ಬ್ಯಾಂಕ್ ಸಿಬ್ಬಂದಿಗೆ RBI ಗಿಫ್ಟ್ : ಪ್ರತಿ ವರ್ಷ ಸಿಗಲಿದೆ ಹತ್ತು ದಿನಗಳ ಸರ್ಪ್ರೈಜ್ ರಜೆ

ಆರ್‌ಬಿಐನ 2015 ರ ಸುತ್ತೋಲೆಯ ಪ್ರಕಾರ, ಟ್ರೆಸರಿ ಆಪರೇಷನ್, ಕರೆನ್ಸಿ, ರಿಸ್ಕ್ ಮಾಡೆಲಿಂಗ್, ಮಾಡೆಲ್ ವಾಲಿಡೆಶನ್   ವಿಭಾಗಗಳೆಂದರೆ, ಅತಿ ಸೂಕ್ಷ್ಮ ವಿಭಾಗಗಳು ಎಂದರ್ಥ. ಈ ವಿಭಾಗಗಳಲ್ಲಿ ಕೆಲಸ ಮಾಡುವವರು ಈ ರಜೆ ಪಡೆಯಲು ಅರ್ಹರಾಗಿರುತ್ತಾರೆ. 

Written by - Ranjitha R K | Last Updated : Aug 10, 2021, 01:34 PM IST
  • ಬ್ಯಾಂಕ್ ಉದ್ಯೋಗಿಗಳಿಗೆ ಒಳ್ಳೆಯ ಸುದ್ದಿ
  • ಪ್ರತಿ ವರ್ಷ 10 ದಿನಗಳ ರಜೆ ನೀಡಲಾಗುವುದು
  • ಆದೇಶ ಹೊರಡಿಸಿರುವ ಆರ್‌ಬಿಐ
ಬ್ಯಾಂಕ್ ಸಿಬ್ಬಂದಿಗೆ RBI ಗಿಫ್ಟ್ : ಪ್ರತಿ ವರ್ಷ ಸಿಗಲಿದೆ ಹತ್ತು ದಿನಗಳ ಸರ್ಪ್ರೈಜ್ ರಜೆ title=
ಬ್ಯಾಂಕ್ ಉದ್ಯೋಗಿಗಳಿಗೆ ಪ್ರತಿ ವರ್ಷ 10 ದಿನಗಳ ರಜೆ (file photo)

ನವದೆಹಲಿ : RBI Mandatory Leave:ಬ್ಯಾಂಕ್ ಉದ್ಯೋಗಿಗಳಿಗೆ ಒಂದು ಶುಭ ಸುದ್ದಿಯಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಉದ್ಯೋಗಿಗಳಿಗೆ ವಿಶೇಷ ಉಡುಗೊರೆಯೊಂದನ್ನು ಪ್ರಕಟಿಸಿದೆ. ಆರ್‌ಬಿಐ ಆದೇಶದ ಪ್ರಕಾರ, ಸೂಕ್ಷ್ಮ ಸ್ಥಾನಗಳಲ್ಲಿ ಕೆಲಸ ಮಾಡುವ ಬ್ಯಾಂಕರ್‌ಗಳು, ಪ್ರತಿ ವರ್ಷ ಕನಿಷ್ಠ 10 ದಿನಗಳ ಸರ್ಪ್ರೈಜ್ ರಜೆಯನ್ನು ಪಡೆಯಲಿದ್ದಾರೆ. ವಾಣಿಜ್ಯ ಬ್ಯಾಂಕುಗಳಲ್ಲದೆ, ಈ ನಿಯಮವು ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಗೂ ಅನ್ವಯವಾಗುತ್ತದೆ. 

10 ದಿನಗಳ ಅನಿರೀಕ್ಷಿತ ರಜೆ :
ಆರ್‌ಬಿಐನ (RBI) 2015 ರ ಸುತ್ತೋಲೆಯ ಪ್ರಕಾರ, ಟ್ರೆಸರಿ ಆಪರೇಷನ್, ಕರೆನ್ಸಿ, ರಿಸ್ಕ್ ಮಾಡೆಲಿಂಗ್, ಮಾಡೆಲ್ ವಾಲಿಡೆಶನ್   ವಿಭಾಗಗಳೆಂದರೆ, ಅತಿ ಸೂಕ್ಷ್ಮ ವಿಭಾಗಗಳು ಎಂದರ್ಥ. ಈ ವಿಭಾಗಗಳಲ್ಲಿ ಕೆಲಸ ಮಾಡುವವರು ಈ ರಜೆ ಪಡೆಯಲು ಅರ್ಹರಾಗಿರುತ್ತಾರೆ. ಅವರಿಗೆ 'Mandatory Leave' ಅಡಿಯಲ್ಲಿ ಪ್ರತಿ ವರ್ಷ 10 ದಿನಗಳ ರಜೆ ನೀಡಲಾಗುತ್ತದೆ. ಈ ನಿಯಮದ ಪ್ರಕಾರ, ಈ ರಜಾದಿನಗಳ ಬಗ್ಗೆ ಮುಂಚಿತವಾಗಿ ತಿಳಿಸಿರುವುದಿಲ್ಲ. 

ಇದನ್ನೂ ಓದಿ :  PM Kisan: ಇನ್ನೂ ನಿಮ್ಮ ಖಾತೆಗೆ 2000 ರೂ. ಬಂದಿಲ್ಲವೇ? ಈ ಸಂಖ್ಯೆಗೆ ದೂರು ನೀಡಿ, ತಕ್ಷಣ ಲಾಭ ಪಡೆಯಿರಿ

ಆದೇಶ ಹೊರಡಿಸಿದ ಆರ್‌ಬಿಐ :
ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಸೇರಿದಂತೆ ಬ್ಯಾಂಕುಗಳಿಗೆ ಕಳುಹಿಸಿದ ಮಾಹಿತಿಯಲ್ಲಿ,  RBI Modified Risk Management Guidelines ಅಡಿಯಲ್ಲಿ ಅನಿರೀಕ್ಷಿತ ರಜಾದಿನಗಳನ್ನು ನೀಡುವ ನೀತಿಯನ್ನು ತಯಾರಿಸಲು ಆರ್‌ಬಿಐ ಕೇಳಿದೆ. ಬ್ಯಾಂಕುಗಳು ತಮ್ಮ ನಿರ್ದೇಶಕರ ಮಂಡಳಿಯ ಅನುಮೋದಿತ ನೀತಿಯ ಪ್ರಕಾರ, ಸೂಕ್ಷ್ಮ ಹುದ್ದೆಗಳ ಪಟ್ಟಿಯನ್ನು ತಯಾರಿಸಲು ಮತ್ತು ಕಾಲಕಾಲಕ್ಕೆ ಪಟ್ಟಿಯನ್ನು ಪರಿಶೀಲಿಸುವಂತೆ ಹೇಳಲಾಗಿದೆ. ಆರು ತಿಂಗಳಲ್ಲಿ ಪರಿಷ್ಕೃತ ಸೂಚನೆಗಳನ್ನು ಪಾಲಿಸುವಂತೆ ಆರ್‌ಬಿಐ ಬ್ಯಾಂಕುಗಳಿಗೆ (Bank) ಸೂಚಿಸಿದೆ.

ಈ ರಜೆಯ ಅಡಿಯಲ್ಲಿ, ಬ್ಯಾಂಕ್ ಉದ್ಯೋಗಿ (Bank employee) ಆಂತರಿಕ/ಕಾರ್ಪೊರೇಟ್ ಇಮೇಲ್ ಹೊರತುಪಡಿಸಿ ಯಾವುದೇ ರೀತಿಯ  ಕೆಲಸವನ್ನು ಮಾಡಬೇಕಾಗಿಲ್ಲ. ಆಂತರಿಕ/ಕಾರ್ಪೊರೇಟ್ ಇಮೇಲ್ ಸೌಲಭ್ಯವು ಸಾಮಾನ್ಯ ಉದ್ದೇಶಕ್ಕಾಗಿ ಬ್ಯಾಂಕ್ ಉದ್ಯೋಗಿಗಳಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ : Indian Railways: ರೈಲು ಪ್ರಯಾಣದಲ್ಲಿ ಹಠಾತ್ ಬದಲಾವಣೆ? ಟಿಕೆಟ್ ರದ್ದುಗೊಳಿಸದೆ ಪ್ರಯಾಣದ ದಿನಾಂಕವನ್ನು ಬದಲಾಯಿಸಿ

ಕಡ್ಡಾಯ ರಜೆಯ ನೀತಿ ಅಪ್‌ಗ್ರೇಡ್ :
ಆರ್‌ಬಿಐ ಏಪ್ರಿಲ್ 2015 ರಲ್ಲಿ ತನ್ನ ಹಿಂದಿನ ಮಾರ್ಗಸೂಚಿಗಳಲ್ಲಿ ಈ ರಜೆಯ ದಿನಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸಿಲ್ಲ. ಆದರೂ ಇದು 10 ಕೆಲಸದ ದಿನಗಳಷ್ಟು ಆಗಿರಬಹುದು ಎಂದು ಹೇಳಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
 

Trending News