ನವದೆಹಲಿ : ನೀವು ವೇತನ ಪಡೆಯುವ ವರ್ಗಕ್ಕೆ ಸೇರಿದವರಾಗಿದ್ದು, EPFO ​​ಸದಸ್ಯರಾಗಿದ್ದರೆ, 7 ಲಕ್ಷ ದವರೆಗೆ ಉಚಿತ ಜೀವ ವಿಮೆಯ ಸೌಲಭ್ಯವನ್ನು ಪಡೆಯಬಹುದು. EPFO ತನ್ನ ಎಲ್ಲಾ ಚಂದಾದಾರರಿಗೆ ಉದ್ಯೋಗಿಗಳ ಡಿಪೋಸಿಟ್  ಲಿಂಕ್ಡ್ ಇನ್ಶೂರೆನ್ಸ್ ಸ್ಕೀಮ್ 1976 ಜೀವವಿಮೆಯ ಸೌಲಭ್ಯವನ್ನು ಒದಗಿಸುತ್ತದೆ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳು ಕೂಡಾ, ಈ ಸೌಲಭ್ಯದ ಲಾಭವನ್ನು ಪಡೆಯಬಹುದು. .


COMMERCIAL BREAK
SCROLL TO CONTINUE READING

ಏಪ್ರಿಲ್‌ನಲ್ಲಿ ಮೊತ್ತದ ಹೆಚ್ಚಳ : 
EDLI ಯೋಜನೆಯಡಿ ನೀಡಲಾದ ವಿಮಾ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಮೊದಲು, ಇದರಲ್ಲಿ ಗರಿಷ್ಠ ಮೊತ್ತದ ವಿಮಾ ರಕ್ಷಣೆಯು 6 ಲಕ್ಷ ರೂಪಾಯಿಗಳಷ್ಟಿತ್ತು. ಇದನ್ನು 7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ವಿಮಾ ಮೊತ್ತವನ್ನು (insurance)  7 ಲಕ್ಷಕ್ಕೆ ಹೆಚ್ಚಿಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಏಪ್ರಿಲ್ 28 ರಂದು ಅಧಿಸೂಚನೆಯನ್ನು ಹೊರಡಿಸಿದೆ. ಮಿತಿ ಹೆಚ್ಚಳ ಕೂಡಾ, ಏಪ್ರಿಲ್ 28ರಿಂದ ಅನ್ವಯವಾಗಲಿದೆ. 


ಇದನ್ನೂ ಓದಿ : Central Govt Additional Pension Scheme : ಕೇಂದ್ರ ಸರ್ಕಾರದ ಹೆಚ್ಚುವರಿ ಪಿಂಚಣಿ ಯೋಜನೆ : ನೀವು ತಿಂಗಳಿಗೆ ಗರಿಷ್ಠ 1,25,000 ಪಿಂಚಣಿ ಪಡೆಯುವುದು! ಹೇಗೆ?


ಈ ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿರಲಿದೆ : 
ಈ ಯೋಜನೆಗಳ ಅಡಿಯಲ್ಲಿ, ಉದ್ಯೋಗಿಯು ತನ್ನ ನಾಮಿನಿಯನ್ನು ಸೂಚಿಸಬೇಕು. ಕಾರ್ಮಿಕನ ಸಾವಿನ ಸಂದರ್ಭದಲ್ಲಿ, ನಾಮಿನಿಯು (nominees) ವಿಮಾ ಮೊತ್ತವನ್ನು ಪಡೆಯುತ್ತಾನೆ.  ಬದಲಾದ ನಿಯಮಗಳ ಅಡಿಯಲ್ಲಿ, ಸಾವಿಗೆ ಒಂದು ವರ್ಷದ ಮೊದಲು ಒಂದಕ್ಕಿಂತ ಹೆಚ್ಚು ಕಂಪನಿಯಲ್ಲಿ ಕೆಲಸ ಮಾಡಿದ ಉದ್ಯೋಗಿಯ ಕುಟುಂಬಕ್ಕೂ ಈ ಸೌಲಭ್ಯ ಸಿಗಲಿದೆ.  


ಈ ಸೌಲಭ್ಯವನ್ನು ಪಡೆಯಲು ಉದ್ಯೋಗಿ ಯಾವುದೇ ಮೊತ್ತ ಅಥವಾ ಪ್ರೀಮಿಯಂ ಅನ್ನು ಪಾವತಿಸಬೇಕಾಗಿಲ್ಲ. ಒಂದು ವೇಳೆ ಉದ್ಯೋಗಿಯು ತನ್ನ ನಾಮಿನಿಯನ್ನು ಸೂಚಿಸಿರದಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸತ್ತವರ ಪತ್ನಿ, ಅವಿವಾಹಿತ ಮಗಳು ಅಥವಾ ಅಪ್ರಾಪ್ತ ಮಗು ವಿಮೆಯ ಕವರ್ (insurance cover) ಸಿಗುತ್ತದೆ. 


ಇದನ್ನೂ ಓದಿ : Bumper Offer! LPG ಬುಕಿಂಗ್ ಮೇಲೆ ಪಡೆಯಿರಿ 2700 ರೂಪಾಯಿಗಳ ಲಾಭ ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ