ನವದೆಹಲಿ : IDFC First Bank latest news: ಬ್ಯಾಂಕಿನಲ್ಲಿ ಖಾತೆ ತೆರೆಯುವಾಗ ಅನೇಕ ವಿಷಯಗಳನ್ನು ಹೆಚ್ಚಾಗಿ ನೋಡಿಕೊಳ್ಳಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯುವ ಮೊದಲು, ಬಡ್ಡಿದರದಿಂದ ಹಿಡಿದು, ಬ್ಯಾಂಕ್ ನೀಡುವ ಎಲ್ಲಾ ಸೌಲಭ್ಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಉಳಿತಾಯ ಖಾತೆಯಲ್ಲಿ ಗ್ರಾಹಕರಿಗೆ ನೀಡುವ ಸೌಲಭ್ಯಗಳು ಬ್ಯಾಂಕ್ ನಿಂದ ಬ್ಯಾಂಕ್ ಗೆ ಬದಲಾಗುತ್ತದೆ. ಕೆಲವು ಬ್ಯಾಂಕ್ ಗಳು ಹೆಚ್ಚಿನ ಬಡ್ಡಿದರವನ್ನು (Interest rate) ನೀಡಿದರೆ, ಇನ್ನು ಕೆಲವು ಕಡಿಮೆ ಬಡ್ಡಿಯನ್ನು ನೀಡುತ್ತದೆ.
ಕೆಲವರು ಖಾತೆ ತೆರೆಯುವ ಅವಸರದಲ್ಲಿ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಇದಾದ ನಂತರ ಸಮಸ್ಯೆಗಳು ಎದುರಾದಾಗ ವಿಷಾದ ವ್ಯಕ್ತಪಡಿಸಬೇಕಾಗುತ್ತದೆ. ಇಂದು ನಾವು IDFC FIRST ಬ್ಯಾಂಕಿನ ಉಳಿತಾಯ ಖಾತೆಯ ಬಗ್ಗೆ ಕೆಲವು ಮಾಹಿತಿಯನ್ನು ನೀಡಲಿದ್ದೇವೆ. ಈ ಬ್ಯಾಂಕ್ ನ (Bank) ಉಳಿತಾಯ ಖಾತೆಯಲ್ಲಿ ಹಲವು ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ.
ಇದನ್ನೂ ಓದಿ : ಎಸ್ ಬಿಐ ಮಕ್ಕಳಿಗಾಗಿ ತಂದಿದೆ Pehla Kadam Pehli Udaan ಉಳಿತಾಯ ಖಾತೆ ಸಿಗಲಿದೆ ಇಷ್ಟು ಸೌಲಭ್ಯ
IDFC FIRST Bankನಲ್ಲಿ ಖಾತೆ ತೆರೆದರೆ ಸಿಗಲಿದೆ ಅದ್ಭುತ ಪ್ರಯೋಜನಗಳು :
IDFC FIRST ಬ್ಯಾಂಕ್ ದೇಶದ ಇತರ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರಗಳನ್ನು (Interest rate) ನೀಡುತ್ತದೆ. ಈ ಬ್ಯಾಂಕ್ ತನ್ನ ಖಾತೆದಾರರಿಗೆ ಒಂದು ವರ್ಷದಲ್ಲಿ ಶೇಕಡಾ 5.50 ರಷ್ಟು ಬಡ್ಡಿಯನ್ನು ನೀಡುತ್ತದೆ. ಆನ್ಲೈನ್ನಲ್ಲಿ ಸುಲಭವಾಗಿ ಈ ಖಾತೆಯನ್ನು ತೆರೆಯಬಹುದು. ಈ ವರ್ಷದಿಂದ IDFC FIRST ಬ್ಯಾಂಕಿನ ಉಳಿತಾಯ ಖಾತೆಯಲ್ಲಿ 6 ಲಕ್ಷ ರೂ.ಗಳ ಖರೀದಿ ಮಿತಿಯನ್ನು ನೀಡಲಾಗುತ್ತಿದೆ. ಪ್ರತಿದಿನ ಎಟಿಎಂನಿಂದ (ATM) ಎರಡು ಲಕ್ಷ ರೂಪಾಯಿಗಳನ್ನು ತೆಗೆಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಒಂದು ಕೋಟಿಯ ಉಚಿತ ವಿಮೆ :
ಈ ಬ್ಯಾಂಕ್ ತನ್ನ ಖಾತೆದಾರರಿಗೆ ಒಂದು ಕೋಟಿ ರೂಪಾಯಿಯ ಉಚಿತ ವಿಮೆಯನ್ನು (Insurance) ಒದಗಿಸುತ್ತದೆ. ವಿಮಾನ ಅಪಘಾತದಲ್ಲಿ ಖಾತೆದಾರನು ಸತ್ತರೆ, ನಾಮಿನಿಗೆ ಒಂದು ಕೋಟಿ ರೂಪಾಯಿಗಳನ್ನು ನೀಡಲಾಗುತ್ತದೆ. ಮೇ 1, 2019 ರಿಂದ ಈ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು ಕೆಲವು ನಿಯಮಗಳನ್ನು ಸೇರಿಸಲು ಬ್ಯಾಂಕ್ ಕೆಲಸ ಮಾಡಿದೆ. ಒಂದು ವೇಳೆ ಗ್ರಾಹಕನು ಒಂದಕ್ಕಿಂತ ಹೆಚ್ಚು ಡೆಬಿಟ್ ಕಾರ್ಡ್ಗಳನ್ನು (Debit card) ಹೊಂದಿದ್ದರೆ, ಹೆಚ್ಚಿನ ಸಂಖ್ಯೆಯ ವಹಿವಾಟುಗಳಿಗಾಗಿ ಬಳಸಿದ ಡೆಬಿಟ್ ಕಾರ್ಡ್ ಬಳಸಿದ ಖಾತೆಯ ನಾಮಿನಿಗೆ ವಿಮಾ ಹಣವನ್ನು ಪಾವತಿಸಲಾಗುತ್ತದೆ.
ಇದನ್ನೂ ಓದಿ : Paytm: ಈ ಬ್ಯಾಂಕಿನ ಗ್ರಾಹಕರು ಎಫ್ಡಿ ಖಾತೆಯಿಂದ ತ್ವರಿತ ಪೇಮೆಂಟ್ ಮಾಡಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ