ಮುಂಬೈ: ಯಾವುದಾದರೂ ಮುಖ್ಯ ಕೆಲಸಕ್ಕಾಗಿ ತರಾತುರಿಯಲ್ಲಿ ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಹೋದಾಗ ಎಟಿಎಂ ಯಂತ್ರದಲ್ಲಿ ಹಣವೇ ಇರುವುದಿಲ್ಲ. ಇದು ಹೊಸದೇನಲ್ಲ. ಒಂದಲ್ಲಾ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಇಂತಹ ಕಹಿ ಅನುಭವ ಆಗಿಯೇ ಇರುತ್ತದೆ. ಸರಿಯಾದ ಸಮಯಕ್ಕ ಕೈಯಲ್ಲಿ ಹಣ ಇಲ್ಲದಿದ್ದರೆ ಅನೇಕ ಬಾರಿ ಜನರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾರ್ವಜನಿಕರ ಈ ಸಮಸ್ಯೆಯನ್ನು ಮನಗಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಹೊಸ ನಿಯಮದ ಪ್ರಕಾರ, ಎಟಿಎಂನಲ್ಲಿ ನಗದು ಇಲ್ಲದಿದ್ದರೆ, ಅದರ ಹೊಣೆಯನ್ನು ಬ್ಯಾಂಕ್ ಭರಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಅಕ್ಟೋಬರ್ 1 ರಿಂದ ಹೊಸ ನಿಯಮ ಅನ್ವಯವಾಗಲಿದೆ:
ಅಕ್ಟೋಬರ್ 1, 2021 ರಿಂದ, ಆರ್‌ಬಿಐ (RBI) ಬ್ಯಾಂಕುಗಳ ಎಟಿಎಂಗಳು ತಿಂಗಳಲ್ಲಿ ಒಟ್ಟು 10 ಗಂಟೆಗಳಿಗಿಂತ ಹೆಚ್ಚು ಕಾಲ ಖಾಲಿಯಾಗಿದ್ದರೆ ದಂಡ ವಿಧಿಸಲು ಆರಂಭಿಸುತ್ತದೆ. ನಿಗದಿತ ಸಮಯದಲ್ಲಿ ಎಟಿಎಂ ನಗದು ತುಂಬದಿದ್ದರೆ, ಬ್ಯಾಂಕ್ ಮೇಲೆ ದಂಡ ವಿಧಿಸಲಾಗುವುದು ಎಂದು ಆರ್‌ಬಿಐ ಸುತ್ತೋಲೆಯಲ್ಲಿ ಹೇಳಿದೆ. 


ಇದನ್ನೂ ಓದಿ- Post Office: ಅಂಚೆ ಕಚೇರಿಯ ಯಾವ ಯೋಜನೆಯಲ್ಲಿ ಹಣ ದ್ವಿಗುಣಗೊಳ್ಳುತ್ತದೆ?


ವಾಸ್ತವವಾಗಿ, ಎಟಿಎಂಗಳ ಮೂಲಕ ಸಾರ್ವಜನಿಕರಿಗೆ ಸಾಕಷ್ಟು ನಗದು ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಆರ್‌ಬಿಐ ಈ ಕ್ರಮ ಕೈಗೊಂಡಿದೆ. ಎಟಿಎಂಗಳ (ATM) ಕ್ಯಾಶ್ ಔಟ್ ಕಾರಣದಿಂದಾಗಿ ಸ್ಥಗಿತಗೊಂಡ ಸಮಯವನ್ನು ಪರಿಶೀಲಿಸಿದ ನಂತರ ಆರ್‌ಬಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ- Knowledge: ಸಿಮ್‌ನಿಂದ ಪಿಡಿಎಫ್‌ವರೆಗೆ ಇವುಗಳ ಫುಲ್ ಫಾರ್ಮ್ ನಿಮಗೆ ತಿಳಿದಿದೆಯೇ?


ಬ್ಯಾಂಕಿನ ಮೇಲೆ ಎಷ್ಟು ದಂಡ ವಿಧಿಸಲಾಗುವುದು?
ಆರ್‌ಬಿಐ ಪ್ರಕಾರ, ತಿಂಗಳಲ್ಲಿ 10 ಗಂಟೆಗಳಿಗಿಂತ ಹೆಚ್ಚು ಕಾಲ ಎಟಿಎಂನಲ್ಲಿ ನಗದು ಇಲ್ಲದಿದ್ದರೆ, ಆ ಸಂದರ್ಭದಲ್ಲಿ ಸಂಬಂಧಿತ ಬ್ಯಾಂಕಿಗೆ 10,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ವೈಟ್ ಲೇಬಲ್ ಎಟಿಎಂಗಳ ಸಂದರ್ಭದಲ್ಲಿ, ಬ್ಯಾಂಕುಗಳಿಗೆ ದಂಡವನ್ನು ವಿಧಿಸಲಾಗುತ್ತದೆ. ಎಟಿಎಂನಲ್ಲಿ ನಗದು ಹಾಕಲು ಬ್ಯಾಂಕ್ ಯಾವುದೇ ಕಂಪನಿಗಳ ಸೇವೆಗಳನ್ನು ತೆಗೆದುಕೊಳ್ಳುತ್ತಿದ್ದರೆ, ಆಗಲೂ ಬ್ಯಾಂಕ್ ಸ್ವತಃ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ನಂತರ ಬ್ಯಾಂಕ್ ಆ ಬಿಳಿ ಲೇಬಲ್ ಎಟಿಎಂ ಕಂಪನಿಗೆ ದಂಡ ವಿಧಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ