ರಿಯಗೊಂಡರೆ ಆಗುವ ಅನಾನುಕೂಲಗಳೇನು?
ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮಾರ್ಚ್ ಅಂತ್ಯದೊಳಗೆ ನಿಮ್ಮ ಪ್ಯಾನ್-ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನ ನಿಷ್ಕ್ರಿಯಗೊಳ್ಳುತ್ತದೆ. ಪ್ಯಾನ್ ನಿಷ್ಕ್ರಿಯಗೊಂಡರೆ ಏನೆಲ್ಲಾ ಅನಾನುಕೂಲಗಳಾಗಲಿವೆ ತಿಳಿಯಿರಿ...
>> ಪ್ಯಾನ್ ನಿಷ್ಕ್ರಿಯಗೊಂಡರೆ I-T ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ
>> ಪ್ಯಾನ್ ನಿಷ್ಕ್ರಿಯಗೊಂಡರೆ ಬಾಕಿಯಿರುವ ರಿಟರ್ನ್‌ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ.
>> ಐಟಿ ಮರುಪಾವತಿ ಸ್ಥಗಿತಗೊಳ್ಳಬಹುದು.
>> ಇವೆಲ್ಲದರ ಜೊತೆಗೆ ಹಣಕಾಸಿನ ವಹಿವಾಟಿನಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.